Advertisement

ಬೋಳ ಗ್ರಾಮಕ್ಕೆ ಹಾರಿಬಂದ ನಿಗೂಢ ಬಲೂನ್: ಬೆಚ್ಚಿಬಿದ್ದ ಜನ; ಅದೇನು ಗೊತ್ತಾ?

10:13 AM Nov 17, 2019 | keerthan |

ಬೆಳ್ಮಣ್: ಬಿಳಿ ಬಣ್ಣದ ದೊಡ್ಡದೊಂದು ಬಲೂನ್, ಅದರಲ್ಲೊಂದು ಉಪಕರಣ, ಒಳಗಡೆ ಏನೊ ಚಿಪ್ ನಂತಹ ವಸ್ತು. ಬೆಳ್ಳಂಬೆಳಗ್ಗೆ ಮನೆಯ ಬಳಿಯ ತೋಟದಲ್ಲಿ ಇದನ್ನು ಕಂಡ ಆ ಮನೆ ಮಂದಿಗೆ ಆತಂಕ. ಏನೋ ಪ್ಯಾರಾಚೂಟ್ ಬಂದು ನಮ್ಮ ಮನೆಗೆ ಬಿದ್ದಿದೆ. ಬಿದ್ದಿದ್ದು ಎನು ಎನ್ನುವುದೂ ಗೊತ್ತಿಲ್ಲದೆ ಬಾಂಬ್ ನಂತಹ ಸಿಡಿಯುವ ವಸ್ತು ಇರಬಹುದಾ ಎಂಬ ಭಯ!

Advertisement

ಇದೆಲ್ಲಾ ಕಂಡು ಬಂದಿದ್ದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ. ಇಲ್ಲಿನ ನಿವಾಸಿ ಕಿಶೋರ್ ಅವರ ಮನೆಯ ತೋಟದಲ್ಲಿ ದೊಡ್ಡ  ಬಿಳಿ ಬಣ್ಣದ ಬಲೂನ್ ನೇತಾಡುತ್ತಿತ್ತು.

ಅದರ ರಿಸಿವರ್ ನಂತಹ ಉಪಕರಣ ಮಾತ್ರ ನೆಲದಲ್ಲಿ ನೆಲಕ್ಕೆ ಬಿದ್ದಿತ್ತು. ಇದೇನೋ ವಿಚಿತ್ರ ಎಂಬಂತೆ ನೋಡಲು ಜನರೂ ಬರುತ್ತಿದ್ದರು.

ನಿಜಕ್ಕೂ ಅಲ್ಲೇನಿತ್ತು?

Advertisement

ಬೋಳ ಗ್ರಾಮದ ಕಿಶೋರ್ ಅವರ ಮನೆಯ ಬಳಿ ಬಂದು ಬಿದ್ದಿದ್ದು ಆರ್ ಎಸ್ ಜಿ-20 ಎ ಜಿಪಿಎಸ್ ರೇಡಿಯೋ ಅನ್ವೇಷಕ ಎಂಬ ಸಾಧನ. ಇದನ್ನು ಗಾಳಿಯ ಗುಣಮಟ್ಟ ಅಳೆಯಲು ಬಳಸಲಾಗುತ್ತದೆ.

ದೊಡ್ಡದಾದ ಗಾಳಿ ಬಲೂನಿಗೆ ಅನ್ವೇಷಕ ಉಪಕರಣವನ್ನು ಕಟ್ಟಿ ಗಾಳಿಯಲ್ಲಿ ತೇಲಿ ಬಿಡಲಾಗುತ್ತದೆ. ಇದು ನೆಲದಿಂದ ಮೇಲಕ್ಕೆ ಹಾರಾಡುತ್ತಾ ವಿವಿಧ ಸ್ಥರಗಳ ಹವಾಮಾನ, ಗಾಳಿಯ ವೇಗ, ಉಷ್ಣಾಂಶ, ಆದ್ರತೆ, ಗಾಳಿಯ ಒತ್ತಡವನ್ನು ಲೆಕ್ಕಾಚಾರ ಹಾಕಿ ತನ್ನ ಕೇಂದ್ರಕ್ಕೆ ಕಳುಹಿಸಿಕೊಡುತ್ತದೆ.

ಕರ್ನಾಟಕದ ಎರಡು ಕಡೆ ಈ ಉಪಕರಣವನ್ನು ಹಾರಿ ಬಿಡಲಾಗುತ್ತದೆ. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮಾತ್ರ ಈ ಉಪಕರಣ ಹಾರಿ ಬಿಟ್ಟು ಮಾಹಿತಿ ಸಂಗ್ರಹಿಸುವ ಹವಾಮಾನ ಇಲಾಖೆಗೆ ಸೇರಿದ ಕೇಂದ್ರವಿದೆ.

ದೇಶವ್ಯಾಪಿಯಾಗಿ ಒಟ್ಟು 36 ಹವಾಮಾನ ಕೇಂದ್ರಗಳಿದ್ದು, ಏಕಕಾಲದಲ್ಲಿ ಬೆಳಿಗ್ಗೆ 4.30ಕ್ಕೆ ಈ ಉಪಕರಣವನ್ನು ಹಾರಿಬಿಡಲಾಗುತ್ತದೆ. ಈ ಮೂಲಕ ಮಾಹಿತಿ ಪಡೆದುಕೊಳ್ಳಲಾಗುತ್ತದೆ.

ಜನವಸತಿ ಪ್ರದೇಶದಲ್ಲಿ ಯಾಕೆ ಬೀಳುತ್ತದೆ?

ಸಾಮಾನ್ಯವಾಗಿ ಈ ಉಪಕರಣಗಳು ಸಮುದ್ರ ಅಥವಾ ಜನವಸತಿ ರಹಿತ ಸ್ಥಳಗಳಲ್ಲಿ ಪತನಗೊಳ್ಳುತ್ತದೆ. ಅಪರೂಪದ ಪ್ರಕರಣಗಳಲ್ಲಿ ಮಾತ್ರ ಹೀಗೆ ಜನವಸತಿ ಕೇಂದ್ರಗಳಲ್ಲಿ ಬೀಳುತ್ತದೆ. ಈ ಹಿಂದೆ ಮಂಗಳೂರಿನ ನಂತೂರು, ಎಡ್ತೂರಿನಲ್ಲೂ ಇದೇ ರೀತಿ ಜನವಸತಿ ಕೇಂದ್ರದಲ್ಲಿ ಪತನವಾಗಿ ಆತಂಕ ಸೃಷ್ಟಿಯಾಗಿತ್ತು.

 

ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು, ಗ್ರಾಮ ಕಂದಾಯ ನಿರೀಕ್ಷಕರು ಭೇಟಿ ನೀಡಿದರು. ನಂತರ ಕಂದಾಯ ಇಲಾಖೆಗೆ ಹಸ್ತಾಂತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next