Advertisement
ಗುರುವಾರ ಪಾಲಿಕೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಿನ ಶುಲ್ಕ ಪಾವತಿಗೆ ಬಾಕಿ ಇರುವುದರಿಂದ ಆದಾಯದ ಕೊರತೆ ಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗುತ್ತಿದೆ. ಆದ್ದರಿಂದ ಸಾರ್ವ ಜನಿಕರು ಪ್ರಾಮಾಣಿಕವಾಗಿ ತಮ್ಮ ನೀರಿನ ಶುಲ್ಕವನ್ನು ಪಾವತಿಸಬೇಕು ಎಂದರು.
ನಾನು ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಳೆದ ಮಾರ್ಚ್‌ನಿಂದ ನೀರಿನ ಶುಲ್ಕ ಪಾವತಿಗೆ ಸಂಬಂಧಿಸಿ ಕಾರ್ಯಾಚರಣೆ ಮಾಡಿ ಹಲವಾರು ವರ್ಷಗಳಿಂದ ಬಾಕಿ ಇದ್ದ ಸುಮಾರು 2,000 ನೀರಿನ ಸಂಪರ್ಕಗಳನ್ನು ಕಡಿತ ಗೊಳಿಸಲಾಗಿದೆ. ಇದರಿಂದಾಗಿ ಅಲ್ಲಿಯವರೆಗೆ 22,37,84,730 ಕೋಟಿ ರೂ.ಗಳಾಗಿದ್ದ ಬಾಕಿ ಮೊತ್ತ ಇದೀಗ 20 ಕೋಟಿ ರೂ.ಗಳಿಗೆ ಇಳಿಕೆ ಯಾಗಿದೆ. ಇದೀಗ ಮತ್ತೆ ಸಾರ್ವ ಜನಿಕ ರಿಗೆ 15 ದಿನಗಳ ಕಾಲಾವ ಕಾಶದ ಮೂಲಕ ಬಾಕಿ ಮೊತ್ತ ವನ್ನು ಪಾವತಿಸಲು ಅವಕಾಶ ನೀಡ ಲಾಗು ತ್ತದೆ. ಇದಕ್ಕೆ ಪ್ರತಿಕ್ರಿಯೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಬಾಕಿದಾರರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟ ಮಾಡ ಲಾಗುವುದು ಎಂದವರು ಹೇಳಿದರು. ಮಸಾಜ್ ಸೆಂಟರ್ ಆದ ಸೆಲೂನ್
ಬಲ್ಮಠ ರಸ್ತೆಯಲ್ಲಿರುವ ಸೆಲೂನ್ ಸೆಂಟರ್‌ಗೆ ದಾಳಿ ನಡೆಸಿರುವುದನ್ನು ಪ್ರಶ್ನಿಸಿ ಆಯುಕ್ತರು, ಮೇಯರ್‌ಗೆ
ಠೇವಣಿ ಇಡಲು ಹೈಕೋರ್ಟ್ ಆದೇಶಿ ಸಿದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮೇಯರ್, ಬುಧ ವಾರ ನ್ಯಾಯಾಲಯದಲ್ಲಿ ವಿಚಾ ರಣೆಗೆ ಹಾಜ ರಾಗಬೇಕೆಂಬ ನೋಟಿಸ್ ಬುಧವಾರ ಸಂಜೆಯ ವೇಳೆಗೆ ನನ್ನ ಕಚೇರಿಗೆ ತಲುಪಿದೆ. ಅಷ್ಟು ಹೊತ್ತಿ ಗಾಗಲೇ ಬೆಂಗಳೂರಿನಲ್ಲಿ ಕೋರ್ಟ್ ಕಲಾಪ ಕೂಡ ಮುಗಿದಿತ್ತು. ಮಾತ್ರವಲ್ಲದೆ ಆಯುಕ್ತರಿಗೂ ನೋಟಿಸ್ ಬುಧವಾರ ಸಂಜೆಯ ವೇಳೆಗೆ ಕಚೇರಿಗೆ ರವಾನೆಯಾಗಿತ್ತು. ನೋಟಿಸ್ ಕೋರ್ಟ್‌ನಿಂದ ಆ. 7ರಂದು ರವಾನೆ ಗೊಂಡಿದ್ದು, ಆ. 9ರಂದು ಸಂಜೆ ಕಚೇರಿ ತಲುಪಿದೆ. ನೋಟಿಸ್ ಮುಂಚಿತವಾಗಿ ದೊರಕಿರು ತ್ತಿದ್ದರೆ ಅವರು ಮತ್ತು ನಾನು ವಿಚಾ ರಣೆಗೆ ಹಾಜರಾಗುತ್ತಿದ್ದೆವು. ಜತೆಗೆ ಸೆಲೂನ್‌ಗಾಗಿ ಮನಪಾದಿಂದ ಪರ ವಾನಿಗೆ ಪಡೆದಿದ್ದರೂ ಅಲ್ಲಿ ನಮ್ಮ ಮನಪಾ ತಂಡ ಭೇಟಿ ನೀಡಿದ ವೇಳೆ ಅದು ಮಸಾಜ್ ಸೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದುದು ಸ್ಪಷ್ಟ ಗೊಂಡಿದೆ ಎಂದರು.
Related Articles
Advertisement
1 ಸಂಪರ್ಕ; 7.47 ಲಕ್ಷ ರೂ. ಬಾಕಿ !ಗೃಹ ಬಳಕೆಗೆ ಸಂಬಂಧಿಸಿ ನಗರದಲ್ಲಿ ಒಂದು ಸಂಪರ್ಕದಿಂದ ಬರೋಬ್ಬರಿ 7,47,000 ರೂ. ನೀರಿನ ಬಿಲ್ ಬಾಕಿ ಇದೆ. 2004ರಿಂದ ಈ ಸಂಪರ್ಕ ದಿಂದ ನೀರಿನ ಮೊತ್ತ ಬಾಕಿ ಉಳಿಸಿಕೊಳ್ಳಲಾಗಿದೆ. ಇನ್ನೊಂದು ಸಂಪರ್ಕದಿಂದ 7,30,000 ರೂ. ನೀರಿನ ಶುಲ್ಕ ಮನಪಾಕ್ಕೆ ಪಾವತಿಗೆ ಬಾಕಿ ಇದೆ. ನಗರದಲ್ಲಿ ಸುಮಾರು 75,000 ನೀರಿನ ಸಂಪರ್ಕಗಳಿದ್ದು,
ಅದರಲ್ಲಿ ಸುಮಾರು 50,000ದಷ್ಟು ಸಂಪರ್ಕಗಳಿಂದ ಶುಲ್ಕ ಪಾವತಿಗೆ ಬಾಕಿ ಇದೆ. ಈ ಪೈಕಿ 166 ಸಂಪರ್ಕಗಳಿಂದ 1 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಶುಲ್ಕ ಪಾವತಿಗೆ ಬಾಕಿಯಿದ್ದರೆ, 50,000 ರೂ.ಗಳಿಂದ 1 ಲಕ್ಷ ರೂ. ವರೆಗಿನ ಬಾಕಿ 350 ಸಂಪರ್ಕಗಳಿಂದ ಇದೆ. 22,780 ಸಂಪರ್ಕಗಳಿಂದ 10,000 ರೂ.ನಿಂದ 50,000 ರೂ. ವರೆಗೆ ಬಾಕಿ ಇದೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.