Advertisement

ಅರ್ಚಕರಿಗೆ 7500 ರೂ. ವೇತನ ಸಾಧ್ಯವಿಲ್ಲ

03:50 AM Jan 19, 2017 | |

ಬೆಂಗಳೂರು: ಅರ್ಚಕರಿಗೆ ಅವರ ಬೇಡಿಕೆಯಂತೆ ಮಾಸಿಕ 7,500 ರೂ.ವೇತನ ನೀಡಲು ಸಾಧ್ಯವಿಲ್ಲ. ಆದರೆ, ಅವರಿಗೆ
ವಾರ್ಷಿಕ ನೀಡುತ್ತಿರುವ ತಸ್ತಿಕ್‌ ಹೆಚ್ಚಳ, ಅರ್ಚಕರ ವರ್ಗಾವಣೆ ಸೇರಿ ಒಕ್ಕೂಟದ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಲಾಗುವುದು
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

Advertisement

ಅಖೀಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟವು ನಗರದಲ್ಲಿ ಬುಧವಾರ ಆಯೋಜಿಸಿದ್ದ ಅರ್ಚಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಅರ್ಚಕರಿಗೆ ಅವರ ಬೇಡಿಕೆಯಂತೆ ಮಾಸಿಕ 7,500 ರೂ. ವೇತನ ನೀಡಲು ಸಾಧ್ಯವಿಲ್ಲ. ಆದರೆ, ಅವರಿಗೆ ವಾರ್ಷಿಕ ನೀಡುತ್ತಿರುವ ತಸ್ತಿಕ್‌ ಹೆಚ್ಚಳ, ಅರ್ಚಕರ ವರ್ಗಾವಣೆ ಸೇರಿ ಒಕ್ಕೂಟದ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

ಕೆಲವು ಕಡೆ ದೇವಸ್ಥಾನಗಳಿಗೆ ಕೆಳ ವರ್ಗದವರಿಗೆ ಪ್ರವೇಶವಿಲ್ಲ, ಮಹಿಳೆಯರಿಗೆ ದೇವಾಲಯಗಳಿಗೆ ಪ್ರವೇಶ ನಿಷಿದಟಛಿ ಎಂಬಿತ್ಯಾದಿ ಅನಿಷ್ಠ ಪದಟಛಿತಿಗಳಿವೆ. ಇದನ್ನು ಹೋಗಲಾಡಿಸಲು ಅರ್ಚಕರು ಕೈ ಜೋಡಿಸಬೇಕು. ಎಲ್ಲವನ್ನೂ ಮಾನವೀಯ ನೆಲಗಟ್ಟಿನ ಮೇಲೆ ಯೋಚಿಸಬೇಕು. ಆ ಮೂಲಕ,ಸಮಾಜದಲ್ಲಿ ಮೇಲ್ವರ್ಗ, ಕೆಳವರ್ಗ ಎಂಬ ತಾರತಮ್ಯ ದೂರವಾಗಿ ಸಮಾನತೆ ಬರಬೇಕು
ಎಂದು ಅಭಿಪ್ರಾಯಪಟ್ಟರು.

ದೇವರು ಮತ್ತು ಭಕ್ತರ ನಡುವೆ ಅರ್ಚಕರು ರಾಯಭಾರಿಗಳಂತೆ ಕೆಲಸ ಮಾಡುತ್ತಾರೆ. ದೇವಸ್ಥಾನಕ್ಕೆ ಬರುವ ನೊಂದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಅರ್ಚಕರು ಮಾಡಬೇಕು. ಅರ್ಚಕರ ಮಕ್ಕಳು ಅರ್ಚಕರೇ ಆಗಬೇಕಿಲ್ಲ. ಅವರು ಕೂಡ ವಿದ್ಯಾವಂತರಾಗಿ ಉನ್ನತ ಹುದ್ದೆ ಪಡೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ನಾನು ನಾಸ್ತಿಕನಲ್ಲ: “ನಾನೊಬ್ಬ ನಾಸ್ತಿಕ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಎಲ್ಲರಂತೆ, ಚಾಮುಂಡಿ ಬೆಟ್ಟಕ್ಕೂ ಹೋಗುತ್ತೇನೆ, ತಿರುಪತಿಗೂ ಹೋಗುತ್ತೇನೆ. ಆದರೂ ನನ್ನನ್ನು ನಾಸ್ತಿಕನಂತೆ ಬಿಂಬಿಸಲಾಗುತ್ತಿದೆ. ನಾಸ್ತಿಕ ಎಂದ ಮಾತ್ರಕ್ಕೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುವುದಿಲ್ಲ ಅಥವಾ ಜಾತ್ಯತೀತ ಎಂದ ಮಾತ್ರಕ್ಕೆ ಧರ್ಮವನ್ನೇ ಬಿಟ್ಟು ಬಿಡಬೇಕು ಎಂದಲ್ಲ. ಜಾತಿ-ಧರ್ಮದ ಬಗ್ಗೆ ಸಹಿಷ್ಣುತಾಭಾವ ಇರಬೇಕು’ ಎಂದರು.

Advertisement

ತಸ್ತಿಕ್‌ 30 ಸಾವಿರ ರೂ.ಗೆ ಹೆಚ್ಚಳ: ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಅರ್ಚಕರಿಗೆ ವಾರ್ಷಿಕ ನೀಡುವ
24,000 ರೂ.ತಸ್ತಿಕ್‌ನ್ನು 30 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಜತೆಗೆ, ಅರ್ಚಕರಿಗೆ ಜೀವ ವಿಮೆ ಜಾರಿಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಅಲ್ಲದೆ, “ಸಿ’ ವರ್ಗದ ಅರ್ಚಕರ ಸಂಭಾವನೆ ಹೆಚ್ಚಳ ಸೇರಿ ಒಕ್ಕೂಟದ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಲಾಗುವುದೆಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next