ಕೊಟಿ ರೂ. ಡೀಲ್ ಮಾಡಿದೆ. ಈಗ ಸಮ್ಮಿಶ್ರ ಸರಕಾರ ಅದನ್ನೇ ಕಾರ್ಯರೂಪಕ್ಕೆ ತರಲು ಮುಂದಾಗಿದೆ” ಎಂದು
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
Advertisement
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ಸಮವಸ್ತ್ರ ವಿತರಣೆಯ ಹಿಂದಿನ ನಿಯಮಗಳನ್ನು ಉಲ್ಲಂ ಸಿಡೀಲ್‌ಗೆ ಮುಂದಾಗಿತ್ತು. ಈಗ ಸಮ್ಮಿಶ್ರ ಸರಕಾರ ಅದನ್ನೇ ಮುಂದುವರಿಸಲು ಮುಂದಾಗಿದೆ. ಅದನ್ನು ಕೈ ಬಿಟ್ಟು ಹೊಸ ಪ್ರಕ್ರಿಯೆ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು. ಈ ಹಿಂದೆ ಎಸ್‌ಡಿಎಂ ವತಿಯಿಂದ ಬಟ್ಟೆ ಖರೀದಿಸಿ, ಸ್ಥಳೀಯವಾಗಿ ಹೊಲಿಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕೊಡಲಾಗುತ್ತಿತ್ತು. ಅಲ್ಲದೇ,175 ತಾಲೂಕುಗಳಲ್ಲಿ ಸುಮಾರು 8ಲಕ್ಷ ಜನರಿಗೆ ಉದ್ಯೋಗ ದೊರೆಯುತ್ತಿತ್ತು. ಆದರೆ ಸಿದ್ದರಾಮಯ್ಯ ಅವರು ಈ ವ್ಯವಸ್ಥೆಯನ್ನು ಬುಡಮೇಲು ಮಾಡಿ, ವ್ಯತಿರಿಕ್ತ ನಿರ್ಧಾರ ತೆಗೆದುಕೊಂಡಿದ್ದರು ಎಂದು ಆರೋಪಿಸಿದರು.