Advertisement

ಸೇನೆಯ ಆಧುನೀಕರಣಕ್ಕೆ 9.32 ಲಕ್ಷ ಕೋಟಿ ರೂ.

09:42 AM Sep 11, 2019 | Team Udayavani |

ಹೊಸದಿಲ್ಲಿ: ದಿನದಿಂದ ದಿನಕ್ಕೆ ನೆರೆಯ ಪಾಕಿಸ್ಥಾನ ಭಾರತಕ್ಕೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಸೇನೆಯ ಆಧುನೀಕರಣಕ್ಕೆ ಮುಂದಾಗಿದ್ದು, ಮುಂದಿನ 5ರಿಂದ 7 ವರ್ಷಗಳಲ್ಲಿ 9.32 ಲಕ್ಷ ಕೋಟಿ ರೂ. ವ್ಯಯಿಸುವ ಯೋಜನೆ ಹಾಕಿಕೊಂಡಿದೆ.

Advertisement

ಕೇಂದ್ರ ಸರಕಾರದ ಅಧಿಕಾರಿಯೊಬ್ಬರು ಈ ಬಗ್ಗೆ ಸುಳಿವು ನೀಡಿದ್ದು, ಸಮರ ಸಾಮರ್ಥ್ಯವನ್ನು ಇನ್ನಷ್ಟು ಸದೃಢಗೊಳಿಸಲು ನಿಶ್ಚಯಿಸಲಾಗಿದೆ.

ಭಾರತೀಯ ಸೇನೆಯ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯನ್ನು ಆಧುನೀಕರಣ ಮಾಡಲಾಗುತ್ತದೆ. ನೂತನ ಮಾದರಿಯ ಆಯುಧಗಳು, ಕ್ಷಿಪಣಿಗಳು, ಯುದ್ಧ ವಿಮಾನಗಳು, ಸಬ್‌ಮೆರಿನ್‌ಗಳು ಮತ್ತು ಸಮರ ನೌಕೆಗಳನ್ನು ಖರೀದಿಸಲು ನಿರ್ಧರಿಸಲಾಗಿದೆ.

ಇವರ ಪ್ರಕಾರ, ಕೇಂದ್ರ ಸರಕಾರವು ಸೇನೆಯ ಆಧುನೀಕರಣವನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಭೂಸೇನೆಗಾಗಿ 2,600 ಸಮರ ವಾಹನಗಳು, ಭವಿಷ್ಯದ ಉದ್ದೇಶಕ್ಕಾಗಿ 1,700 ಸಮರ ವಾಹನಗಳನ್ನು ಖರೀದಿಸಲು ನಿರ್ಣಯಿಸಿದೆ. ಜತೆಗೆ ವಾಯುಪಡೆಗಾಗಿ 110 ಬಹು ಉದ್ದೇಶಿತ ಯುದ್ಧ ವಿಮಾನಗಳನ್ನೂ ಖರೀದಿಸಲಾಗುತ್ತದೆ.

ನೌಕಾಪಡೆಗಾಗಿ 200 ಸಮರನೌಕೆಗಳು, 500 ಯುದ್ಧ ವಿಮಾನಗಳು, 24 ದಾಳಿ ಉದ್ದೇಶದ ಜಲಾಂತರ್ಗಾಮಿಗಳನ್ನು ಮುಂದಿನ 3-4 ವರ್ಷಗಳಲ್ಲಿ ಖರೀದಿಸಲಾಗುತ್ತದೆ.

Advertisement

ಇತ್ತೀಚಿನ ದಿನಗಳಲ್ಲಿ ಚೀನ ತನ್ನ ನೌಕಾಪಡೆಯನ್ನು ಬಲಗೊಳಿಸುತ್ತಿರುವ ಹಿನ್ನೆಲೆಯಲ್ಲಿಯೂ ಕೇಂದ್ರ ಸರಕಾರ ನೌಕಾಪಡೆಯ ಆಧುನೀಕರಣಕ್ಕೆ ಹೆಚ್ಚು ಒತ್ತು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next