Advertisement

ಕೋವಿಡ್ ಗೆದ್ದ ವೃದ್ಧನಿಗೆ 8.35 ಕೋಟಿ ರೂ. ಚಿಕಿತ್ಸೆ ಶುಲ್ಕ!

10:10 AM Jun 15, 2020 | mahesh |

ವಾಷಿಂಗ್ಟನ್: ಕೋವಿಡ್ ದಿಂದ ಗುಣಮುಖರಾಗಿದ್ದ 70ರ ವೃದ್ಧನಿಗೆ “ಹೃದಯಾಘಾತ’ ಆಗುವಂತಹ ಚಿಕಿತ್ಸೆ ಶುಲ್ಕ ವಿಧಿಸಿರುವುದು ಅಮೆರಿಕದಲ್ಲಿ ಕಂಡು ಬಂದಿದೆ. ಸಿಯಾಟಲ್‌ನ ಮೈಕಲ್‌ ಫ್ಲೋರ್‌ ಎಂಬ ವೃದ್ಧ ಮಾ. 2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ ಮೈಕಲ್‌ ಗುಣಮುಖರಾಗಿದ್ದಾರೆ. 62 ದಿನಗಳ ಚಿಕಿತ್ಸೆ ಪಡೆದ ಈತನಿಗೆ 8.35 ಕೋಟಿ ರೂ. ಬಿಲ್‌ ನೀಡಲಾಗಿದೆ. ಇದನ್ನು ಕಂಡು ಮೈಕಲ್‌ ದಂಗಾಗಿ ಹೋಗಿದ್ದಾರೆ. ಆದರೆ, ಈ ಮೊತ್ತವನ್ನು ಈತ ಭರಿಸಬೇಕಾಗಿಲ್ಲ. ಅಮೆರಿಕ ಆರೋಗ್ಯ ವಿಮಾ ಯೋಜನೆ ಮೆಡಿಕೇರ್‌ ವ್ಯಾಪ್ತಿಗೆ ಈತ ಒಳಪಡುವುದರಿಂದ ಸಂಪೂರ್ಣ ಹಣವನ್ನು ಸರಕಾರವೇ ತುಂಬಲಿದೆ. ನನ್ನ ದೇಶದ ತೆರಿಗೆದಾರರು ಇಷ್ಟೊಂದು ಹಣ ಭರಿಸಬೇಕಾಗಿರುವುದು ನೋವು ತಂದಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next