Advertisement

ಡೇರಿ ಕಟ್ಟಡ ನಿರ್ಮಾಣಕ್ಕೆ 75 ಸಾವಿರ ರೂ. ಅನುದಾನ

07:29 AM Jan 30, 2019 | Team Udayavani |

ಬಾಗೇಪಲ್ಲಿ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಮಿಟ್ಟೇಮರಿ ಹೋಬಳಿ ಮಲ್ಲಗುರ್ಕಿ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ 75 ಸಾವಿರ ರೂ. ಅನುದಾನದ ಚೆಕ್‌ನ್ನು ವಿತರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲ ಎ.ಜಿ.ಸುಧಾಕರ್‌, ಈ ಭಾಗದಲ್ಲಿ ಹೈನುಗಾರಿಕೆ ರೈತರ ಪ್ರಮುಖ ಉದ್ಯೋಗವಾಗಿದ್ದು, ರೈತರು ಹಾಲು ಹಾಕಲು ಸೂಕ್ತ ಮತ್ತು ಸ್ವಂತ ಹಾಲಿನ ಕಟ್ಟಡ ಇರುವುದು ಮುಖ್ಯ. ಬಹುತೇಕ ಹಳ್ಳಿಗಳಲ್ಲಿ ಸುಸಜ್ಜಿತ ಕಟ್ಟಡ ಇಲ್ಲದಿರುವುದರಿಂದ ಹಾಲು ಸಂಗ್ರಹಿಸಲು ಕಷ್ಟವಾಗಿರುತ್ತದೆ.

ಈ ಸಮಸ್ಯೆ ಬಗೆಹರಿಸಲು ಹಾಲು ಉತ್ಪಾದಕ ಸಹಕಾರ ಸಂಘದ ಜತೆಗೆ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯವರು ಕೈಜೋಡಿಸಿದ್ದು, ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಹಾಯಧನ ನೀಡುತ್ತಿದ್ದಾರೆ. ಇದರ ಸದುಪಯೋಗ ಪಡೆದು ಗುಣಮಟ್ಟದ ಕಟ್ಟಡ ನಿರ್ಮಿಸಬೇಕೆಂದು ಸಲಹೆ ನೀಡಿದರು.

ಯೋಜನಾಧಿಕಾರಿ ಬಿ.ದಿನೇಶ್‌ ಮಾತ ನಾಡಿ, ಕ್ಷೇತ್ರದಿಂದ ಅನುದಾನ ಮೊತ್ತವನ್ನು ಹಾಲಿನ ಕಟ್ಟಡ ರಚನೆಯ ಕೆಲಸಕ್ಕೆ ಸದ್ಬಳಕೆ ಮಾಡುವಂತೆ ತಿಳಿಸಿದರು. ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಬಡ ಕುಟುಂಬಗಳಿಗೆ ಆಸರೆ ನೀಡಿದಂತಾಗುತ್ತದೆ ಹಾಗೂ ಈಗಾಗಲೇ ತಾಲೂಕಿನಲ್ಲಿ 19 ಕಟ್ಟಡ ನಿರ್ಮಾಣಕ್ಕೆ 14.05 ಲಕ್ಷ ರೂ. ಸಹಾಯಧನ ನೀಡಲಾಗಿದೆ ಎಂದು ತಿಳಿಸಿದರು. ಮಲ್ಲಗುರ್ಕಿ ಡೇರಿ ಅಧ್ಯಕ್ಷ ಎಮ್‌.ಎನ್‌.ನರಸರೆಡ್ಡಿ, ಕಾರ್ಯದರ್ಶಿ ಗುರಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next