ಆಲೂರು : ಹಿಂದೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದಾಗ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯ ಮಂತ್ರಿಯಾದ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೈರಾಪುರ ಗ್ರಾಮ ಪಂಚಾಯಿತಿ ಗೆ ಸೇರಿದ ರಾಜಪ್ಪ ಬಡಾವಣೆ ಅಭಿವೃದ್ಧಿಗೆ ಸುಮಾರು 60 ಲಕ್ಷ ನೀಡಲಾಗಿತ್ತು ಎಂದು ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಹೆಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ಆವರು ಆಲೂರು ಪಟ್ಟಣದ ರಾಜಪ್ಪ ಬಡಾವಣೆಯಲ್ಲಿ 60 ಲಕ್ಷ ರೂ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಹಿಂದೆ ಕುಮಾರಸ್ವಾಮಿ ಮುಖ್ಯ ಮಂತ್ರಿಯಾದ ಸಂದರ್ಭದಲ್ಲಿ ಹೆಚ್.ಡಿ.ರೇವಣ್ಣ ಅವರು ಲೋಕೋಪಯೋಗಿ ಇಲಾಖೆ ಮಂತ್ರಿಯಾಗಿ ಗ್ರಾಮಗಳ ಅಭಿವೃದ್ಧಿ ಹಾಗೂ ಜನರಅಗತ್ಯ ತೆಗೆ ತಕ್ಕಂತೆ ರಸ್ತೆ ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ 60 ಲಕ್ಷ ಹಣ ಬಿಡುಗಡೆ ಮಾಡಲಾಗಿತ್ತು ಕೋವಿಡ್ ಸೊಂಕಿನ ಹಿನ್ನೆಲೆಯಲ್ಲಿ ಕಾಮಗಾರಿ ಭೂಮಿ ಪೂಜೆ ಕೈಗೊಳ್ಳಲು ಸ್ವಲ್ಪ ವಿಳಂಬವಾಯಿತು ಇಂದು ನಾವು ಈ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುತ್ತಿದ್ದು ನಮ್ಮ ಉದ್ದೇಶ ಜನರಿಗೆ ಮೂಲಭೂತ ಸೌಕರ್ಯ ಸಿಗಬೇಕು ಅದರ ಮೂಲಕ ಜನಸಾಮಾನ್ಯರು ಆರೋಗ್ಯಕರವಾದ ಬದುಕು ನಡೆಸಬೇಕು ಎಂಬ ಇಚ್ಛೆಯಿದೆ. ಬಡಾವಣೆ ವಾಸಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ:ಎನ್‌ಇಪಿ ಮುಂದಿನ ಪೀಳಿಗೆಗೆ ಅಪರಿಮಿತ ಅವಕಾಶ ಕಲ್ಪಿಸಲಿದೆ: ಡಾ ತೇಜಸ್ವಿನಿ ಅನಂತಕುಮಾರ್
ಕೆ.ಎಸ್.ಮಂಜೇಗೌಡ ಮಾತನಾಡಿ ನಮ್ಮ ಸರ್ಕಾರವಿದ್ದ ಸಂದರ್ಭದಲ್ಲಿ ಆಲೂರು ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದು ದೇವೇಗೌಡ ಅವರು ಮುಖ್ಯಮಂತ್ರಿ ,ಪ್ರಧಾನ ಮಂತ್ರಿಯಾದ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಕುಮಾರಸ್ವಾಮಿಯವರ ಮೈತ್ರಿ ಸರ್ಕಾರ ಇದ್ದ ಸಂದರ್ಭದಲ್ಲಿ ಆಲೂರು ಕೋನೆಪೇಟೆಯಲ್ಲಿ ರಸ್ತೆ ಅಗಲೀಕರಣ ಮಾಡಿ ಸರ್ಕಲ್ ನಿರ್ಮಾಣ ಮಾಡಲು 2 ಕೋಟಿ ಹಣ ಬಿಡುಗಡೆ ಮಾಡಿದ್ದರು ಮುಂದಿನ ವಾರದಲ್ಲಿ ಅದಕ್ಕೂ ಭೂಮಿಪೂಜೆ ನೇರವೇರಲಿದೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವೇದಾ ಸುರೇಶ್,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಲೋಕೇಶ್ಕ ದಾಳು, ಹೇಮಂತ್, ತನುಗೌಡ, ಜಯಪಾಲ್,ಸುರೇಶ್,ಹಾಗೂ ಇತರರು ಇದ್ದರು.
ಸರ್ಕಾರದ ಪ್ರಸ್ತಾವನೆ ಕಳುಹಿಸಲಾಗಿದೆ : ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಾಜಪ್ಪ ಬಡಾವಣೆ ಬೈರಾಪುರ ಗ್ರಾ.ಪಂಚಾಯಿತಿಗೆ ಸೇರಿರುವುದರಿಂದ ಕುಡಿಯುವ ನೀರು ಸೇರಿದಂತೆ ಯಾವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾದ್ಯವಾಗುತ್ತಿಲ್ಲ ಅದ್ದರಿಂದ ಅಭಿವೃದ್ಧಿ ದೃಷ್ಟಿಯಿಂದ ಪಟ್ಟಣ ಪಂಚಾಯಿತಿಗೆ ಸೇರಿಸಲು ಸರ್ಕಾರದ ಪ್ರಸ್ತಾವನೆಗೆ ಕಳುಹಿಸಿಕೊಡಲಾಗಿದೆ ಎಂದು ಶಾಸಕ ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು.