Advertisement

57.51 ಲಕ್ಷ ರೂ. ಉಳಿತಾಯ ಬಜೆಟ್‌

06:38 AM Feb 26, 2019 | |

ಹರಪನಹಳ್ಳಿ: ಸ್ಥಳೀಯ ಪುರಸಭೆಯ 2019-20ನೇ ಸಾಲಿನ ಆಯ-ವ್ಯಯವನ್ನು ಸೋಮವಾರ ಪುರಸಭೆ ಅಧ್ಯಕ್ಷ ಎಚ್‌.ಕೆ.ಹಾಲೇಶ್‌ ಮಂಡಿಸಿದರು. ಆರಂಭಿಕ ನಗದು ಮತ್ತು ಬ್ಯಾಂಕ್‌ ಶಿಲ್ಕು 60,88,160 ಲಕ್ಷ ರೂ., ನಿರೀಕ್ಷಿತ ಆದಾಯ 55,18,36,639 ಸೇರಿದಂತೆ ಒಟ್ಟು 55,79,24,799 ಕೋಟಿ ರೂ. ಆದಾಯ ನಿರೀಕ್ಷಿಸಿದ್ದು, 55,21,7,758 ಕೋಟಿ ರೂ. ನಿರೀಕ್ಷಿತ ಖರ್ಚು ತೆಗೆದು ಒಟ್ಟು 57,51,041 ಲಕ್ಷ ರೂ. ಉಳಿತಾಯ ಬಜೆಟ್‌ಗೆ ಸಭೆ ಅನುಮೋದನೆ ನೀಡಿತು.

Advertisement

ನಿರೀಕ್ಷಿತ ಆದಾಯಗಳು: ವೇತನ ಅನುದಾನ(ಎಸ್‌ ಎಫ್‌ಸಿ)-3050 ಕೋಟಿ ರೂ., ಎಸ್‌ಎಫ್‌ಸಿ ಮುಕ್ತ ನಿಧಿ-4 ಕೋಟಿ ರೂ., ಎಸ್‌ಎಫ್‌ಸಿ ವಿಶೇಷ ಅನುದಾನ-3 ಕೋಟಿ ರೂ., ವಿದ್ಯುತ್‌ ಅನುದಾನ-3 ಕೋಟಿ ರೂ., ನಗರೋತ್ಥಾನ ಅನುದಾನ-5 ಕೋಟಿ ರೂ., ಕೇಂದ್ರ ಸರ್ಕಾರದ ಅನುದಾನ(14ನೇ ಹಣಕಾಸು ಯೋಜನೆ)-5.28 ಕೋಟಿ ರೂ., ಸಂಸದ ಅನುದಾನ 50ಲಕ್ಷ ರೂ., ಶಾಸಕರ ಅನುದಾನ-50 ಲಕ್ಷ ರೂ., ಎಂಎಲ್‌ಸಿ ಅನುದಾನ-25 ಲಕ್ಷ ರೂ., ಹೈಕ ವಿಶೇಷ ಅನುದಾನ 1 ಕೋಟಿ ರೂ., ಬರ ಪರಿಹಾರ ಹಾಗೂ ಪ್ರಕೃತಿ ವಿಕೋಪಕ್ಕಾಗಿ 25 ಲಕ್ಷ ರೂ., ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವತ್ಛ ಭಾರತ ಅಭಿಯಾನ ಯೋಜನೆ-60 ಲಕ್ಷ ರೂ., ಎಸ್‌ಎಫ್‌ಸಿ ಯೋಜನೆಯಡಿ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ -50 ಲಕ್ಷ ರೂ., ಜನಗಣತಿ ಅನುದಾನ 2.50 ಲಕ್ಷ ರೂ. ನಿರೀಕ್ಷಿಸಲಾಗಿದೆ.
 
ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆ ಅನುದಾನ 25 ಲಕ್ಷ ರೂ., ವಾಣಿಜ್ಯ ಮಳಿಗೆಗೆಗಳ ಬಾಡಿಗೆ 42.73 ಲಕ್ಷ ರೂ., ಕಟ್ಟಡ ಪರವಾನಗಿ 15 ಲಕ್ಷ ರೂ., ಕೆರೆ ಅಭಿವೃದ್ಧಿ ಶುಲ್ಕ-15 ಲಕ್ಷ ರೂ., ಉದ್ದಿಮೆ ಪರವಾನಗಿ-8 ಲಕ್ಷ ರೂ, ನೀರಿನ ಕಂದಾಯ ತೆರಿಗೆ 47.06 ಲಕ್ಷ ರೂ, ಸಂತೆ ಹರಾಜು-10 ಲಕ್ಷ ರೂ, ಬ್ಯಾಂಕ್‌ ಬಡ್ಡಿ ಶುಲ್ಕ-17ಲಕ್ಷ ರೂ, ಮನೆ ಕಂದಾಯ ತೆರಿಗೆ-1.02 ಕೋಟಿ ರೂ, ಖಾತೆ ಬದಲಾವಣೆ-15 ಲಕ್ಷ ರೂ. ಘನತಾಜ್ಯ ವಿಲೇವಾರಿ-6.50 ಲಕ್ಷ ರೂ, ಎಸ್‌ಎಫ್‌ಸಿ ಮುಕ್ತ ನಿಧಿ, ಎಸ್‌ಸಿ-ಎಸ್‌ಟಿ ಕಲ್ಯಾಣ ಕಾರ್ಯಕ್ರಮ-84.35 ಲಕ್ಷ ರೂ, ಹಿಂದುಳಿದ ವರ್ಗಗಳ ಕಲ್ಯಾಣ ನಿಧಿ-25.37ಲಕ್ಷ ರೂ, ವಿಕಲಚೇತನರ ಕಲ್ಯಾಣ ನಿಧಿ-17.50ಲಕ್ಷ ರೂ., ನೌಕರರ ವಿಮೆ,ವೃತ್ತಿ ತೆರಿಗೆ ವಸೂಲಾತಿಗಳು-74.21ಲಕ್ಷ ರೂ., ಅಕ್ರಮ-ಸಕ್ರಮ ಅಭಿವೃದ್ಧಿ ಶುಲ್ಕ -10 ಲಕ್ಷ ರೂ. ಸೇರಿದಂತೆ ಇತರೆ ಮೂಲಗಳಿಂದ ಒಟ್ಟು 55,18,36,639 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

ನಿರೀಕ್ಷಿತ ಖರ್ಚು: ಸಿಬ್ಬಂದಿ ವೆಚ್ಚ-3.50 ಕೋಟಿ, ವಿದ್ಯುತ್‌ ಅನುದಾನ ಪಾವತಿ-3 ಕೋಟಿ, ಕಚೇರಿ ಸ್ಟೇಷನರಿ-7ಲಕ್ಷ ರೂ, ಜಾಹೀರಾತು ಪ್ರಚಾರ-6 ಲಕ್ಷರೂ, ಕಚೇರಿ ಗಣಕ ಯಂತ್ರ-5 ಲಕ್ಷ ರೂ, ಹೊರಗುತ್ತಿಗೆ ಸಹಾಯಕರ ವೇತನ-22ಲಕ್ಷ ರೂ, ಅತಿವೃಷ್ಟಿ ಸಹಾಯ ಧನ-2.50 ಲಕ್ಷ ರೂ, ರಸ್ತೆ ದುರಸ್ತಿ-10 ಲಕ್ಷರೂ, ಬೀದಿ ದೀಪ ನಿರ್ವಹಣೆ-98 ಲಕ್ಷ ರೂ, ಬೀದಿ ದೀಪ ಹೊರಗುತ್ತಿಗೆ ವಾರ್ಷಿಕ ನಿರ್ವಹಣೆ-25 ಲಕ್ಷ ರೂ, ಆರೋಗ್ಯ ಶಾಖೆ ರಾಸಾಯನಿಕ ಖರೀದಿ-16ಲಕ್ಷ ರೂ, ನೀರು ಸರಬರಾಜು ದುರಸ್ತಿ-13ಲಕ್ಷ ರೂ, ನೀರು ಸರಬರಾಜು ರಾಸಾಯನಿಕ ಖರೀದಿ-27ಲಕ್ಷ ರೂ, ನೀರು ಸರಬರಾಜು ಬಿಡಿಭಾಗ ಖರೀದಿ-25ಲಕ್ಷ ರೂ., ಶೇ.24.10 ಯೋಜನೆ ವೆಚ್ಚ-84.35 ಲಕ್ಷರೂ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಧಿ-25.37ಲಕ್ಷ ರೂ, ಸಂಸದರ ಅನುದಾನ-50 ಲಕ್ಷ ರೂ, ಶಾಸಕರ ಅನುದಾನ-50 ಲಕ್ಷ ರೂ, ಎಂಎಲ್‌ಸಿ ಅನುದಾನ-25 ಲಕ್ಷ ರೂ, ಬರಪರಿಹಾರ ಹಾಗೂ ಪ್ರಕೃತಿ ವಿಕೋಪ-25ಲಕ್ಷ ರೂ, ಸ್ವತ್ಛ ಭಾರತ ಅಭಿಯಾನ ಯೋಜನೆ-60 ಲಕ್ಷ ರೂ, ಗುತ್ತಿಗೆದಾರರ ಠೇವಣಿ ಶುಲ್ಕ-25 ಲಕ್ಷ ರೂ, ಗುತ್ತಿಗೆದಾರರ ಠೇವಣಿ ಶುಲ್ಕ-50 ಲಕ್ಷ ರೂ, ನೌಕರರ ವಿಮೆ, ಠೇವಣಿ, ಕುಟುಂಬ ಕಲ್ಯಾಣ ನಿಧಿ-74.21ಲಕ್ಷ ರೂ, ವಸೂಲಾತಿ ಪಾವತಿಸಬೇಕಾದವುಗಳು-97.95 ಲಕ್ಷ
ರೂ, ಉದ್ಯಾನವನ, ತೋಟಗಳ ಹಾಗೂ ಈಜುಕೋಳ ನಿರ್ಮಾಣ ಅಭಿವೃದ್ಧಿ, ಪಟ್ಟಣದ ಹಸರೀಕರಣ-50 ಲಕ್ಷ ರೂ, ವಾರ್ಡ್‌ಗಳಲ್ಲಿ ಸ್ಥಳ ಗುರುತಿಸುವ ಬಗ್ಗೆ ನಾಮಫಲಕ ಅಳವಡಿಕೆ-35ಲಕ್ಷ ರೂ, ರಸ್ತೆ ಮತ್ತು ಚರಂಡಿ ಸೇತುವೆ ಕಾಮಗಾರಿ 5 ಕೋಟಿ ರೂ, ಮೂಲಭೂತ ಸೌಕರ್ಯ-2 ಕೋಟಿ ರೂ, ಇತರೆ ಅಭಿವೃದ್ಧಿ ಕಾಮಗಾರಿ-7 ಕೋಟಿ ರೂ, ಅಸಾಧರಣ ಬಂಡವಾಳ ಅಭಿವೃದ್ಧಿ ಕಾಮಗಾರಿ 21.29 ಕೋಟಿ ರೂ. ಸೇರಿ ಒಟ್ಟು 55,21,73,758 ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ ಎಂದು ಅಧ್ಯಕ್ಷ ಎಚ್‌. ಕೆ.ಹಾಲೇಶ್‌ ಮಾಹಿತಿ ನೀಡಿದರು. 

ಒಂದು ಗಂಟೆಗಳ ಕಾಲ ಆಯ-ವ್ಯಯ ಬಜೆಟ್‌ ಪ್ರತಿ ಓದಿದ ಬಳಿಕ ಸದಸ್ಯರಿಂದ ಸಲಹೆ-ಸೂಚನೆಗಳನ್ನು ಅಧ್ಯಕ್ಷರು ಆಲಿಸಿದರು. ಎಚ್‌.ಕೆ.ಹಾಲೇಶ್‌ ಹ್ಯಾಟ್ರಿಕ್‌ ಬಜೆಟ್‌ ಮಂಡನೆಗೆ ಸದಸ್ಯರು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸತ್ಯನಾರಾಯಣ್‌, ಮುಖ್ಯಾಧಿಕಾರಿ ನಾಗರಾಜನಾಯ್ಕ, ಸದಸ್ಯರು ಇದ್ದರು.

ಮೈಸೂರು ಮಾದರಿಯಲ್ಲಿ ವೃತ್ತ ನಿರ್ಮಾಣಕ್ಕೆ ಕ್ರಮ ಬಜೆಟ್‌ ಮಂಡನೆ ಸಭೆಯಲ್ಲಿ ಪ್ರವಾಸಿ ಮಂದಿರ ವೃತ್ತಕ್ಕೆ ಹೆಸರು ನಾಮಕರಣ ಮಾಡಬೇಕೆಂದು ಸದಸ್ಯರು ಮನವಿ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಅಧ್ಯಕ್ಷ ಎಚ್‌.ಕೆ.ಹಾಲೇಶ್‌, ಮಂದಿರ ವೃತ್ತ ತಾಲೂಕಿನ ಸಾರ್ವಜನಿಕರ ಹೃದಯವಾಗಿದೆ. 60 ಲಕ್ಷ ರೂ. ವೆಚ್ಚದಲ್ಲಿ ಆ ವೃತ್ತವನ್ನು ಮೈಸೂರು ವೃತ್ತದ ಮಾದರಿಯಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರು, ನಗರ ನೈರ್ಮಲ್ಯ, ಬೀದಿ ದೀಪಗಳ ವ್ಯವಸ್ಥಿತ ನಿರ್ವಹಣೆ, ತ್ವರಿತವಾಗಿ ಸಾರ್ವಜನಿಕರ ಕೆಲಸ, ಕಡತಗಳ ವಿಲೇವಾರಿಗೆ ಕ್ರಮ, ವಾರ್ಡಗಳಲ್ಲಿ ಸ್ಥಳ ಗುರುತಿಸುವ ನಾಮಫಲಕ ಅಳವಡಿಕೆ, ಪಟ್ಟಣದ ಸೌಂದರ್ಯಕ್ಕೆ ಆದ್ಯತೆ ನೀಡಲಾಗುವುದು.
ಎಚ್‌.ಕೆ.ಹಾಲೇಶ್‌, ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next