Advertisement

ಕ್ಷಯ ರೋಗಿಗಳಿಗೆ ಶೀಘ್ರ 500ರೂ. ಸಹಾಯಧನ

11:41 AM Jan 14, 2018 | Team Udayavani |

ಹೊಸದಿಲ್ಲಿ : ದೇಶದಲ್ಲಿರುವ ಕ್ಷಯ ರೋಗಿ (ಟ್ಯುಬರ್‌ಕ್ಯುಲೋಸಿಸ್‌)ಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ಟಿಬಿ ಇರುವ ಪ್ರತಿಯೊಬ್ಬರಿಗೂ ತಿಂಗಳಿಗೆ 500 ರೂ.ಗಳ ಸಹಾಯಧನ ನೀಡಲು ಚಿಂತನೆ ನಡೆಸಿದೆ. ರೋಗ ಸಂಪೂರ್ಣ ಶಮನ ಆಗುವವರೆಗೂ ಇವರಿಗೆ ಪೌಷ್ಟಿಕ ಆಹಾರ ಖರೀದಿಗೆ ಹಾಗೂ ಪ್ರಯಾಣ ವೆಚ್ಚವನ್ನು ಭರಿಸಲೆಂದು ಈ ಸಹಾಯಧನ ನೀಡುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಪ್ರಸ್ತಾವಿಸಿದೆ. ಅದರಂತೆ, ದೇಶದಲ್ಲಿರುವ ಎಲ್ಲ 25 ಲಕ್ಷ ಟಿಬಿ ರೋಗಿಗಳೂ (ಆದಾಯದ ಮಟ್ಟವನ್ನು ಪರಿಗಣಿಸದೇ)  ಪ್ರತಿ ತಿಂಗಳು 500 ರೂ. ಪಡೆಯಲಿದ್ದಾರೆ. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next