Advertisement

ಭೂಗತ  ಕೇಬಲ್‌ ಅಳವಡಿಸಲು 50 ಕೋ.ರೂ. 

10:30 AM Sep 30, 2017 | |

ಮಲ್ಲಿಕಟ್ಟೆ:   ನಗರದಲ್ಲಿ ಭೂಗತ ಕೇಬಲ್‌ ಅಳವಡಿಸುವ ಮೂಲಕ ವಿದ್ಯುತ್‌ ತಂತಿಗಳು ತೂಗಾಡುವುದನ್ನು ತಪ್ಪಿಸಿ ನಗರವನ್ನು ಸುಂದರಗೊಳಿಸಲು  50  ಕೋ.ರೂ. ಅನುದಾನವನ್ನು ಪಡೆಯಲಾಗತ್ತಿದೆ ಎಂದು ಶಾಸಕ ಜೆ.ಆರ್‌.ಲೋಬೋ ತಿಳಿಸಿದರು.

Advertisement

ಇಲ್ಲಿನ ತಮ್ಮ ಕಚೇರಿಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮೆಸ್ಕಾಂ ಸಲಹಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ  ಪ್ರಾಯೋಗಿಕವಾಗಿ ಎ.ಬಿ.ಶೆಟ್ಟಿ ವೃತ್ತದಿಂದ ಕಂಕನಾಡಿ ಕರಾವಳಿ ಸರ್ಕಲ್‌ವರೆಗೆ 10 ಕೋ.ರೂ. ವೆಚ್ಚದಲ್ಲಿ  ಭೂಗತ  ಕೇಬಲ್‌ ಅಳವಡಿಸುವುವ ಕೆಲಸ ಬಹುತೇಕ ಮುಕ್ತಾಯ ಹಂತದಲ್ಲಿದೆ.  ಇದನ್ನು ಆದಷ್ಟು ಬೇಗ ಮುಗಿಸಿ ನವೆಂಬರ್‌ ತಿಂಗಳಲ್ಲಿ ಇಂಧನ ಖಾತೆ ಸಚಿವರಿಂದ ಉದ್ಘಾಟನೆ ಮಾಡಿಸಲಾಗುವುದು. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಮಂಗಳೂರನ್ನು ಆಧುನೀಕರಣಗೊಳಿಸಲು ಸುಮಾರು 300 ಕೋಟಿ ರೂಪಾಯಿ ಪಡೆಯಲು ಪ್ರಯತ್ನಿಸಲಾಗುವುದು ಎಂದರು.

ನೆಹರೂ ಮೈದಾನ್‌ ಮತ್ತು ಉರ್ವದಲ್ಲಿ ವಿದ್ಯುತ್‌ ಕೇಂದ್ರ ಸ್ಥಾಪಿಸಲು ಜಾಗ ಪಡೆಯಲು  ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಉನ್ನತಮಟ್ಟದ ಅಧಿಕಾರಿಗಳ ಜತೆ ಮಾತುಕತೆ ಮಾಡಲಾಗಿದೆ.  ಆದಷ್ಟು ಬೇಗ ಅದಕ್ಕೂ ಶಂಕುಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಇಲಾಖೆಯಲ್ಲಿ ದಾರಿ ದೀಪ ಆನ್‌ ಆಫ್‌ ಮಾಡಲು ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ 719 ಆಧುನಿಕ ಬಾಕ್ಸ್‌ ಖರೀದಿಸಬೇಕಾಗಿದ್ದು, ಈಗಾಗಲೇ ಟೆಂಡರ್‌ ಕರೆಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. 

ಮೆಸ್ಕಾಂ ಎಕ್ಸಿಕೂಟಿವ್‌  ಎಂಜಿನಿಯರ್‌ ಮಂಜಪ್ಪ, ಸಲಹಾ ಸಮಿತಿ ಸದಸ್ಯರಾದ ಮೋಹನ್‌ ಮೆಂಡನ್‌, ದುರ್ಗಾ ಪ್ರಸಾದ್‌ ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next