Advertisement

ಹಾಸಿಗೆ ಹಿಡಿದ ಎಂಜಿನಿಯರ್‌ಗೆ ಐದು ಲಕ್ಷ ರೂಪಾಯಿ ಪರಿಹಾರ

10:34 PM Jun 22, 2019 | Team Udayavani |

ಯಾದಗಿರಿ: ಅಪಘಾತವೊಂದರಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಕೈ ಮತ್ತು ಕಾಲುಗಳು ಶಕ್ತಿಹೀನವಾಗಿ ಹಾಸಿಗೆ ಹಿಡಿದಿರುವ ಯಾದಗಿರಿ ತಾಲೂಕಿನ ಮುನಗಲ್‌ ಗ್ರಾಮದ ಎಂಜಿನಿಯರಿಂಗ್‌ ಪದವೀಧರ ಭೀಮರೆಡ್ಡಿ ಶಂಕರಪ್ಪ ಅವರ ತಂದೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗುರುಮಿಠಕಲ್‌ ತಾಲೂಕಿನ ಚಂಡರಕಿಯಲ್ಲಿ 5 ಲಕ್ಷ ರೂ.ಗಳ ಪರಿಹಾರ ಚೆಕ್‌ ಹಸ್ತಾಂತರಿಸಿದರು.

Advertisement

ಮಗನ ಚಿಕಿತ್ಸೆಗಾಗಿ ಮನೆ, ಹೊಲ, ಎತ್ತುಗಳನ್ನು ಕಳೆದುಕೊಂಡು 30 ಲಕ್ಷಕ್ಕೂ ಅ ಧಿಕ ಹಣ ಖರ್ಚು ಮಾಡಿದರೂ ಗುಣಮುಖವಾಗಿಲ್ಲ ಎಂದು ಭೀಮರೆಡ್ಡಿಯವರ ತಾಯಿ ಶುಕ್ರವಾರ ನಡೆದ ಜನತಾದರ್ಶನದಲ್ಲಿ ಭಾಗವಹಿಸಿ ದುಃಖ ತೋಡಿಕೊಂಡಿದ್ದರು.

ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿಯವರು ಕೂಡಲೇ ಸ್ಪಂದಿಸಿ, ಶನಿವಾರ ಬೆಳಗ್ಗೆ ಬಂದು 5 ಲಕ್ಷ ರೂ.ಗಳ ಪರಿಹಾರದ ಚೆಕ್‌ ಸ್ವೀಕರಿಸಲು ಭೀಮರೆಡ್ಡಿ ಅವರ ಪಾಲಕರಿಗೆ ತಿಳಿಸಿದ್ದರು. ಕೊಟ್ಟ ಭರವಸೆಯಂತೆ ಶನಿವಾರ ಬೆಳಗ್ಗೆ ಗ್ರಾಮ ವಾಸ್ತವ್ಯ ಮಾಡಿದ್ದ ಚಂಡರಕಿ ಪ್ರಾಥಮಿಕ ಶಾಲೆ ಆವರಣದಲ್ಲಿ ಚೆಕ್‌ ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next