Advertisement

ಶರತ್‌ ಕುಟುಂಬಕ್ಕೆ 5 ಲಕ್ಷ ರೂ. ನೆರವು: ಬಿಜೆಪಿ

03:45 AM Jul 13, 2017 | Team Udayavani |

ಬಂಟ್ವಾಳ : ದುಷ್ಕರ್ಮಿಗಳಿಗೆ ಬಲಿಯಾದ ಶರತ್‌ ಮಡಿವಾಳ ಕುಟುಂಬಕ್ಕೆ ಕ್ಷೇತ್ರ ಬಿಜೆಪಿ ಹಾಗೂ ಸಂಸದರ ನಳಿನ್‌ ಕುಮಾರ್‌ ಕಟೀಲು ಅವರ ನೇತೃತ್ವದಲ್ಲಿ 5 ಲಕ್ಷ ರೂ. ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ನೇತಾರ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು ತಿಳಿಸಿದ್ದಾರೆ.

Advertisement

ಬಿ.ಸಿ.ರೋಡ್‌ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶರತ್‌ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ತತ್‌ಕ್ಷಣ ಬಂಧಿಸಬೇಕು. ಶವ ಯಾತ್ರೆಯ ಸಂದರ್ಭ ಹಿಂದೂ ಸಂಘಟನೆಗಳ ಪ್ರಮುಖರ ಮೇಲಿನ ಸುಳ್ಳು ಕೇಸ್‌ಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪೊಲೀಸರ ಮೇಲೆ ಒತ್ತಡ
ಮಂಗಳೂರಿನಿಂದ ಹೊರಟಿದ್ದ ಶವಯಾತ್ರೆ ಬಿ.ಸಿ.ರೋಡ್‌ ತನಕ ಶಾಂತಿಯುವಾಗಿ ಬಂದಿದೆ. ಕೈಕಂಬದಲ್ಲಿ ದುಷ್ಕರ್ಮಿಗಳು ಕಲ್ಲೆಸೆತ ಮಾಡಿದ್ದಾರೆ. ಸಂಘಟನೆಗಳ ಪ್ರಮುಖರು ಅಲ್ಲಿರಲಿಲ್ಲ. ಆದರೆ ಪೊಲೀಸರು ಕಲ್ಲೆಸೆದವರನ್ನು ಬಿಟ್ಟು ಶಾಂತಿಗಾಗಿ ಪ್ರಯ ತ್ನಿಸಿದವರನ್ನು ಸೇರಿಸಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಅನಂತರದ ದಿನಗಳಲ್ಲಿ ಶಾಂತಿ ಕದಡುವ ಯತ್ನವನ್ನು ರಾಜಕೀಯ ಒತ್ತಡದಿಂದ ನಡೆಸಿದ್ದಾರೆ ಎಂದು ಆರೋಪಿಸಿದರು.

ತುರ್ತುಪರಿಸ್ಥಿತಿ ವಾತಾವರಣ
ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಮಾತನಾಡಿ, ರಾಜ್ಯ ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಪೊಲೀಸ್‌ ಇಲಾಖೆಯ ಮೇಲಿನ ಹಸ್ತಕ್ಷೇಪವನ್ನು ನಿಲ್ಲಿಸಿ ಅವರನ್ನು ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದರು.

1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತುಪರಿಸ್ಥಿತಿ ಹೇರುವ ಮೂಲಕ ವಿರೋಧಿಗಳನ್ನು ದಮನಿಸುವ ಯತ್ನ ಮಾಡಿದರು. ರಾತೋರಾತ್ರಿ ತನ್ನ ವಿರೋಧಿಗಳನ್ನು ಜೈಲಿಗೆ ಅಟ್ಟಿದ್ದರು. ಇದೀಗ ದ.ಕ. ಜಿಲ್ಲೆಯಲ್ಲಿಯೂ ಪರೋಕ್ಷವಾಗಿ ತುರ್ತುಪರಿಸ್ಥಿತಿಯ ವಾತಾವರಣ ನಿರ್ಮಿಸಿ ವಿಪಕ್ಷವನ್ನು ದಮನಿಸುವ ಕೆಲಸವನ್ನು ಮಾಡುತ್ತಿದೆ ಎಂದರು.

Advertisement

ಬಂಧನ ಯಾಕಿಲ್ಲ
ಮೇ 26ರಂದು ಮೆಲ್ಕಾರ್‌ನಲ್ಲಿ ಪವನ್‌ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಜುಲೈ 9ರಂದು ಮಂಗಳೂರು ತಾಲೂಕಿನ ಕುತ್ತಾರಿನಲ್ಲಿ ಹಿಂದೂ ಸಂಘಟನೆಯ ಚಿರಂಜೀವಿ ಮೇಲೆ ಹಲ್ಲೆಯಾಗಿದೆ. ಶರತ್‌ ಹತ್ಯೆ ಪ್ರಕರಣ ನಡೆದು 9 ದಿನ ಕಳೆದರೂ ಈವರೆಗೆ ಆರೋಪಿಗಳನ್ನು ಬಂಧಿಸಲು ಇಲಾಖೆಗೆ ಸಾಧ್ಯವಾಗಿಲ್ಲ. ಇದಕ್ಕೆ ಸಚಿವರು ಉತ್ತರಿಸುವರೇ ಎಂದು ರಾಜೇಶ್‌ ನಾೖಕ್‌ ಪ್ರಶ್ನಿಸಿದರು.

ಆಶ್ರಫ್‌ ಕೊಲೆ ಪ್ರಕರಣದಲ್ಲಿ ಹಿಂದೂ ಯುವಕರ ಬಂಧನವಾಗಿದೆ. ಜುಲೈ 7ರಂದು ಅಡ್ಯಾರ್‌ನಲ್ಲಿ ನಡೆದ ಸಾಜಿದ್‌ ಎಂಬ ಯುವಕನ ಹಲ್ಲೆ ಪ್ರಕರಣದಲ್ಲಿ ಮೂರು ಮಂದಿ ಹಿಂದೂ ಯುವಕರ ಬಂಧನವಾಗಿದೆ. ಹಿಂದೂಗಳ ಹತ್ಯೆ, ಹಲ್ಲೆ ನಡೆದರೆ ಆರೋಪಿಗಳ ಬಂಧನವಿಲ್ಲ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಜಿ. ಆನಂದ, ದಿನೇಶ್‌ ಭಂಡಾರಿ, ದಿನೇಶ್‌ ಅಮೂrರು, ರಾಮ್‌ದಾಸ್‌ ಬಂಟ್ವಾಳ, ಮೋನಪ್ಪ ದೇವಸ್ಯ, ಸಾಂತಪ್ಪ ಪೂಜಾರಿ, ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.

ಶರತ್‌ ಮನೆಗೆ ಇಂದು ಬಿಎಸ್‌ವೈ
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಜು. 13ರ ಬೆಳಗ್ಗೆ 9.30 ಗಂಟೆಗೆ ಶರತ್‌ ಮನೆಗೆ ಭೇಟಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next