ರಾಜ್ಯದಲ್ಲಿ ಬೀದಿನಾಯಿ ಕಡಿತಕ್ಕೊಳಗಾದವರಿಗೆ ನಷ್ಟ ಪರಿಹಾರ ನಿರ್ಧರಿಸಲು ಸುಪ್ರೀಂ ಕೋರ್ಟ್‌ನ ಆದೇಶದಂತೆ ನೇಮಿಸಲಾದ ಜಸ್ಟೀಸ್ ಸಿರಿಜಗನ್ ಸಮಿತಿಯ ಶಿಫಾರಸು ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ನಷ್ಟಪರಿಹಾರ ಮೊತ್ತ ನಿಶ್ಚಯಿಸಲಾಗಿದೆ.
Advertisement
ಬೀದಿನಾಯಿ ಕಡಿತಕ್ಕೊಳಗಾದ ವ್ಯಕ್ತಿಗೆ ಗರಿಷ್ಠ ಐದು ಲಕ್ಷ ರೂ. ನೀಡುವಂತೆ ನ್ಯಾಯಾಲಯವು ತೀರ್ಪಿನಲ್ಲಿ ತಿಳಿಸಿದೆ. ಅದರಂತೆ ಒಂದು ಲಕ್ಷ ರೂ. ನಿಂದ ಐದು ಲಕ್ಷ ರೂ. ವರೆಗೆ ನಷ್ಟಪರಿಹಾರ ದೊರಕುವವರ ಪಟ್ಟಿಯಲ್ಲಿ 14 ಮಂದಿಯ ಹೆಸರು ಒಳಗೊಂಡಿದೆ. ಕನಿಷ್ಠ ಎಂದರೆ 8,500 ರೂ. ಪರಿಹಾರ ನಿಗದಿಗೊಳಿಸಲಾಗಿದೆ.
ರಾಜ್ಯದ ಇತಿಹಾಸದಲ್ಲಿಯೇ ನಾಯಿ ಕಡಿತಕ್ಕೆ 5 ಲ.ರೂ. ಪರಿಹಾರ ಲಭಿಸಿರುವುದು ಇದೇ ಮೊದಲು. ಈ ನಡುವೆ ಇಬ್ಬರು ಸಾಕು ನಾಯಿ ಕಚ್ಚಿದ ಪ್ರಕರಣವನ್ನು ಕೂಡ ಬೀದಿ ನಾಯಿ ಕಡಿತ ಎಂದು ಸುಳ್ಳು ಹೇಳಿ ಪರಿಹಾರ ಪಡೆದುಕೊಳ್ಳಲು ಪ್ರಯತ್ನಿಸಿದ್ದರು. ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇನ್ನಿಬ್ಬರು ಸರಿಯಾದ ಮಾಹಿತಿ, ಸಾಕ್ಷ é ನೀಡಲು ವಿಫಲರಾಗಿದ್ದರಿಂದ ಅವರ ಅರ್ಜಿಯನ್ನೂ ವಜಾಗೊಳಿಸಲಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಜವಾಬ್ದಾರಿ
ಬೀದಿನಾಯಿಗಳನ್ನು ನಿಯಂತ್ರಿಸುವುದು ಆಯಾ ಪ್ರದೇಶದಲ್ಲಿನ ಸ್ಥಳೀಯಾಡಳಿತ ಸಂಸ್ಥೆ ಗಳ ಜವಾಬ್ದಾರಿಯಾಗಿದೆ. ಆದುದರಿಂದ ಪರಿಹಾರವನ್ನು ಕೂಡ ಅವರದ್ದೇ ಆದ ನಿಧಿಯಿಂದ ನೀಡಬೇಕು ಎಂದು ಆದೇಶಿಸಲಾಗಿದೆ.