Advertisement
ಬೆಂಗಳೂರು ಉತ್ತರ ತಾಲೂಕಿನ ವ್ಯಾಪ್ತಿಗೆ ಸೇರುವ ಹುಸ್ಕೂರ್ ಗ್ರಾಪಂನಲ್ಲಿ ಹತ್ತಕ್ಕೂ ಅಧಿಕ ಗ್ರಾಮಗಳಿವೆ. ತೋಟಗೆರೆ, ಬೊಮ್ಮಶೆಟ್ಟಿಹಳ್ಳಿ, ರಾಮಪಾಳ್ಯ,ಅಗ್ರಹಾರ ಪಾಳ್ಯ, ಹೊಸಹಳ್ಳಿ ಪಾಳ್ಯ, ಹುಚ್ಚನ ಪಾಳ್ಯ, ಗೋವಿಂದಪುರ,ಹೊನ್ನಸಂದ್ರ, ವಡೇರಹಳ್ಳಿ, ಬೆತ್ತನಗೆರೆ ಗ್ರಾಮಗಳು ಹೂಸ್ಕೂರ್ ಗ್ರಾಪಂ ವ್ಯಾಪ್ತಿಗೆ ಸೇರಲಿವೆ. ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆ ವರೆಗೂ ನೂರಾರು ಸಂಖ್ಯೆಯಲ್ಲಿ ಮಕ್ಕಳು ಕಲಿಕೆಯಲ್ಲಿ ನಿರತರಾಗಿದ್ದಾರೆ. ಶಾಲಾ ಹಂತದಲ್ಲೆ ವಿದ್ಯಾರ್ಥಿಗಳನ್ನು ಪರಿಸದತ್ತ ಆಕರ್ಷಿಸುವ ಸದುದ್ದೇಶ ಕೂಡ ಇದರಲ್ಲಿ ಸೇರಿದೆ.
Related Articles
Advertisement
ಕೃಷಿಯತ್ತ ಒಲವು ತೋರಲು ಸಹಕಾರಿ: ಮಕ್ಕಳಲ್ಲಿ ಪರಿಸರ ಆಸಕ್ತಿ ಮೂಡಿಸಲು ಇಂತಹ ಕಾರ್ಯ ಕ್ರಮಗಳು ಅನುಕೂಲವಾಗಲಿದೆ. ಭವಿಷ್ಯತ್ತಿನ ದೃಷ್ಟಿ ಯಿಂದ ಇಂತಹ ಕಾರ್ಯಕ್ರಮಗಳು ರೂಪಿತ ವಾಗಬೇಕು. ಮಕ್ಕಳಲ್ಲಿ ನಮ್ಮ ಸುತ್ತಮುತ್ತಲಿನ ಪರಿ ಸರದ ಬಗ್ಗೆ ಅರಿವು ಮೂಡುವುದರ ಜತೆಗೆ ಮುಂದಿ ದಿನಗಳಲ್ಲಿ ಮಕ್ಕಳು ಕೃಷಿ ಕ್ಷೇತ್ರದತ್ತ ಒಲವು ತೋರಲು ಕೂಡ ಇದು ಸಹಾಕವಾಗಲಿದೆ ಎಂದು ನರಸೀಪುರ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎನ್.ವಿ. ರಮೇಶ್ ಹೇಳುತ್ತಾರೆ.
ಗ್ರಾಪಂ ವ್ಯಾಪ್ತಿಯಲ್ಲಿರುವ ಸ್ಮಶಾನ,ಅರಣ್ಯ ಪ್ರದೇಶ ಸೇರಿದಂತೆ ಮತ್ತತಿರರ ಸ್ಥಳಗಳಲ್ಲಿ ಗಿಡುವ ಕಾರ್ಯಕ್ರಮವನ್ನು ಗ್ರಾಪಂನಿಂದ ಹಮ್ಮಿಕೊಳ್ಳುವ ಆಲೋಚನೆ ಇದೆ. ಆ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಗ್ರಾಪಂನಿಂದ ನರ್ಸರಿ ಅನ್ನು ಕೂಡ ತೆರೆಯಲಾಗಿದೆ. ಗಿಡಮರಗಳನ್ನು ಬೆಳೆಸಿ ಸಂರಕ್ಷಿಸುವುದಕ್ಕೆ ಪಂಚಾಯ್ತಿ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಪಂ ಕಾರ್ಯ ಕೇವಲ ಒಳಚರಂಡಿ, ರಸ್ತೆ ನಿರ್ಮಾಣ ಮಾಡುವುದು ಅಷ್ಟೇ ಅಲ್ಲ. ಪರಿಸರದ ಬಗ್ಗೆ ಕಾಳಜಿ ತೋರುವುದು ಸೇರಿದೆ. ಆ ಹಿನ್ನೆಲೆಯಲ್ಲೆ ಇದೀಗ ಗ್ರಾಪಂನ ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರದತ್ತ ಆಕರ್ಷಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿದೆ. ಮುಂದಿನಗಳಲ್ಲಿ ಸ್ಮಶಾನ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವ ಆಲೋಚನೆ ಇದೆ. – ರಾಜೇಶ್, ಪಿಡಿಒ, ಹೂಸ್ಕೂರ್ ಗ್ರಾಪಂ
-ದೇವೇಶ ಸೂರಗುಪ್ಪ