Advertisement

ಪಡುಮಲೆ ಅಭಿವೃದ್ಧಿಗೆ 5 ಕೋಟಿ ರೂ. ಯೋಜನೆ

04:10 PM Jan 05, 2018 | |

ಬಡಗನ್ನೂರು: ಪಡುಮಲೆ ಹಾಗೂ ಸಂಕಪಾಲ ಬೆಟ್ಟದ ಅಭಿವೃದ್ಧಿಗೆ ಸರಕಾರ 5 ಕೋಟಿ ರೂ. ಬಿಡುಗಡೆ ಮಾಡಿದೆ. ದೇಯಿ ಬೈದೆತಿ ಹಾಗೂ ಕೋಟಿ – ಚೆನ್ನಯರ 30 ಅಡಿ ಎತ್ತರದ ಮೂರ್ತಿ ನಿರ್ಮಾಣ, ಕೋಟಿ ಚೆನ್ನಯರ ಕಥಾನಕಗಳ ಚಿತ್ರಣ ಇತ್ಯಾದಿಗಳ ಮೂಲಕ ರಾಷ್ಟ್ರ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದಾಗಿ ಪುತ್ತೂರು ಶಾಸಕಿ ಟಿ. ಶಕುಂತಳಾ ಶೆಟ್ಟಿ ಹೇಳಿದರು.

Advertisement

ಕೊಯಿಲ-ಬಡಗನ್ನೂರು ದ.ಕ.ಜಿ.ಪಂ. ಹಿ.ಪ್ರಾ. ಶಾಲೆ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉದ್ಯಮಿ ಅಶೋಕ್‌ ರೈ ಕೋಡಿಂಬಾಡಿ ಮಾತನಾಡಿ, ಸಂಸ್ಕಾರ-ಸಂಸ್ಕೃತಿ ನೀಡಿ ಮಕ್ಕಳನ್ನು ಬೆಳೆಸಬೇಕು. ಅವರ ಪ್ರತಿಭೆಯನ್ನು ಬೆಳೆಸುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕೆಂದರು.

ಮಂಗಳೂರು ಸ್ವಾಭಿಮಾನ ಬಳಗ, ಕರ್ನಾಟಕ ರಕ್ಷಣೆ ವೇದಿಕೆ ಅಧ್ಯಕ್ಷ ಮಹಮ್ಮದ್‌ ಕುಕ್ಕುವಳ್ಳಿ ಮಾತನಾಡಿ, ಮುಚ್ಚುವ ಕನ್ನಡ ಶಾಲೆಗಳನ್ನು ಉಳಿಸಿ ರಕ್ಷಿಸಬೇಕು. ಮಕ್ಕಳ ಹೃದಯವನ್ನು ಶುದ್ಧೀಕರಿಸಿ ಉತ್ತಮ ಪ್ರಜೆಗಳಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು, ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂಜೀವ ರೈ ಕೆ.ಪಿ., ಉದ್ಯಮಿ ಸತೀಶ್‌ ರೈ ಕಟ್ಟಾವು, ಎಸ್‌ ಡಿಎಂಸಿ ಉಪಾಧ್ಯಕ್ಷೆ ಸುಶೀಲಾ ಪಕ್ಯೊಡ್‌, ಉದ್ಯಮಿ ಸೀತಾರಾಮ ರೈ, ಬೆಂಗಳೂರು ಹೈಕೋರ್ಟ್‌ ವಕೀಲ ಲತೀಫ್ ಪಾಲಡ್ಕ ಮಾತನಾಡಿ ಶುಭ ಹಾರೈಸಿದರು. ಗ್ರಾ.ಪಂ. ಸದಸ್ಯ ಗುರುಪ್ರಸಾದ್‌ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್‌ ರೈ ಕೊಯಿಲ ವೇದಿಕೆಯಲ್ಲಿದ್ದರು.

ಮುಖ್ಯ ಶಿಕ್ಷಕ ಉದಯ ಕುಮಾರ್‌ ಶರವು ಸ್ವಾಗತಿಸಿ, ವರದಿ ಮಂಡಿಸಿ, ವಂದಿಸಿದರು. ಸಹಶಿಕ್ಷಕ ಗಿರೀಶ್‌ ಸುವರ್ಣ ಹಾಗೂ ಕುಟ್ಟಿನೊಪ್ಪಿನಡ್ಕ ಶಾಲಾ ಶಿಕ್ಷಕಿ ಮಲ್ಲಿಕಾ ಗೋಪಾಲ್‌ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ಗುರುವ ಡಿ.,
ಗೌರವ ಶಿಕ್ಷಕಿಯರಾದ ಪ್ರಿಯಾ ಎಸ್‌., ಸರಳಾ ಡಿ. ಸಹಕರಿಸಿದರು. ಅಂಗನವಾಡಿ ಪುಟಾಣಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಾದಗಾನ ಕೌಸ್ತುಭ ಗಾಯಕ ಪುತ್ತೂರು ಚಂದ್ರಶೇಖರ ಹೆಗ್ಡೆ ನಿರ್ದೇಶನದ ಪುನೀತ್‌ ಆರ್ಕೆಸ್ಟ್ರಾ ಪುತ್ತೂರು ಇವರಿಂದ ‘ಫಿಲ್ಮಿ ಡ್ಯಾನ್ಸ್‌’ ಸಂಗೀತ ರಸಮಂಜರಿ ನಡೆಯಿತು.

Advertisement

ಅಶೋಕ್‌ ರೈ, ಮಹಮದ್‌ ಕುಕ್ಕುವಳ್ಳಿ, ಶಾಲೆಗೆ 40 ಸಾವಿರ ರೂ. ವೆಚ್ಚದಲ್ಲಿ ಧ್ವಜಕಟ್ಟೆ ನಿರ್ಮಿಸಿಕೊಟ್ಟ ವಿಜಯ ಬ್ಯಾಂಕ್‌ ನಿವೃತ್ತ ಅಧಿಕಾರಿ ಬಾಬು ರೈ ದಂಪತಿ, ಉದ್ಯಮಿ ಸತೀಶ್‌ ರೈ ಕಟ್ಟಾವು, ಕಳೆದ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 598 ಅಂಕ ಪಡೆದ ಮಣಿತ್‌ ಸಹೋದರರನ್ನು ಅಭಿನಂದಿಸಲಾಯಿತು. ಕ್ರೀಡಾಕೂಟದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿವಿಧ ಕಾಮಗಾರಿಗಳ ಘೋಷಣೆ
ಮುಡಿಪಿನಡ್ಕ – ಮೈಂದನಡ್ಕ ರಸ್ತೆ ಅಭಿವೃದ್ಧಿ 1ಕೋಟಿ ರೂ. ವೆಚ್ಚದಲ್ಲಿ ಆರಂಭವಾಗಿದೆ. ಮೈಂದನಡ್ಕ – ಪದಡ್ಕದ ವರೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಆಗುತ್ತಿದೆ. ಈಶ್ವರಮಂಗಲ – ಸುಳ್ಯಪದವು ರಸ್ತೆಯ ಮೀನಾವು ಎಂಬಲ್ಲಿ ಕಾಂಕ್ರೀಟ್‌ ಹಾಕಲು 10 ಲಕ್ಷ ರೂ. ಹಾಗೂ ಗೋಳಿತ್ತಡಿ – ಕುತ್ಯಾಳ ಪಾದೆ ದೇವಸ್ಥಾನದವರೆಗಿನ ರಸ್ತೆ ಡಾಮರೀಕರಣ ಪ್ರಾರಂಭಿಸಲಾಗಿದೆ. ಎರಡು ತಿಂಗಳಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು. ಪಡುವನ್ನೂರು ಗ್ರಾಮದಲ್ಲಿ ಸೋಲಾರ್‌ ದೀಪಕ್ಕಾಗಿ ಪತ್ರ ಬರೆದಿದ್ದೇನೆ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next