Advertisement
ತುಳುನಾಡಿನ ನಂಬಿಕೆ, ಆಚರಣೆಗೆ ಪೂರಕವಾಗಿ ಪತ್ತನಾಜೆಯ ಅಗೇಲು, ತಂಬಿಲಾದಿಗಳು ಮೇ 25ರಂದು ನಡೆಯಲಿವೆ. ಹತ್ತನಾವಧಿಯಂದು ತುಳುನಾಡಿನಲ್ಲಿ ದೈವಾರಾಧನೆಗೆ ಪೂರಕವಾಗಿ ಬನಗಳಲ್ಲಿ ದೈವಗಳಿಗೆ ಕೋಳಿ ಬಲಿ ಕೊಡುವುದು, ಎಳನೀರು ಹಾಗೂ ಇತರ ಪರಿಕರಗಳನ್ನು ಇಟ್ಟು ದೈವಗಳಿಗೆ ಪ್ರಾರ್ಥನೆ ಸಲ್ಲಿಸುವ ಆಚರಣೆ ರೂಢಿಯಲ್ಲಿದೆ. ಈ ದಿನ ಗುಳಿಗ, ಭೈರವ ದೈವ ಮೊದಲಾದ ದೈವಗಳಿಗೆ ಭಕ್ತರು ನಿವೇದನೆಗಳನ್ನು ಮಾಡಿ ಪ್ರಾರ್ಥಿಸುತ್ತಾರೆ, ಹರಕೆಗಳನ್ನು ಒಪ್ಪಿಸುತ್ತಾರೆ. ಹತ್ತನಾವಧಿಯ ವರೆಗೆ ಭೂತ ಕೋಲಗಳು ನಡೆದು ಅನಂತರದಲ್ಲಿ ಗೆಜ್ಜೆ ಬಿಚ್ಚುವ ನಂಬಿಕೆ ಇರುವುದರಿಂದ ಹತ್ತನಾವಧಿಯ ವರೆಗೆ ಊರಿನ ಕೋಳಿಗಳಿಗೆ ವಿಪರೀತ ಬೇಡಿಕೆ ಇದೆ.
ಶುಕ್ರವಾರ ಸಾದಾ ಊರಿನ ಕೋಳಿ ಕೆ.ಜಿ.ಯೊಂದರ 420 ರೂ.ಗೆ ಮಾರಾಟವಾಗಿದೆ. ಉಳಿದಂತೆ ಮಂಡ್ಯ, ಮೈಸೂರು ಭಾಗದ ಹಾಗೂ ತಮಿಳುನಾಡಿನಿಂದ ಆಮದಾಗುವ ಹೈಬ್ರಿಡ್ ನಾಟಿ ಕೋಳಿಗಳಿಗೆ ಕೆ.ಜಿ.ಯೊಂದರ 300 ರೂ. ತನಕ ಮಾರಾಟವಾಗುತ್ತಿದೆ. ಮನೆಯಲ್ಲಿ ಸಾಕುವವರಿಲ್ಲ
ನಾಟಿ ಕೋಳಿ ಮಾಂಸ ಹೆಚ್ಚು ರುಚಿಕರವಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಕೆಲವರು ನಾಟಿ ಕೋಳಿ ಸಾಕುತ್ತಾರೆ. ಹತ್ತನಾವಧಿ ಸಮಯದಲ್ಲಿ ವಿಪರೀತ ಬೇಡಿಕೆ ಇರುತ್ತದೆ. ಸಾಕಣೆದಾರರು ಕೇಳಿದ ಬೆಲೆಗೆ ಖರೀದಿಸುತ್ತಾರೆ. ನಾಟಿ ಕೋಳಿಯ ಬೇಡಿಕೆಯನ್ನು ಗಮನಿಸಿ ಬ್ರಾಯ್ಲರ್, ಟೈಸನ್ ಕೋಳಿ ಫಾರ್ಮ್ಗಳು ಇರುವಂತೆ ನಾಟಿ ಕೋಳಿ ಮಾರಾಟದ ಫಾರ್ಮ್ಗಳೂ ಹುಟ್ಟಿಕೊಂಡಿವೆ. ಪುತ್ತೂರಿನ ಪಡೀಲ್‌ನಲ್ಲಿ ಇಂತಹ ಎರಡು ಫಾರ್ಮ್ಗಳಿವೆ. ಸೀಸನ್ ಅವಧಿಗೆ ನಾಟಿ ಕೋಳಿ ಫಾರ್ಮ್ನಲ್ಲಿ ಕ್ಯೂ ಆರಂಭಗೊಳ್ಳುತ್ತದೆ. ಇಲ್ಲಿನ ಎರಡು ಅಂಗಡಿಗಳಲ್ಲಿ ವಾರದಲ್ಲಿ 20 ಕ್ವಿಂಟಾಲ್ ನಾಟಿ ಕೋಳಿ ಮಾರಾಟವಾಗುತ್ತದೆ. ಈ ಕೋಳಿಗಳನ್ನು ಚೆನ್ನೈಯಿಂದ ತರಿಸಲಾಗುತ್ತದೆ. ಅವುಗಳ ತೂಕ ಜಾಸ್ತಿ ಇರುತ್ತದೆ. ಇನ್ನು ನಾಟಿ ಕೋಳಿಗೆ ಪರ್ಯಾಯವಾಗಿ ಗಿರಿರಾಜ ಕೋಳಿಗಳೂ ಲಭ್ಯವಾಗುತ್ತಿದ್ದರೂ ಈಗ ಮೈಸೂರು, ಮಂಡ್ಯಗಳಿಂದ ಆಮದಾಗುವ ನಾಟಿ ಕೋಳಿಗಳಿಗೆ ಹೆಚ್ಚು ಬೇಡಿಕೆ ಇದೆ.
Related Articles
ಪತ್ತನಾಜೆಯ ಸೀಸನ್‌ನ ವಾರ ವೊಂದರಲ್ಲಿ 10 ಕ್ವಿಂಟಾಲ್‌ಗೂ ಅಧಿಕ ನಾಟಿ ಕೋಳಿ ಮಾರಾಟವಾಗುತ್ತದೆ. ಮಂಗಳೂರು, ಬೆಳ್ತಂಗಡಿ, ಸುಳ್ಯ ಸಹಿತ ಜಿಲ್ಲೆಯ ವಿವಿಧ ಕಡೆ ಗಳಿಂದ ನಾಟಿ ಕೋಳಿಗಾಗಿ ಬರು ತ್ತಾರೆ. ಪತ್ತನಾಜೆಯ ಬಳಿಕ ದೈವಾ ರಾಧನೆಗಳು ಇರದಿರುವುದರಿಂದ ಬೇಡಿಕೆ ಕಡಿಮೆಯಾಗುತ್ತದೆ ಎನ್ನುತ್ತಾರೆ ವ್ಯಾಪಾರಿ ಮೋಹನ್ ಶೆಟ್ಟಿ.
Advertisement