Advertisement
“ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ ನೆರವು ಪ್ರದಾನ ಕಾರ್ಯಕ್ರಮ ಡಿಸೆಂಬರ್ 25ರಂದು ಸಂಜೆ 3 ಗಂಟೆಗೆ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಚಲನಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್, ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಸಂಘ ಸಂಸ್ಥೆಗಳ ಮೂಲಕ ಆಯ್ಕೆ ಮಾಡಿರುವುದರಿಂದ ಫಲಾನುಭವಿಗಳನ್ನು ಕರೆದುಕೊಂಡು ಬರುವ ಹೊಣೆಗಾರಿಕೆಯನ್ನು ಆಯಾ ಪ್ರದೇಶದ ಸಂಘ ಸಂಸ್ಥೆಗಳಿಗೆ ನೀಡಲಾಗಿದೆ. ಅವರ ಪ್ರಯಾಣ ವೆಚ್ಚವನ್ನು ನಮ್ಮ ಸಂಸ್ಥೆಯೇ ಭರಿಸುತ್ತದೆ. ನೆರವು ವಿತರಣೆ ಸಮಾರಂಭದಲ್ಲಿ 25 ಕೌಂಟರ್ ಗಳನು ತೆರೆಯಲಾಗುತ್ತದೆ. ಅಲ್ಲಿ ಫಲಾನುಭವಿಗಳು ತಮ್ಮ ಹೆಸರು ಹೇಳಿ ಮತ್ತು ಈಗಾಗಲೇ ವಿತರಣೆ ಮಾಡಿರುವ ಟೋಕನ್ ಗಳನ್ನು ತೋರಿಸಿ ಚೆಕ್ ಪಡೆಯಬಹುದು. ಎಲ್ಲಿಯೂ ಅನವಶ್ಯಕ ಗೊಂದಲ ಉಂಟಾಗದಂತೆ ನೋಡಿಕೊಳ್ಳಲಾಗಿದೆ” ಎಂದರು.
Related Articles
Advertisement
ಡಿಜಿಟಲ್ ಕಂದಕ ನಿವಾರಣೆಗೆ ಪ್ರಯತ್ನ: ತಮಗೆಲ್ಲ ಗೊತ್ತಿದೆ, ಆಧುನಿಕ ತಂತ್ರಜ್ಞಾನ ನಗರಗಳಲ್ಲಿ ಲಭ್ಯವಾದಷ್ಟು ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಲಭ್ಯ ಇಲ್ಲ. ಇದು ಶಾಲಾ ಮಕ್ಕಳ ಕಲಿಕಾ ಸೌಲಭ್ಯಗಳಿಗೂ ಅನ್ವಯಿಸುತ್ತದೆ. ಬಂಟ್ವಾಳದ ಶಾಲೆಯೊಂದಕ್ಕೆ ಕಂಪ್ಯೂಟರ್ ನೀಡುವ ಮೂಲಕ ಅಲ್ಲಿಯ ಮಕ್ಕಳನ್ನು ಕಂಪ್ಯೂಟರ್ ಸಾಕ್ಶರರನ್ನಾಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಡಿಜಿಟಲ್ ಕಂದಕ ನಿವಾರಣೆಯ ನಿಟ್ಟಿನಲ್ಲಿ ನಮ್ಮದೊಂದು ಸಣ್ಣ ಪ್ರಯತ್ನ ಇದು.
ಶೌಚಾಲಯಕ್ಕೆ ನೆರವು: ನೈರ್ಮಲ್ಯಕ್ಕೆ ಶಾಲೆಗಳೇ ಮೊದಲ ಪಾಠ ಶಾಲೆ ಎನ್ನಬಹುದು. ಸಾರ್ವಜನಿಕ ಬದುಕಿನಲ್ಲಿ ನೈರ್ಮಲ್ಯ ಪಾಲನೆಯನ್ನು ಮಕ್ಕಳಿಗೆ ಕಲಿಸುವಲ್ಲಿ ಶಾಲೆಗಳ ಪಾತ್ರ ಮಹತ್ವದ್ದು. ಹೆಣ್ಣು ಮಕ್ಕಳ ಪಾಲಿಗೆ ಶೌಚಾಲಯ ಘನತೆಗೆ ಸಂಬಂಧಿಸಿದ ಸಂಗತಿ. ಕಾಪು ಕೈಪುಂಜಾಲಿನಲ್ಲಿ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಅಧ್ಯಕ್ಷರಾಗಿರುವ ವಿದ್ಯಾ ಸಾಗರ ಎಜ್ಯುಕೇಶನ್ ಟ್ರಸ್ಟ್ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ನೆರವು ವಿತರಿಸಲಾಗುವುದು.
ಕ್ರೀಡಾ ಪ್ರೋತ್ಸಾಹ: ಸರಕಾರದ ಖೇಲೋ ಇಂಡಿಯಾದಂತಹ ಯೋಜನೆಗಳು ಗ್ರಾಮೀಣ ಕ್ರೀಡಾಳುಗಳನ್ನು ಪ್ರೋತ್ಸಾಹಿಸುವ ಮಹತ್ವಾಕಾಂಕ್ಷಿ ಯೋಜನೆಗಳು. ಇದರಿಂದಾಗಿ ನಮ್ಮ ದೇಶದ ಅನೇಕ ಪ್ರತಿಭೆಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅವಕಾಶ ಲಭ್ಯವಾಗಿದೆ. ನಮ್ಮ ಈ ನೆರವಿನ ಯೋಜನೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ನಮ್ಮ ಜಿಲ್ಲೆಯ ಕ್ರೀಡಾಳು ಆಯುಷ್ ಶೆಟ್ಟಿ ಅಮೆರಿಕಾದಲ್ಲಿ ನಡೆದ ವಿಶ್ವ ಜ್ಯೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಪಡೆದವರು. ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಹತ್ತನೇ ಶಟ್ಲರ್ ಮತ್ತು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ಪಡೆದ ಕರ್ನಾಟಕ ಮೊದಲನೇ ಶಟ್ಲರ್ ಅರ್ಜುನ್ ಶೆಟ್ಟಿ ಅವರಿಗೆ ನೆರವು ನೀಡಲು ನಾವು ಹರ್ಷಿಸುತ್ತೇವೆ.
ಶೈಕ್ಷಣಿಕ ಸಾಧಕರಿಗೆ ವಿದ್ಯಾರ್ಥಿ ವೇತನ: ಪಿಯುಸಿಯಲ್ಲಿ 600/600 ಅಂಕ ಗಳಿಸಿದ ಅನನ್ಯ ಮತ್ತು ಎಸ್ಎಸ್ಎಲ್ಸಿಯಲ್ಲಿ 625/625 ಅಂಕ ಗಳಿಸಿದ ವೀಕ್ಷಿತಾ ಅವರನ್ನು ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಿ ವಿದ್ಯಾರ್ಥಿ ವೇತನ ನೀಡಲಾಗುವುದು.