Advertisement

ಭಾರತದಲ್ಲಿ ಟಿಕ್‌ಟಾಕ್‌ ನಿಷೇಧದಿಂದ ಪ್ರತಿದಿನ 4.5 ಕೋಟಿ ರೂ. ನಷ್ಟ!

01:00 AM Apr 24, 2019 | mahesh |

ಹೊಸದಿಲ್ಲಿ: ಕ್ರೇಜ್‌ ಹುಟ್ಟಿಸಿದ್ದ ಟಿಕ್‌ಟಾಕ್‌ ಎಂಬ ವಿಡಿಯೋ ಶೇರ್‌ ಆ್ಯಪ್‌ಗೆ ಕಳೆದ ವಾರ ಮದ್ರಾಸ್‌ ಹೈಕೋರ್ಟ್‌ ನಿಷೇಧ ಹೇರಿದ್ದು, ಈ ಆ್ಯಪ್‌ನ ಮಾತೃಸಂಸ್ಥೆಗೆ ಭಾರಿ ಹೊಡೆತ ನೀಡಿದೆ. ಚೀನ ಮೂಲದ ಬೈಟ್‌ಡ್ಯಾನ್ಸ್‌ ಕಂಪನಿಯ ಆ್ಯಪ್‌ ಇದಾಗಿದ್ದು, ನಿಷೇಧ ಜಾರಿಯಾದಾಗಿನಿಂದ ನಿತ್ಯ 4.5 ಕೋಟಿ ರೂ. ನಷ್ಟವಾಗುತ್ತಿದೆ. ಅಷ್ಟೇ ಅಲ್ಲ, ಸುಮಾರು 250 ಜನರ ಉದ್ಯೋಗಕ್ಕೂ ಇದು ಕುತ್ತು ತಂದಿದೆ. ಈ ಆ್ಯಪ್‌ ಅನ್ನು ಭಾರತದಲ್ಲಿ ಸುಮಾರು 30 ಕೋಟಿ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಜಗತ್ತಿನ ಅತ್ಯಂತ ಯಶಸ್ವಿ ಸ್ಟಾರ್ಟಪ್‌ಗ್ಳಲ್ಲಿ ಇದೂ ಒಂದು. ಈ ಕಂಪನಿಯಲ್ಲಿ ಜಪಾನ್‌ ಸಾಫ್ಟ್ ಬ್ಯಾಂಕ್‌ ಹಾಗೂ ಜನರಲ್‌ ಅಟ್ಲಾಂಟಿಕ್‌ ಹಾಗೂ ಸೀಕ್ವಿಯಾ ಸಂಸ್ಥೆಗಳು ಹೂಡಿಕೆ ಮಾಡಿವೆ, ಇದೇ ಕಂಪನಿ ಹೆಲೋ, ವಿಗೊ ವೀಡಿಯೋ ಎಂಬ ಆ್ಯಪ್‌ಗ್ಳನ್ನೂ ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next