ಕುಛ್ (ಗುಜರಾತ್): ಭಾರತೀಯ ಕರಾವಳಿ ಪಡೆ(ಐಸಿಜಿ) ಮತ್ತು ಗುಜರಾತ್ ಭಯೋತ್ಪಾದಕ ನಿಗ್ರಹ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕರಾವಳಿ ಪ್ರದೇಶದಲ್ಲಿ ಪಾಕಿಸ್ತಾನಿ ಬೋಟ್ ನಲ್ಲಿದ್ದ ಸುಮಾರು 350 ಕೋಟಿ ರೂಪಾಯಿ ಮೌಲ್ಯದ 50 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:9 ಜನರನ್ನು ಬಲಿ ಪಡೆದ ನರಭಕ್ಷಕ ಹುಲಿಯ ಬೇಟೆಗೆ ಕಾರ್ಯಾಚರಣೆ
ಗುಜರಾತ್ ಕರಾವಳಿ ಪ್ರದೇಶದತ್ತ ಆಗಮಿಸುತ್ತಿದ್ದ ಪಾಕಿಸ್ತಾನದ ಬೋಟ್ ಅನ್ನು ವಶಪಡಿಸಿಕೊಂಡಿದ್ದು, ಆರು ಪಾಕಿಸ್ತಾನಿಯರನ್ನು ಬಂಧಿಸಿರುವುದಾಗಿ ಐಸಿಜಿ ಮತ್ತು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೆರಾಯಿನ್ ಕಳ್ಳಸಾಗಣೆ ಮತ್ತು ಬೋಟ್ ಕುರಿತು ಗುಜರಾತ್ ನ ಜಖಾವು ಬಂದರು ಪ್ರದೇಶದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಶನಿವಾರ (ಅಕ್ಟೋಬರ್ 08) ನಸುಕಿನ ವೇಳೆ ಭಾರತೀಯ (ಗುಜರಾತ್) ಅರಬ್ಬಿ ಸಮುದ್ರ ಪ್ರದೇಶದತ್ತ ಅನುಮಾನಸ್ಪದವಾಗಿ ಪಾಕಿಸ್ತಾನದ ಬೋಟ್ ಆಗಮಿಸುತ್ತಿರುವುದು ಗಮನಕ್ಕೆ ಬಂದಿತ್ತು. ಇದು ಸುಮಾರು 5 ನಾಟಿಕಲ್ ಮೈಲ್ ದೂರದಷ್ಟು ಅಂತಾರಾಷ್ಟ್ರೀಯ ಜಲ ಮಾರ್ಗದೊಳಕ್ಕೆ ಬಂದಿತ್ತು. ಬಳಿಕ ಜಂಟಿ ಕಾರ್ಯಾಚರಣೆಯಲ್ಲಿ ಬೋಟ್ ಅನ್ನು ಬಲವಂತವಾಗಿ ತಡೆದು ನಿಲ್ಲಿಸಲಾಗಿತ್ತು. ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ 5 ಗೋಣಿ ಚೀಲಗಳಲ್ಲಿ ತುಂಬಿಸಿ ಇಟ್ಟಿದ್ದ 350 ಕೋಟಿ ರೂ. ಮೌಲ್ಯದ 50 ಕೆಜಿ ಹೆರಾಯಿನ್ ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.