Advertisement

ದಾಖಲೆ ಇಲ್ಲದ 34 ಲಕ್ಷ ರೂ. ನಗದು ಪತ್ತೆ

01:00 PM Apr 12, 2018 | Team Udayavani |

ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ನವಯುಗ ಟೋಲ್‌ಗೇಟ್‌ ಬಳಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 36 ಲಕ್ಷ ರೂ. ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಎರಡು ಟಾಟಾ ಸುಮೋ ವಾಹನಗಳಲ್ಲಿ 70 ಲಕ್ಷ ರೂ. ಹಣವನ್ನು ಸಾಗಿಸುತ್ತಿರುವ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಟೋಲ್‌ಗೇಟ್‌ ಬಳಿ ತಡೆದು ಪರಿಶೀಲಿಸಿದ್ದರು. ಈ ವೇಳೆ 36 ಲಕ್ಷ ರೂ.ಗೆ ದಾಖಲೆಗಳನ್ನು ಒದಗಿಸಿದ ಖಾಸಗಿ ಬ್ಯಾಂಕ್‌ನ ಅಧಿಕಾರಿಗಳು, 34 ಲಕ್ಷಕ್ಕೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ಇದು ಬ್ಯಾಂಕ್‌ನ ಹಣ ಎಂದಷ್ಟೇ ಹೇಳುತ್ತಿದ್ದರು. ಈ ಸಂಬಂಧ ಚುನಾವಣಾಧಿಕಾರಿಗಳು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬ್ಯಾಂಕ್‌ ಅಧಿಕಾರಿಗಳು ಹಾಗೂ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next