Advertisement

ರಾಜ್ಯದ ವಿವಿಧೆಡೆ 3.33 ಕೋಟಿ ರೂ. ನಗದು ವಶಕ್ಕೆ

06:30 AM Apr 08, 2018 | |

ಬೆಂಗಳೂರು: ಶನಿವಾರದವರೆಗೆ ರಾಜ್ಯದಾದ್ಯಂತ ಒಟ್ಟು 3.33 ಕೋಟಿ ರೂ. ಹಾಗೂ ಒಂದು ವಾಹನಗಳನ್ನು ಜಪ್ತಿ ಮಾಡಲಾಗಿದ್ದು, 1.18 ಕೋಟಿ ರೂ. ವೆಚ್ಚದ ವಿವಿಧ ವಸ್ತುಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ವಿಚಕ್ಷಣ ದಳದ ಅಧಿಕಾರಿಗಳು, ಸ್ಥಿರ ವಿಚಕ್ಷಣದ ದಳ ಹಾಗೂ ಪೊಲೀಸ್‌ ಅಧಿಕಾರಿಗಳು ವಿವಿಧ ಕಡೆಗಳಲ್ಲಿ 19 ವಾಹನಗಳು, ಮದ್ಯ, ದೋಸೆ ತವಾಗಳು, ಅಡುಗೆ ಪಾತ್ರೆಗಳು, ಶಾಮಿಯಾನ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಒಟ್ಟಾರೆ 3,33,50,880 ಕೋಟಿ ರೂ. ನಗದು ಹಾಗೂ 1,18,20,272 ರೂ. ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿದಂತೆ 18 ಪ್ರಕರಣಗಳಲ್ಲಿ ಪ್ರಾಥಮಿಕ ತನಿಖಾ ವರದಿ ದಾಖಲಾಗಿವೆ.

ಶನಿವಾರ ಅಬಕಾರಿ ಇಲಾಖೆಯಿ 1209.76 ಲೀಟರ್‌ಗಳಷ್ಟು ಐಎಂಎಲ್‌ ಮದ್ಯವನ್ನು ಹಾಗೂ 5,03,946 ಮೌಲ್ಯದ ಇತರೆ ಮದ್ಯವನ್ನು ವಶಕ್ಕೆ ಪಡೆದುಕೊಂಡು 41 ಪ್ರಕರಣಗಳನ್ನು ದಾಖಲಿಸಿದೆ. ಮದ್ಯದ ಪರವಾನಗಿ ಉಲ್ಲಂ ಸಿದ 51 ಪ್ರಕರಣಗಳನ್ನು ದಾಖಲಿಸಿದೆ. ಉಳಿದಂತೆ ಈವರೆಗೆ 462 ಮದ್ಯ ಪರವಾನಗಿ ಉಲ್ಲಂಘನೆ ಹಾಗೂ ಅಬಕಾರಿ ಕಾಯ್ದೆ 1965ರ 15 (15) ನಿಯಮ ಉಲ್ಲಂಘನೆ ಅನ್ವಯ 828 ಪ್ರಕರಣಗಳನ್ನು ದಾಖಲಿಸಿದ್ದು, ಎನ್‌ಡಿಪಿಎಸ್‌ ಕಾಯ್ದೆಯಡಿ 2 ಪ್ರಕರಣ ದಾಖಲಿಸಿ, ಒಟ್ಟು 121 ಮಾದರಿಯ ವಾಹನಗಳನ್ನು ವಶಕ್ಕೆ ಪಡೆದಿದೆ.

ಕಾನೂನು ಮತ್ತು ಸುವ್ಯವಸ್ಥೆ
ಈವರೆಗೆ 3054 ಪರವಾನಗಿ ಹೊಂದಿರುವ ಶಸ್ತ್ರಾಸ್ತಗಳನ್ನು ದಾಸ್ತಾನು ಮಾಡಲಾಗಿದ್ದು, ಶುಕ್ರವಾರದಿಂದ ಶನಿವಾರದವರೆಗೆ 966 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. ಜತೆಗೆ 1807 ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಲಾಗಿದ್ದು, ಸಿಆರ್‌ಪಿಸಿ ಕಾಯ್ದೆಯಡಿ 7596 ಪ್ರಕರಣಗಳನ್ನು, 797 ನಾಕಾಗಳನ್ನು ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಒಟ್ಟಾರೆಯಾಗಿ 90,204 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದ್ದು, 02 ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಗೊಳಿಸಿ, 50 ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇನ್ನು ಸಿಆರ್‌ಪಿಸಿ ಕಾಯ್ದೆಯಡಿ 8844 ಪ್ರಕರಣಗಳನ್ನು ದಾಖಲಿಸಲಾಗಿದ್ದು, 6582 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆದು, 14,028 ಜಾಮೀನು ರಹಿತ ವಾರೆಂಟ್‌ ಹೊರಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next