Advertisement
ಕಾಶಿ ಹೊಳೆಯ ಸನಿಹ ವೆಂಟೆಂಡ್ ಡ್ಯಾಮ್
ದೇಗುಲ ಸಹಿತ ಕ್ಷೇತ್ರದ ನಿವಾಸಿಗಳಿಗೆ ಬೇಸಿಗೆಯಲ್ಲಿ ನೀರಿನ ûಾಮ ಎದುರಾಗುತ್ತಿದ್ದು ಇದಕ್ಕೊಂದ್ದ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಾಜಿ ಜಿಲ್ಲಾಧಿ ಕಾರಿ ಡಾ. ವಿಶಾಲ್ ಸರಕಾರದ ಗಮನ ಸೆಳೆದಿದ್ದರು. ಅದರಂತೆ 68 ಕೋಟಿ ರೂ. ವೆಚ್ಚದಲ್ಲಿ ವೆಂಟೆಡ್ ಡ್ಯಾಂ, ಅನ್ನ ದಾಸೋಹ ಮಂದಿರ, ಒಳಚರಂಡಿ ಹಾಗೂ ನೀರು ಸರಬರಾಜು ವ್ಯವಸ್ಥೆಗೆ ದೇಗುಲದ ವತಿಯಿಂದ ಆರ್ಥಿಕ ವ್ಯವಸ್ಥೆ ಒದಗಿಸಲಾಗಿತ್ತು. ಸರಕಾರದ ಅನುಮೋದನೆಯೊಡನೆ ಕಾಮಗಾರಿ ಕೈಗೆತ್ತಿಗೊಳ್ಳಲಾಗಿತ್ತು.
ಕಿಂಡಿ ಅಣೆಕಟ್ಟು
ಈಗಾಗಲೇ ಕಿಂಡಿ ಅಣೆಕಟ್ಟು ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಮುಂದಿನ 6 ತಿಂಗಳೊಳಗೆೆ ಲೋಕಾರ್ಪಣೆಗೊಳ್ಳಲಿದೆ. ಆರಂಭದಲ್ಲಿ ಮ್ಯಾನುವಲ್ ಗೇಟ್ ನಿರ್ಮಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದರೂ ತದನಂತರ ಮೆಕ್ಯಾನಿಕಲ್ ಗೇಟ್ ಆಗಿ ಪರಿವರ್ತಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಮಂಜೂರಾದ 24.67 ಕೋಟಿ ರೂ. ಮೆಕ್ಯಾನಿಕಲ್ ಗೇಟ್ ನಿರ್ಮಾಣಕ್ಕೆ ಸಾಕಾಗದ ಕಾರಣ ಹೆಚ್ಚುವರಿ 8 ಕೋಟಿ ರೂ. ಮಂಜೂರಾತಿಯ ಬಗ್ಗೆ ಸರಕಾರದ ಗಮನ ಸೆಳೆಯಲಾಗಿತ್ತು. ಇದೀಗ ಸರಕಾರ ಪರಿಷ್ಕೃತ 33.40 ಕೋಟಿ ರೂ. ಅಂದಾಜಿನ ಕಾಮಗಾರಿಗೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Related Articles
ಲೋಕಾರ್ಪಣೆಗೆ ಸಜ್ಜು
21 ಕೋಟಿ ರೂ. ವೆಚ್ಚದಲ್ಲಿ ಸಕಲ ಸೌಕರ್ಯದೊಂದಿಗೆ ನಿರ್ಮಾಣ ಗೊಂಡಿರುವ, 1000 ಮಂದಿ ಭಕ್ತರು ಏಕ ಕಾಲದಲ್ಲಿ ಅನ್ನ ಪ್ರಸಾದ ಸ್ವೀಕರಿಸಲು ಯೋಗ್ಯವಾದ ಭೋಜನ ಶಾಲೆ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ.
Advertisement
ಲೋಕಾರ್ಪಣೆಗೆ ಸಿದ್ಧಕೊಲ್ಲೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ 68 ಕೋಟಿ ರೂ. ವೆಚ್ಚದಲ್ಲಿ ಆರಂಭ ಗೊಂಡಿರುವ ವೆಂಟೆಡ್ ಡ್ಯಾಮ್, ದಾಸೋಹ ಮಂದಿರ, ಒಳಚರಂಡಿ ಹಾಗೂ ನೀರು ಸರಬರಾಜು ವ್ಯವಸ್ಥೆಯು ಪೂರ್ಣಗೊಳ್ಳುತ್ತಿದ್ದು ಲೋಕಾರ್ಪಣೆ ಗೊಳ್ಳುತ್ತಿದೆ.
-ಎಚ್. ಹಾಲಪ್ಪ ,
ಕಾರ್ಯನಿರ್ವಹಣಾಧಿಕಾರಿ ಕೊಲ್ಲೂರು ದೇಗುಲ ಅಂತರ್ಜಲ ವೃದ್ಧಿ
ಕೊಲ್ಲೂರಿನ ನೀರಿನ ಸಮಸ್ಯೆ ಶಾಶ್ವತವಾಗಿ ನಿಭಾಯಿಸುವ ಸಲುವಾಗಿ ಕೈಗೆತ್ತಿ ಕೊಂಡಿರುವ ವೆಂಟೆಡ್ ಡ್ಯಾಮ್ ನಿರ್ಮಾಣ ಕಾಮಗಾರಿ ಪೂರ್ತಿಗೊಳ್ಳುತ್ತಿದೆ. ಡ್ಯಾಮ್ ನೀರಿನ ಬಳಕೆಯಿಂದ ಅಂತರ್‌ಜಲ ವೃದ್ಧಿಯಾಗುವುದು.
-ಹರೀಶ್ ಕುಮಾರ್ ಶೆಟ್ಟಿ,
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಕೊಲ್ಲೂರು ದೇಗುಲ