ಹೊಸದಿಲ್ಲಿ : ಕಳೆದ ನವೆಂಬರ್ 8ರಂದು ಕೇಂದ್ರ ಸರಕಾರ 500 ರೂ. ಹಾಗೂ 1,000 ರೂ. ಕರೆನ್ಸಿ ನೋಟುಗಳ ಅಪನಗದೀಕರಣ ಕೈಗೊಂಡ ಬಳಿಕದಲ್ಲಿ ಈ ತನಕ ಮರೆ ಮಾಚಲಾದ ಸುಮಾರು 3ರಿಂದ 4 ಲಕ್ಷ ಕೋಟಿ ರೂ.ಗಳನ್ನು ದೇಶಾದ್ಯಂತದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಜಮೆ ಮಾಡಲಾಗಿದೆ. ಈ ಎಲ್ಲ ವಹಿವಾಟುಗಳ ಕೂಲಂಕಷ ತನಿಖೆಯನ್ನು ಐಟಿ ಅಧಿಕಾರಿಗಳು ಕೈಗೊಂಡಿದ್ದಾರೆ ಎಂದು ಆದಾಯ ತೆರಿಗೆ ಮೂಲಗಳು ತಿಳಿಸಿವೆ.
ವಿವಿಧ ಬ್ಯಾಂಕುಗಳಲ್ಲಿ ನಿಷ್ಕ್ರಿಯವಾಗಿದ್ದ ಉಳಿತಾಯ ಖಾತೆಗಳಲ್ಲಿ 25,000 ಕೋಟಿ ರೂ.ಗಳನ್ನು ಜಮೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ರೀತಿ ದೇಶಾದ್ಯಂತದ ವಿವಿಧ ಸಹಕಾರಿ ಬ್ಯಾಂಕ್ ಖಾತೆಗಳಲ್ಲಿ ಅಕ್ರಮವಾಗಿ ಜಮೆ ಮಾಡಲಾಗಿರುವ 16,000 ಕೋಟಿ ರೂ.ಗಳ ಬಗ್ಗೆಯೂ ಜಾರಿ ನಿರ್ದೇಶನಾಲಯ ಮತ್ತು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಐಟಿ ಮೂಲಗಳು ಹೇಳಿವೆ.
ಕಳೆದ ವರ್ಷ ನವೆಂಬರ್ 9ರಿಂದ ತೊಡಗಿ ಈ ತನಕ ದೇಶದ ಈಶಾನ್ಯ ರಾಜ್ಯಗಳಲ್ಲಿನ ವಿವಿಧ ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ 10,700 ಕೋಟಿ ರೂ.ಗಳಿಗೂ ಅಧಿಕ ನಗದು ಹಣವನ್ನು ಜಮೆ ಮಾಡಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ.
Related Articles
ನೋಟು ಅಪನಗದೀಕರಣದ ಬಳಿಕದಲ್ಲಿ ದೇಶದಲ್ಲಿನ 60 ಲಕ್ಷ ಬ್ಯಾಂಕ್ ಖಾತೆಗಳಲ್ಲಿ ತಲಾ 2 ಲಕ್ಷ ರೂ.ಗಳಿಗೆ ಅಧಿಕ ಮೊತ್ತದ ಹಣವನ್ನು ಜಮೆ ಮಾಡಲಾಗಿದೆ.