Advertisement

ರಸ್ತೆಗಳ ಅಭಿವೃದ್ಧಿಗೆ 24 ಕೋಟಿ ರೂ. ಮಂಜೂರು

03:50 PM Aug 09, 2020 | Suhan S |

ಕಡೂರು: ಗ್ರಾಮ ಸಡಕ್‌ ಯೋಜನೆಯಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ಕಡೂರು ವಿಧಾನಸಭಾ ಕ್ಷೇತ್ರದ ನಾಲ್ಕು ಪ್ರಮುಖ ರಸ್ತೆಗಳ ಅಭಿವೃದ್ಧಿಗಾಗಿ 24.12 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ ಎಂದು ಮಾಜಿ ಶಾಸಕ ವೈ. ಎಸ್‌. ವಿ. ದತ್ತ ತಿಳಿಸಿದರು.

Advertisement

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರು ಹಾಸನ ಸಂಸದರಾಗಿದ್ದ ಅವಧಿಯಲ್ಲಿ ಕಡೂರು ಕ್ಷೇತ್ರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅನಂತರ ಹಾಸನ ಸಂಸದರಾಗಿ ಆಯ್ಕೆಯಾದ ಅವರ ಮೊಮ್ಮಗ ಪ್ರಜ್ವಲ್‌ ರೇವಣ್ಣಅವರು ದೇವೇಗೌಡರು ನೀಡಿದ್ದ ಪ್ರಸ್ತಾವನೆಯನ್ನು ನೀಡುವ ಮೂಲಕ ರಸ್ತೆಗಳ ಅಭಿವೃದ್ಧಿಗೆ 24.12 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ ಎಂದರು. 2019-20, 20-21ನೇ ಸಾಲಿನಲ್ಲಿ ಸಿಂಗಟಗೆರೆಯಿಂದ ಕೆರೆಸಂತೆ ರಸ್ತೆ ಮೂಲಕ ಮಲ್ಲಾಘಟ್ಟ ಸಂಪರ್ಕಿಸುವ 7.6 ಕಿಮೀ ರಸ್ತೆಗೆ 4.80 ಕೋಟಿ ರೂ. ಬಿಡುಗಡೆಯಾಗಿದೆ. ಚನ್ನಾಪುರ- ಗಿರಿಬೊಮ್ಮನಹಳ್ಳಿ ರಸ್ತೆಯಿಂದ ಪೀಲಾಪುರ ರಸ್ತೆ ಮೂಲಕ ಹಡಗಲು ರಸ್ತೆಯ 8. 60 ಕಿಮೀ ರಸ್ತೆ ನಿರ್ಮಾಣಕ್ಕೆ 7.38 ಕೋಟಿ ರೂ. ಬಿಡುಗಡೆಯಾಗಿದೆ. ತರೀಕೆರೆ ಗಡಿಭಾಗದಿಂದ ಅರೇಹಳ್ಳಿ ರಸ್ತೆ ಮೂಲಕ ಆಸಂದಿ ಗ್ರಾಮಕ್ಕ ಸಂಪರ್ಕ ಕಲ್ಪಿಸುವ ರಸ್ತೆಗೆ 8.016 ಕೋಟಿ ರೂ. ಬಿಡುಗಡೆಯಾಗಿದೆ ಹಾಗೂ ಪಿ. ಕೋಡಿಹಳ್ಳಿಯಿಂದ ಹುರುಕನಹಳ್ಳಿ ಗೇಟ್‌ ಮೂಲಕ ಹಿರೇಬಳ್ಳೇಕೆರೆಗೆ ಸಂಪರ್ಕ ಕಲ್ಪಿಸುವ 5.30 ಕಿಮೀ ರಸ್ತೆಗೆ 4 ಕೋಟಿ ರೂ. ಬಿಡುಗಡೆಯಾಗುವ ಮೂಲಕ ಮೂಲಕ ಒಟ್ಟು 22.12 ಕೋಟಿ ರೂ ಅನುದಾನವು ಮಂಜೂರಾಗಿದೆ ಎಂದು ದತ್ತ ತಿಳಿಸಿದರು.

ದೇವೇಗೌಡರು ಗ್ರಾಮೀಣ ಸಂಪರ್ಕ ರಸ್ತೆಗಳು ಜನರಿಗೆ ಅಗತ್ಯವಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿದ್ದ ಪ್ರಸ್ತಾವನೆಯನ್ನು ಪ್ರಜ್ವಲ್‌ ಅವರ ಮೂಲಕ ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next