Advertisement

ಕಾಪು ಕ್ಷೇತ್ರದಲ್ಲಿ  215 ಕೋ.ರೂ. ಅಭಿವೃದ್ಧಿ: ಸೊರಕೆ

11:17 AM Oct 28, 2017 | Team Udayavani |

ಕಾಪು: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಡಕ್‌, ಸಿಆರ್‌ಎಫ್‌, ವಾರಾಹಿ, ನಗರೋತ್ಥಾನ, ಒನ್‌ ಟೈಮ್‌ ಇಂಪ್ರೂವ್‌ಮೆಂಟ್‌, ಎಸ್‌ಸಿ – ಎಸ್‌ಟಿ ಹಾಗೂ ವಿಶೇಷ ಅನುದಾನವೂ ಸುಮಾರು 215 ಕೋ. ರೂ. ವೆಚ್ಚದಲ್ಲಿ ವಿವಿಧ ರಸ್ತೆ ಮತ್ತು ಸೇತುವೆ ಅಭಿವೃದ್ಧಿ ಕಾಮಗಾರಿ ಮಂಜೂರಾಗಿದೆ. ಇದರಲ್ಲಿ ಕೆಲವು ಕಾಮಗಾರಿಗಳು ಪೂರ್ಣ ಗೊಂಡಿದ್ದು, ಕೆಲವೊಂದು ಕಾಮಗಾರಿ ನಡೆಯುತ್ತಿವೆ. ಇನ್ನೂ ಕೆಲವು ಟೆಂಡರ್‌ ಆಗಿ ಕಾಮಗಾರಿಗೆ ಚಾಲನೆ ದೊರಕು ವುದಷ್ಟೇ ಬಾಕಿಯಿದೆ ಎಂದು ಶಾಸಕ ವಿನಯಕುಮಾರ್‌ ಸೊರಕೆ ಹೇಳಿದರು.

Advertisement

ಶುಕ್ರವಾರ ಕಾಪು ವಿಧಾನಸಭಾ ಕ್ಷೇತ್ರದ ವಿವಿಧೆಡೆ ಸುಮಾರು 16 ಕೋ. ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಕಾಪು – ಶಿರ್ವ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ವರ್ತುಲ ರಸ್ತೆಗಳ ನಿರ್ಮಾಣ ವಿವಿಧ ಮೂಲಗಳಿಂದ ಅನುದಾನ ಕ್ರೋಡೀಕರಿಸಿಕೊಂಡು ಎಲ್ಲ ಪಿಡ ಬ್ಲೂಡಿ ರಸ್ತೆಗಳನ್ನು ದ್ವಿಪಥವಾಗಿ ಪರಿವರ್ತಿಸಲಾಗುತ್ತಿದೆ. ಮಾತ್ರವಲ್ಲದೇ 21 ಸೇತುವೆಗಳ ನಿರ್ಮಾಣ ಕಾರ್ಯ ನಡೆಯತ್ತಿದೆ. ಕಾಪು ಪುರಸಭಾ ವ್ಯಾಪ್ತಿಯಲ್ಲಿ 8.50 ಕೋ.ರೂ. ವೆಚ್ಚದಲ್ಲಿ ಫ‌ುಟ್‌ಪಾತ್‌ ನಿರ್ಮಾಣ, ನಗರೋ ತ್ಥಾನ ಮೂಲಕ 10 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ, ವರ್ತುಲ ರಸ್ತೆಗಳ ನಿರ್ಮಾಣವೂ ನಡೆಯಲಿವೆ ಎಂದರು.

ಕಾಪು ಜನಾರ್ದನ ದೇವಸ್ಥಾನದ ತಂತ್ರಿ ವೇ| ಮೂ| ಶ್ರೀಶ ತಂತ್ರಿ ಕಲ್ಯ ಶಿಲಾನ್ಯಾಸ ಮುಹೂರ್ತ ನೆರವೇರಿಸಿದರು. ನವೀನ್‌ಚಂದ್ರ ಜೆ. ಶೆಟ್ಟಿ, ವಿಲ್ಸನ್‌ ರೋಡ್ರಿಗಸ್‌, ಸೌಮ್ಯಾ ಎಸ್‌., ಎಚ್‌. ಉಸ್ಮಾನ್‌, ಡಾ| ದೇವಿಪ್ರಸಾದ್‌ ಶೆಟ್ಟಿ, ವಿಶ್ವಾಸ್‌ ಅಮೀನ್‌, ಮೆಲ್ವಿನ್‌ ಡಿ’ಸೋಜಾ, ವಿನಯ ಬಲ್ಲಾಳ್‌, ದೀಪ‌ಕ್‌ ಕುಮಾರ್‌ ಎರ್ಮಾಳು, ಮಾಧವ ಆರ್‌. ಪಾಲನ್‌, ನಾಗೇಶ್‌ ಸುವರ್ಣ, ಕೇಶವ ಸಾಲ್ಯಾನ್‌, ದಿವಾಕರ ಬಿ. ಶೆಟ್ಟಿ, ಮನಹರ್‌ ಇಬ್ರಾಹಿಂ, ಹರೀಶ್‌ ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next