Advertisement

ಪುತ್ರನಿಗೆ 2 ಕೋಟಿ ರೂ. ಸಾಲ ಬಾಕಿ!

12:10 AM Apr 03, 2019 | sudhir |

ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಅವರು ಪುತ್ರ ಅಖೀಲೇಶ್‌ ಯಾದವ್‌ರಿಂದಲೇ 2.13 ಕೋಟಿ ರೂ. ಸಾಲ ಪಡೆದಿದ್ದು, ಅದನ್ನು ಮರುಪಾವತಿಸಲು ಬಾಕಿ ಇದೆಯಂತೆ! ಹೀಗಂತ ಮುಲಾಯಂ ಅವರೇ ತಮ್ಮ ಅಫಿಡವಿಟ್‌ನಲ್ಲಿ ಉಲ್ಲೇಖೀಸಿದ್ದಾರೆ. ಸೋಮವಾರವಷ್ಟೇ ನಾಮಪತ್ರ ಸಲ್ಲಿಸಿದ ಮುಲಾಯಂ, ತಾವು ಪುತ್ರನಿಗೆ 2 ಕೋಟಿ ರೂ.ಗೂ ಅಧಿಕ ಮೊತ್ತ ಕೊಡಲು ಬಾಕಿಯಿದೆ ಎಂದಿದ್ದಾರೆ. ಅಲ್ಲದೆ, 2014ಕ್ಕೆ ಹೋಲಿಸಿದರೆ, ತಮ್ಮ ಆಸ್ತಿ ಮೌಲ್ಯದಲ್ಲಿ 3 ಕೋಟಿ ರೂ.ಗಳಷ್ಟು ಕುಂಠಿತವಾಗಿದೆ ಎಂದೂ ಹೇಳಿದ್ದಾರೆ. ಅಫಿಡವಿಟ್‌ ಪ್ರಕಾರ ಅವರ ಸ್ಥಿರ ಹಾಗೂ ಚರ ಆಸ್ತಿಯ ಒಟ್ಟು ಮೌಲ್ಯ 16.52 ಕೋಟಿ ರೂ.

Advertisement
Advertisement

Udayavani is now on Telegram. Click here to join our channel and stay updated with the latest news.

Next