ಮುಳಬಾಗಿಲು: ನಗರದ ಅಭಿವೃದ್ಧಿಗಾಗಿ ಸರ್ಕಾರ ದಿಂದ ಬಿಡುಗಡೆಯಾಗಿದ್ದ 2014-15ನೇ ಸಾಲಿನ ಎಸ್‌ಎಫ್ಸಿ ಮತ್ತು 14ನೇ ಹಣಕಾಸು ಯೋಜನೆ ಯಲ್ಲಿನ 2 ಕೋಟಿ ರೂ. ಅನುದಾನ ದುರುಪ ಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಕುರಿತು ಮತ್ತೂಮ್ಮೆ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಪೌರಾಯುಕ್ತ ಎಸ್.ರಾಜುಗೆ ಸೂಚಿಸಿದರು.2 ಕೋಟಿ ರೂ.
ನಗರಸಭೆ ಕಚೇರಿಗೆ ಭಾನುವಾರ ದಿಢೀರ್ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು ಮಾತನಾಡಿ, ನಗರದ ನಾಗರಿಕರಿಗೆ ಮೂಲ ಸೌಕರ್ಯ ಗಳನ್ನು ಕಲ್ಪಿಸಲು ಸರ್ಕಾರದಿಂದ ನೂರಾರು ಕೋಟಿ ರೂ. ಬಿಡುಗಡೆ ಮಾಡಿ ಕಾಮಗಾರಿಗಳನ್ನು ಮಾಡು ವುದು ಮಾತ್ರ ಸಿಬ್ಬಂದಿಯ ಕೆಲಸವಲ್ಲ, ಕಂದಾಯ ವಸೂಲಿ ಮಾಡುವುದು ತಮ್ಮ ಕೆಲಸವೆಂಬುದು ತಿಳಿಯರಿ ಎಂದು ತಾಕೀತು ಮಾಡಿದರು.
ಕಠಿಣ ಕ್ರಮದ ಎಚ್ಚರಿಕೆ: ಕಚೇರಿಯ ಲೆಕ್ಕ ಪತ್ರಗಳ ಕಡತಗಳನ್ನು ಪರಿಶೀಲನೆ ನಡೆಸಿ ಕಂದಾಯ ಮತ್ತು ನೀರಿನ ತೆರಿಗೆ ಮಾಡುವಲ್ಲಿ ಸಿಬ್ಬಂದಿಯು ಹಿಂದುಳಿ ದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ನಗರಸಭೆಗೆ ಬರಬೇಕಾಗಿರುವ ಬಾಕಿ ಕಂದಾಯವನ್ನು ಕೂಡಲೇ ವಸೂಲಿ ಮಾಡಿ ಎಂದು ಸೂಚನೆ ನೀಡಿದ ಅವರು, ಈ ರೀತಿ ಅಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಅಲ್ಲದೇ, ನಗರದಲ್ಲಿ ಅಂಗಡಿಗಳ ಪರವಾನಗಿ ನವೀಕರಣ ಮಾಡದೇ ಇರುವವರು ಮತ್ತು ತೆರಿಗೆ ಕಟ್ಟದೇ ಇರುವವರಿಗೆ ಕೂಡಲೇ ನೋಟಿಸ್ ನೀಡಿ ಮೇ 31ರ ಒಳಗಾಗಿ ಬಾಕಿ ತೆರಿಗೆ ವಸೂಲಿ ಮಾಡಿ ಮತ್ತು ಆದೇಶವನ್ನು ಉಲ್ಲಂಘಿಸುವವರ ಅಂಗಡಿಗೆ ಮೂಲಾಜಿಲ್ಲದೆ ಬೀಗ ಹಾಕಬೇಕು ಎಂದರಲ್ಲದೇ, ನಗರಸಭೆಯಲ್ಲಿನ ಗುತ್ತಿಗೆ ನೌಕರರಿಗೆ ಹಣ ಕ್ರೋಡೀಕರಿಸಿ ವೇತನ ನೀಡುವಂತೆ ಪೌರಾಯುಕ್ತರಿಗೆ ಸೂಚಿಸಿದರು.
ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ: ನಗರದಲ್ಲಿ ಈಗಾಗಲೇ ಪ್ಲಾಸ್ಟಿಕ್ ನಿಷೇಧ ಮಾಡಲು ಕ್ರಮ ತೆಗೆದುಕೊಂಡಿರುವ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದು ಕೊಂಡ ಜಿಲ್ಲಾಧಿಕಾರಿ ಮಂಜುನಾಥ್, ಈಗಲೂ ಸಹ ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಆರೋಗ್ಯ ನಿರೀಕ್ಷಕರನ್ನೊಳ ಗೊಂಡ ತಂಡವನ್ನು ರಚಿಸಿ ಪ್ಲಾಸ್ಟಿಕ್ ಮುಕ್ತ ನಗರ ವನ್ನಾಗಿ ಮಾಡಲು ಶ್ರಮವಹಿಸಿ, ನಗರಸಭೆಯಿಂದ ಪರವಾನಗಿ ಪಡೆಯದೇ, ಅನಧಿಕೃತವಾಗಿ ತೆರೆದಿರುವ ಅಂಗಡಿ ಮುಂಗಟ್ಟುಗಳ ಮೇಲೆ ಯಾವುದೇ ಮುಲಾ ಜಿಲ್ಲದೆ ಕ್ರಮಕೈಗೊಳ್ಳಿ ಎಂದು ಪೌರಾಯುಕ್ತರಿಗೆ ಸೂಚಿಸಿದರು.
ಕುಡಿಯುವ ನೀರಿಗೆ ಆದ್ಯತೆ ನೀಡಿ: ಬಸ್ ನಿಲ್ದಾಣದ ಅಂಚಿನಲ್ಲಿರುವ ನಗರಸಭೆಗೆ ಸೇರಿದ ಹೂ ಮತ್ತು ಹಣ್ಣು ಮಾರುಕಟ್ಟೆಯಲ್ಲಿನ ಅಂಗಡಿಗಳನ್ನು ಹರಾಜು ಹಾಕುವಂತೆ ಮತ್ತು ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ಸ್ಥಳ ಗುರುತಿಸಬೇಕೆಂದು ಪೌರಾಯುಕ್ತರಿಗೆ ಸೂಚಿಸಿ ದರು. ಅಲ್ಲದೇ, ನಗರದಲ್ಲಿ ನೀರಿನ ತೀವ್ರ ಅಭಾವ ವಿರುವುದರಿಂದ ಕುಡಿಯುವ ನೀರನ್ನು ಒದಗಿಸಲು ಹೆಚ್ಚಿನ ಆದ್ಯತೆ ನೀಡಿ ಎಂದು ಹೇಳಿದರು.
ಕೂಡಲೇ ಪಂಪ್‌ಸೆಟ್ ಅಳವಡಿಸಿ: ಬೇತಮಂಗಲ ದಲ್ಲಿರುವ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಈಗಾಗಲೇ ನಗರದಲ್ಲಿ ಕೊರೆಯಿಸಿರುವ ಕೊಳವೆ ಬಾವಿಗಳಿಗೆ ಪಂಪು ಮೋಟರ್ ಅಳವಡಿಸದೇ ಹಾಗೂ ಪೈಪ್‌ಲೈನ್ ಅಳವಡಿಸದೆ ಇರುವುದನ್ನು ಕೇಳಿ ಸ್ಥಳದಿಂದಲೇ ಮಂಡಳಿ ಅಧಿಕಾರಿಗಳಿಗೆ ಕರೆ ಮಾಡಿ ಬಾಕಿ ಉಳಿದಿರುವ ಕೆಲಸಗಳನ್ನು ಕೂಡಲೇ ಮಾಡಬೇಕು, ತಪ್ಪಿದ್ದಲ್ಲಿ ಮಂಡಳಿ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೌರಾಯುಕ್ತ ಎಸ್.ರಾಜು, ಪ್ರದೀಪ್‌ಕುಮಾರ್, ಆರೋಗ್ಯ ನಿರೀಕ್ಷಕ ಅಶ್ವತ್ಥ್ರೆಡ್ಡಿ, ಸುನಿಲ್ಕುಮಾರ್, ಲೆಕ್ಕಾಧಿಕಾರಿ ಅರ್ಚನಾ ಸೇರಿದಂತೆ ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.