Advertisement

1600 ಕೋಟಿ ರೂ. ವೆಚ್ಚದಲ್ಲಿ ಅಮೆರಿಕದಲ್ಲಿ 8 ಕ್ರಿಕೆಟ್‌ ಮೈದಾನ

03:45 AM Feb 03, 2017 | Team Udayavani |

ನ್ಯೂಯಾರ್ಕ್‌: ಕ್ರಿಕೆಟ್‌ಗೆ ವಿಶ್ವದೆಲ್ಲೆಡೆ ವಾಸವಾಗಿರುವ ಅನಿವಾಸಿ ಭಾರತೀಯರು ಗರಿಷ್ಠ ಆದಾಯ ಬರಲು ಕಾರಣವಾಗಿದ್ದಾರೆ.

Advertisement

ಅದರಲ್ಲೂ ಅಮೆರಿಕದಲ್ಲಿ ವಾಸವಾಗಿರುವ ಭಾರತೀಯರು ಅಲ್ಲಿ ನಡೆದ ಯಾವುದೇ ಪಂದ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿ
ಕೂಟ ಯಶಸ್ವಿಯಾಗಲು ಕಾರಣವಾಗಿದ್ದಾರೆ.

ಕಳೆದ ವರ್ಷ ನಡೆದ ಭಾರತ-ವೆಸ್ಟ್‌ ಇಂಡೀಸ್‌ ಟಿ20 ಸರಣಿಯೇ ಇದಕ್ಕೆ ಸಾಕ್ಷಿ. ಅಮೆರಿಕದಲ್ಲಿ ಕ್ರಿಕೆಟ್‌ಗಿರುವ ಜನಪ್ರಿಯತೆ ಅರಿತಿರುವ ಭಾರತೀಯ ಮೂಲದ ಉದ್ಯಮಿ ಜಿಗ್ನೇಶ್‌ ಪಾಂಡ್ಯ ಅಲ್ಲಿ 8 ಕ್ರಿಕೆಟ್‌ ಮೈದಾನ ನಿರ್ಮಿಸಲು ಮುಂದಾಗಿದ್ದಾರೆ. ಅದೂ 1600 ಕೋಟಿ ರೂ. ವೆಚ್ಚದಲ್ಲಿ! 

ಅಮೆರಿಕದಲ್ಲಿ ಕ್ರಿಕೆಟ್‌ ನೋಡಲು ಭಾರೀ ಪ್ರಮಾಣದಲ್ಲಿ ಜನ ಸೇರುತ್ತಾರೆ. ಆದ್ದರಿಂದ ಇಲ್ಲಿ ಕ್ರಿಕೆಟ್‌ಗೆ ಮಾರುಕಟ್ಟೆಯಿದೆ ಎನ್ನುವುದು ಖಾತ್ರಿ. ಇಲ್ಲಿ ಕ್ರಿಕೆಟ್‌ ಅಭಿವೃದ್ಧಿಪಡಿಸಬೇಕೆಂಬ ಉದ್ದೇಶ 8 ಮೈದಾನ ನಿರ್ಮಿಸಲು ಮುಂದಾಗಿದ್ದೇನೆ. ಇಲ್ಲಿ ಕ್ರಿಕೆಟ್‌ ಲೀಗ್‌ಗಳನ್ನು ನಡೆಸಲಾಗುವುದು ಎಂದು ಜಿಗ್ನೇಶ್‌ ಹೇಳಿದ್ದಾರೆ.

ಪ್ರತಿ ಮೈದಾನದಲ್ಲಿ 26000 ಮಂದಿ ಕೂರಲು ಅವಕಾಶವಿದೆ. ಈ ಮೈದಾನ ನಿರ್ಮಾಣದಿಂದ 17800 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಜಿಗ್ನೇಶ್‌ ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next