Advertisement

ಪ್ರತಿವರ್ಷ 1500 ಕೋಟಿ ರೂ. ಕಾಮಗಾರಿ ಕೈಗೊಳ್ಳಿ: ಖರ್ಗೆ

10:39 AM Nov 24, 2018 | Team Udayavani |

ಕಲಬುರಗಿ: ಸರ್ಕಾರವು ಎಚ್‌.ಕೆ.ಆರ್‌.ಡಿ.ಬಿ.ಗೆ ಕಳೆದ ವರ್ಷದಿಂದ ಪ್ರತಿ ವರ್ಷ 1500 ಕೋಟಿ ರೂ. ಗಳ ಅನುದಾನ ಒದಗಿಸಲು ವಾಗ್ಧಾನ ನೀಡಿದೆ. ಅದಕ್ಕೆ ಅನುಗುಣವಾಗಿ ಎಚ್‌.ಕೆ.ಆರ್‌.ಡಿ.ಬಿ.ಯಿಂದ ಕಾಮಗಾರಿ ಕೈಗೊಳ್ಳಬೇಕೆಂದು ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.

Advertisement

ನಗರದ ನಾಗನಹಳ್ಳಿ ರಸ್ತೆಯಲ್ಲಿರುವ ಹನುಮಾನ ತಾಂಡಾದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಶನಿವಾರ ಎಚ್‌. ಕೆ.ಆರ್‌.ಡಿ.ಬಿ. ಸಭೆ ನಡೆಯಲಿದ್ದು, ಸರ್ಕಾರ ನೀಡಿರುವ ವಾಗ್ಧಾನದಂತೆ ಎಚ್‌.ಕೆ.ಆರ್‌.ಡಿ.ಬಿ.ಗೆ ಅನುದಾನ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ಹಣಕಾಸು ಸಚಿವರಿಗೆ ಹಾಗೂ ಕಾರ್ಯದರ್ಶಿಗಳ ಮೇಲೆ ಒತ್ತಡ ತರಬೇಕು. ಎಚ್‌.ಕೆ.ಆರ್‌.ಡಿ.ಬಿ.ಯಿಂದ ಬೃಹತ್‌ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.

ಸರ್ಕಾರ ಎಚ್‌.ಕೆ.ಆರ್‌.ಡಿ.ಬಿ.ಗೆ ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷ ತಲಾ 1500 ಕೋಟಿ ರೂ. ಬಿಡುಗಡೆ ಮಾಡಲು ವಾಗ್ಧಾನ ಮಾಡಿದೆ. ಆದರೆ ಕಳೆದ ವರ್ಷ 1000 ಕೋಟಿ ರೂ. ಹಾಗೂ ಪ್ರಸಕ್ತ ವರ್ಷ 1000 ಕೋಟಿ ರೂ. ಬಿಡುಗಡೆಗೆ ಆದೇಶಿಸಿದೆ. ಕಳೆದ ಮತ್ತು ಈ ವರ್ಷದ ಅನುದಾನದ 1000 ಕೋಟಿ ರೂ. ಕೊರತೆ ಅಲ್ಲದೇ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಾಗ 400 ಕೋಟಿ ರೂ. ನೀಡುವುದಾಗಿ ಘೋಷಿಸಲಾಗಿತ್ತು. ಹೀಗೆ ಒಟ್ಟು 1400 ಕೋಟಿ ರೂ. ಗಳ ಅನುದಾನ ಈ ಭಾಗಕ್ಕೆ ಬರಬೇಕಾಗಿದೆ. ಈ ಅನುದಾನ ದೊರೆತಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ಜಿಲ್ಲೆಯ ಶಾಸಕರು, ಪಾಲಿಕೆ ಸದಸ್ಯರು, ಮಹಾಪೌರರು ಹಾಗೂ ಅಧಿಕಾರಿ ವರ್ಗದವರು ಅಭಿವೃದ್ಧಿಗಾಗಿ ಮನಸ್ಸು ಮಾಡುವ ಮೂಲಕ ಈ ಭಾಗವನ್ನು ಸಾರ್ವಜನಿಕರ ಅಪೇಕ್ಷೆಯಂತೆ ಅಭಿವೃದ್ಧಿಪಡಿಸಬೇಕು. ಕಲಬುರಗಿ ವಿಭಾಗವನ್ನು ಕಲ್ಯಾಣ ಕರ್ನಾಟಕವನ್ನಾಗಿ ನಿರ್ಮಿಸಬೇಕಾದರೆ ಎಲ್ಲರೂ ಜೊತೆಗೂಡಿ ಕೆಲಸ ಮಾಡಬೇಕು ಎಂದರು.

ಅಧಿವೇಶನದಲ್ಲಿ ಹೈ.ಕ. ಸಮಸ್ಯೆ ಚರ್ಚೆಯಾಗಲಿ
ಕಲಬುರಗಿ:
ಡಿಸೆಂಬರ್‌ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಹೈದ್ರಾಬಾದ್‌ ಕರ್ನಾಟಕ ಭಾಗದ ಸಮಸ್ಯೆಗಳನ್ನು ಹಾಗೂ ಇಲ್ಲಿರುವ ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಚರ್ಚೆಗಳಾಗಬೇಕು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

Advertisement

ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಡಿಸೆಂಬರ್‌ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಹೈದ್ರಾಬಾದ್‌ ಕರ್ನಾಟಕ ಭಾಗದ ಸಮಸ್ಯೆಗಳನ್ನು ಹಾಗೂ ಇಲ್ಲಿರುವ ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಚರ್ಚೆಗಳಾಗಬೇಕು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಭೀಕರ ಬರಗಾಲದ ಛಾಯೆ ಮೂಡಿದೆ. ಹಿಂಗಾರು ಮತ್ತು ಮುಂಗಾರು ಬೆಳೆಗಳು ವಿಫಲವಾಗಿವೆ. ಕೇಂದ್ರ ಮತ್ತು ರಾಜ್ಯ ಅಧ್ಯಯನ ತಂಡಗಳು ಕಲಬುರಗಿ ಜಿಲ್ಲೆಯಲ್ಲಿ ಅಧ್ಯಯನ ನಡೆಸಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಚರ್ಚೆಗಳು ಆಗಬೇಕು ಎಂದರು.

ಹೈದ್ರಾಬಾದ ಕರ್ನಾಟಕ ಭಾಗಕ್ಕೆ ನೀಡಲಾಗಿರುವ 371(ಜೆ) ಅಡಿಯ ಮೀಸಲು ನೇಮಕಾತಿ, ಮುಂಬಡ್ತಿ ವಿಷಯಗಳ ಬಗ್ಗೆಯೂ ಕೂಲಂಕುಷವಾಗಿ ಚರ್ಚೆಯಾಗಬೇಕಾಗಿದೆ. ಅಲ್ಲದೇ ಮುಂಬೈಯಿಂದ ಚೆನ್ನೈವರೆಗೆ ಇಂಡಸ್ಟ್ರೀಯಲ್‌ ಕಾರಿಡಾರ್‌ ಆರು ಪಥದ ರಸ್ತೆ ನಿರ್ಮಾಣವಾಗುತ್ತಿದ್ದು, ಈ ರಸ್ತೆಯು ಕಲಬುರಗಿ ಜಿಲ್ಲೆಯಲ್ಲಿ ಹಾಯ್ದು ಹೋಗುವಂತೆ ನಿರ್ಮಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಈ ರಸ್ತೆಯು ಅಕ್ಕಲಕೋಟ-ಅಫಜಲಪುರ-ದೇವಲಗಾಣ ಗಾಪುರ-ಜೇವರ್ಗಿ-ಅಂದೋಲಾ-ಶಹಾಪುರ-ಬಾಡಿಹಾಳ-ಸೈದಾಪುರ ದಿಂದ ಕರ್ನೂಲ್‌-ತಿರುಪತಿ-ಚೆನ್ನೈವರೆಗೆ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.

ಕಲಬುರಗಿ ಜಿಲ್ಲೆಯಿಂದ ಹಾಯ್ದು ಹೋಗುವ ಇಂಡಸ್ಟ್ರೀಯಲ್‌ ಕಾರಿಡಾರ ರಸ್ತೆಯು ಚೆ‌ನ್ನೈ-ಮುಂಬೈ ಮಧ್ಯೆ 160 ಕಿ.ಮೀ. ದೂರ ಕಡಿಮೆ ಮಾಡಲಿದೆ. 2500 ಕೋಟಿ ರೂ. ವೆಚ್ಚದಲ್ಲಿ ಕರ್ನೂಲ್‌ದಿಂದ ಅಕ್ಕಲಕೋಟ ವರೆಗೆ ಆರು ಪಥದ ರಸ್ತೆ ನಿರ್ಮಾಣವಾಗಲಿದ್ದು, ಈಗಾಗಲೇ ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದರು. ಕಲಬುರಗಿ ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರೂಪಿಸುವ ರಾಷ್ಟ್ರಿಯ ಹೆದ್ದಾರಿಗಳನ್ನು ಜಿಲ್ಲೆಯ ಮೂಲಕ ನಿರ್ಮಾಣ ಮಾಡಿಸಲಾಗುತ್ತಿದೆ. 

ಸೊಲ್ಲಾಪುರ ಮಾರ್ಗವಾಗಿ ಅನಂತಪುರ ವರೆಗೆ ನಿರ್ಮಿಸಲಾಗುತ್ತಿರುವ ರಾಷ್ಟ್ರಿಯ ಹೆದ್ದಾರಿಯು ಅಫಜಲಪುರ-ಕಲಬುರಗಿ-ಶಹಾಬಾದ-ವಾಡಿ ಮಾರ್ಗವಾಗಿ ಕರ್ನೂಲ್‌ ಅನಂತಪುರವರೆಗೆ ನಿರ್ಮಾಣವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next