Advertisement

ಕಾಲುವೆ ಆಧುನೀಕರಣಕ್ಕೆ 117ಕೋಟಿ ರೂ. ಮಂಜೂರು

03:31 PM Feb 24, 2017 | Team Udayavani |

ಚಿಂಚೋಳಿ: ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಕಾಲುವೆ ಅಧುನಿಕರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 117 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಹೇಳಿದರು. 

Advertisement

ತಾಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ತೊಗರಿ ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯಿಂದ ಕಾಲುವೆ ಮೂಲಕ ನೀರು ಹರಿಸಿದರು ಸಹ ಕೆಲವು ಕಡೆಗಳಲ್ಲಿ ಸೋರಿಕೆಯಾಗಿ ಬೆಳೆಗಳಿಗೆ ಸಿಗುತ್ತಿಲ್ಲ. ಹೀಗಾಗಿ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯ ಒಟ್ಟು 80 ಕಿಮೀ ಉದ್ದ ಮುಖ್ಯ ಕಾಲುವೆಯನ್ನು 117 ಕೋಟಿ ರೂ. ಗಳಲ್ಲಿ ಅಧುನೀಕರಣಗೊಳಿಸಲಾಗುತ್ತಿದೆ ಎಂದು ಹೇಳಿದರು. 

ಸುಲೇಪೇಟ, ಚಿಂಚೋಳಿ, ಕುಂಚಾವರಂ, ಕೋಡ್ಲಿ, ಐನಾಪುರ ವಲಯಗಳಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಚಿಮ್ಮನಚೋಡ ಗ್ರಾಮದಲ್ಲಿ ಕಳೆದ 3 ವರ್ಷಗಳಲ್ಲಿ ಮುಲ್ಲಾಮಾರಿ ನದಿಗೆ ತಡಗೋಡೆ ನಿರ್ಮಾಣಕ್ಕಾಗಿ 1.91 ಕೋಟಿ ರೂ., ಗ್ರಾಮ ವಿಕಾಸ ಯೋಜನೆಅಡಿ 75 ಲಕ್ಷ ರೂ.,

ಚಿಮ್ಮನಚೋಡ  ಗ್ರಾಮದಿಂದ ಸಲಗರ ಬಸಂತಪುರದವರೆಗೆ ಮುಖ್ಯರಸ್ತೆ ಡಾಂಬರೀಕರಣಕ್ಕಾಗಿ 3 ಕೋಟಿ ರೂ., ಚಿಮ್ಮಾಇದಲಾಯಿ ಕ್ರಾಸ್‌ದಿಂದ ಐನಾಪುರ ಗ್ರಾಮದವರೆಗೆ ರಸ್ತೆ ಸುಧಾರಣೆಗಾಗಿ 36 ಕೋಟಿ ರೂ., ಚಿಮ್ಮನಚೋಡ ಗ್ರಾಮದಲ್ಲಿ ಅಂಬೇಡ್ಕರ ಭವನ ಮತ್ತು ಬಾಬುಜಗಜೀವನರಾಮ ಭವನ ನಿರ್ಮಾಣಕ್ಕಾಗಿ ತಲಾ 10 ಲಕ್ಷ ರೂ. ನೀಡಲಾಗಿದೆ.

ಚಿಮ್ಮನಚೋಡ ಕ್ಷೇತ್ರಕ್ಕೆ ಕಳೆದ 3 ವರ್ಷಗಳಲ್ಲಿ ಕುಡಿಯುವ ರು ದೇವಾಲಯ ಜೀರ್ಣೋದ್ಧಾರ, ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣ, ಸಿಮೆಂಟ್‌ ರಸ್ತೆ, ಚರಂಡಿ ನಿರ್ಮಾಣ ವಿವಿಧ ಕಾಮಗಾರಿಗಳಿಗೆ ಸರಕಾರದಿಂದ 50 ಕೋಟಿ ರೂ. ವಿವಿಧ ಯೋಜನೆ ಅಡಿ ಮಂಜೂರು ಮಾಡಿ ಅಭಿವೃದ್ದಿಪಡಿಸಲಾಗಿದೆ ಎಂದು ಹೇಳಿದರು.

Advertisement

ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ್‌ ರಮೇಶ ಯಾಕಾಪುರ, ಐನೋಳಿ ಜಿಪಂ ಸದಸ್ಯ ಗೌತಮ ಪಾಟೀಲ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹಮ್ಮದ್‌ ಹುಸೇನ್‌ ನಯಾಕೋಡಿ ಮಾತನಾಡಿದರು. ಚಿಮ್ಮನಚೋಡ  ಗ್ರಾಪಂ ಅಧ್ಯಕ್ಷ ಜಗನ್ನಾಥ ತೆಲಕಾಪಳ್ಳಿ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರಯ್ಯ ಸ್ವಾಮಿ ಕಂಬದ, ರೇವಣಸಿದ್ದ ಅಣಕಲ್‌, ಪ್ರಭಾಕರ ಕುಲಕರ್ಣಿ ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next