Advertisement

ವಿಮೆ ಇಲ್ಲದ ರಾಸು ಸತ್ತರೆ 10 ಸಾವಿರ ರೂ. ಪರಿಹಾರ

07:10 AM Sep 08, 2017 | Team Udayavani |

ಬೆಂಗಳೂರು: ವಿಮೆ ಮಾಡದ ರಾಸುಗಳು ಆಕಸ್ಮಿಕ ಸಾವನ್ನಪ್ಪಿ ಆರ್ಥಿಕ ಸಂಕಷ್ಟ ಅನುಭವಿಸುವ ರೈತರ ಪ್ರತಿ ರಾಸಿಗೆ 10 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

Advertisement

ರೈತರು ಹಾಲು ಹಿಂಡುವ ರಾಸುಗಳನ್ನು ಮಾತ್ರ ಜಾನುವಾರು ವಿಮೆಗೆ ಒಳಪಡಿಸುತ್ತಾರೆ. ವಿಮೆ ಮಾಡದ ಎತ್ತು, ಹಸುಗಳ ಆಕಸ್ಮಿಕ ಮರಣದಿಂದ ಆಗುವ ನಷ್ಟವನ್ನು ಪರಿಹರಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. 2017-18 ಸಾಲಿಗೆ ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆ ಅನುದಾನದಿಂದ ಅನುಷ್ಠಾನಗೊಳ್ಳುತ್ತಿದ್ದು, 7 ಕೋಟಿ ರೂ.ಅನುದಾನ ನಿಗದಿಪಡಿಸಲಾಗಿದೆ.

ಏನೇನು ನಿಬಂಧನೆ?: ಮರಣೋತ್ತರ ಪರೀಕ್ಷೆ ಮಾಡುತ್ತಿರುವ ರಾಸಿನ ಕಳೆಬರದೊಂದಿಗೆ ಪರೀಕ್ಷೆ ಮಾಡುತ್ತಿರುವ ಪಶುವೈದ್ಯರ ಕಲರ್‌ ಫೋಟೋ, ಮರಣೋತ್ತರ ವರದಿ, ಅಪಘಾತ ಸಂದರ್ಭದಲ್ಲಿ ಪ್ರಾಥಮಿಕ ತನಿಖಾ ವರದಿ, ಪ್ರಾಣಿಯ ಮರಣ ಕಾಡು ಪ್ರಾಣಿಗಳಿಂದ ಸಂಭವಿಸಿದ್ದಲ್ಲಿ ಅರಣ್ಯ ಇಲಾಖೆಯಿಂದ ಪರಿಹಾರ ಪಡೆಯದಿಲ್ಲದಿರುವ ಬಗ್ಗೆ ದೃಢೀಕರಣ ಹಾಗೂ ಅಗತ್ಯ ದಾಖಲಾತಿ ಸಲ್ಲಿಸಬೇಕು. ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪಶುವೈದ್ಯಾಧಿಕಾರಿಗಳನ್ನು ಭೇಟಿ ಮಾಡುವಂತೆ ಇಲಾಖೆ ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next