Advertisement
ಲೋಕೋಪಯೋಗಿ ಇಲಾಖೆ ವತಿಯಿಂದ ಸ್ಟೇಟ್ಬ್ಯಾಂಕ್ ವೃತ್ತದಿಂದ ಹಳೆ ಬಂದರು ವೃತ್ತದವರೆಗೆ 1 ಕೋಟಿ ರೂ.ವೆಚ್ಚದಲ್ಲಿ ನಡೆಸಲಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
Related Articles
Advertisement
ಲಕ್ಷದ್ವೀಪಕ್ಕೆ ನಿಯೋಗ : ಶಾಸಕ ಲೋಬೋಮಹಾನಗರ, ಅ.19: ಲಕ್ಷದ್ವೀಪಕ್ಕೆ ಅ.29ರಿಂದ 31 ರ ವರೆಗೆ ಉನ್ನತಮಟ್ಟದ ನಿಯೋಗ ಕೊಂಡೊಯ್ಯುವುದಾಗಿ ಶಾಸಕ ಜೆ.ಆರ್.ಲೋಬೋ ತಿಳಿಸಿದರು. ಅವರು ಮಂಗಳೂರು ಹಳೆಬಂದರು ಅಭಿವೃದ್ಧಿಗೆ ಇತ್ತೀಚೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಲಕ್ಷದ್ವೀಪದೊಂದಿಗೆ ಮಾತುಕತೆ ನಡೆಸಿ ವ್ಯಾಪಾರ ವಹಿವಾಟು ಪುನರಾರಂಭ ಮಾಡುವ ನಿಟ್ಟಿನಲ್ಲಿ ನಿಯೋಗ ಕೊಂಡೊಯ್ಯಲಾಗುವುದು. ಲಕ್ಷ ದ್ವೀಪ ಹಿಂದೆ ಸಾಕಷ್ಟು ವಹಿವಾಟು ಮಾಡುತ್ತಿತ್ತು. ಈಗ ಅದು ನಿಲ್ಲಿಸಿದ್ದು, ವ್ಯಾಪಾರ ಪುನರಾರಂಭ ಮಾಡುವಂತೆ ಮನವೊಲಿಸಲಾಗುವುದು ಮತ್ತು ಮಂಗ ಳೂರು ಹಳೆ ಬಂದರಿನಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಜೆಟ್ಟಿ ನಿರ್ಮಿಸಲು ಮನವಿ ಮಾಡಲಾಗುವುದು ಎಂದರು.ಇವುಗಳು ಸಾಧ್ಯವಾದರೆ ಲಕ್ಷ ದ್ವೀಪಕ್ಕಾಗಿಯೇ ಪ್ರತ್ಯೇಕ ಜೆಟ್ಟಿ ಯಾಗುತ್ತದೆ. ಈ ಮೊತ್ತವನ್ನು ಲಕ್ಷ ದ್ವೀಪವೇ ಪಾವತಿಸುವಂತೆ ಮನವಿ ಮಾಡಲಾಗುವುದು. ತಾವೂ ಈಗಾಗಲೇ ಲಕ್ಷ ದ್ವೀಪದ ಸಂಸದರನ್ನು ಸಂಪರ್ಕಿಸಿದ್ದು, ಅವರು ಕೂಡ ಮಾತುಕತೆಗೆ ಆಸಕ್ತಿ ತೋರಿಸಿದ್ದಾರೆ ಎಂದು ಹೇಳಿದರು.ಲಕ್ಷದ್ವೀಪದೊಂದಿಗೆ ಮಾತು ಕತೆ ಫಲ ಪ್ರದವಾದರೆ ಮಂಗಳೂರು ಬಂದರಿನಲ್ಲಿ ಮತ್ತೆ ವಹಿವಾಟು ವೃದ್ಧಿಯಾಗುತ್ತದೆ ಎಂದ ಅವರು, ಈಗ ಲಕ್ಷ ದ್ವೀಪ ಕೇರಳಕ್ಕೆ ತನ್ನ ವಹಿವಾಟು ಮುಂದುವರಿಸಿದೆ ಎಂದು ವಿವರಿಸಿದರು.