ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಕೊಡವ ಸಮಾ ಜಗಳ ಒಕ್ಕೂಟದ ಪೋಷಕ ಸದಸ್ಯ ಎಂ.ಸಿ.ನಾಣಯ್ಯ ಹಾಗೂ ಪ್ರಮುಖರು ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿದರು.
Advertisement
ಈ ಸಂದರ್ಭ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಕಾಫಿ, ಕಿತ್ತಳೆ, ಏಲಕ್ಕಿ, ಕಾಳುಮೆಣಸು ನೆಲಕಚ್ಚಿದ್ದು, ಬೆಳೆಗಾರರಾದಿಯಾಗಿ ಪ್ರತಿಯೊಬ್ಬರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯಾರ್ಥಿಗಳ ಮೇಲೂ ಅತಿವೃಷ್ಟಿ ಪರಿಣಾಮ ಬೀರಿದೆ. ಪ್ರಕೃತಿ ವಿಕೋಪದ ಸಂದರ್ಭ ಕೊಡವ ಸಮಾಜಗಳು ಸಂತ್ರಸ್ತರಿಗೆ ನೆರವು ನೀಡಿವೆ.
ಅನೇಕ ಸಂಘ, ಸಂಸ್ಥೆಗಳು ಕೊಡವ ಸಮಾಜದ ಮೂಲಕ ಸಹಾಯ ಹಸ್ತ ಚಾಚಿ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿವೆ. ಮುಂದಿನ ದಿನಗಳಲ್ಲಿಯೂ ಒಕ್ಕೂಟ ಅಗತ್ಯ ಸಹಕಾರವನ್ನು ನೀಡಲಿದೆ ಎಂದು ಅವರು ಭರವಸೆ ನೀಡಿದರು.
ಪೋಷಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಪರಿವರ್ತಿಸಬೇಕು ಹೇಳಿದರು. ಅನಾಹುತಗಳೇ ಸಾಕ್ಷಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಡಿ.ತಿಮ್ಮಯ್ಯ, ಪ್ರಕೃತಿಗೆ ವಿರು ದ್ಧವಾಗಿ ನಡೆದುಕೊಂಡರೆ ಏನಾ ಗುತ್ತದೆ ಎನ್ನುವುದಕ್ಕೆ ಕಳೆದ ವರ್ಷ ಸಂಭವಿಸಿದ ಜಲಸ್ಫೋಟದಂತಹ ಅನಾಹುತಗಳೇ ಸಾಕ್ಷಿಯಾಗಿದೆ ಎಂದರು.
Related Articles
Advertisement
ದಾನಿಗಳಾದ ಅನಿತಾಪೂಣಚ್ಚ ಮಾತನಾಡಿ, ವಿದ್ಯಾರ್ಥಿಗಳು ಸತತ ಪರಿಶ್ರ ಮದ ಮೂಲಕ ಶೈಕ್ಷಣಿಕ ಸಾಧನೆಯನ್ನು ಮಾಡಬೇಕೆಂದು ಕರೆ ನೀಡಿದರು.ಎಂ.ಸಿ.ನಾಣಯ್ಯ ಅವರ ಪತ್ನಿ ರೂಪಾನಾಣಯ್ಯ, ಕೊಡವ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹಾಗೂ ಕಾಲೇಜಿನ ಉಪನ್ಯಾಸಕ ಮಾದೇವಯ್ಯ ಉಪಸ್ಥಿತರಿದ್ದರು.
ಕಾವ್ಯಾ ಪ್ರಾರ್ಥಿಸಿದರು. ಪ್ರೊ| ರವಿ ಶಂಕರ್ ಅವರು ಸ್ವಾಗತಿಸಿ, ಡಾ| ಶ್ರೀàಧರ್ ಹೆಗಡೆ ಅವರು ವಂದಿಸಿದರು.