Advertisement

ಮೊದಲ ಪಂದ್ಯದಲ್ಲಿ ಸೋಲುಂಡ ರಾಜಸ್ಥಾನ್ ಗೆ ಆಘಾತ: ಕೂಟದಿಂದಲೇ ಹೊರಬಿದ್ದ ವಿದೇಶಿ ಆಲ್ ರೌಂಡರ್

09:06 AM Apr 14, 2021 | Team Udayavani |

ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಅಂತಿಮ ಎಸೆತದಲ್ಲಿ ಸೋಲನುಭವಿಸಿದ್ದ ರಾಜಸ್ಥಾನ ರಾಯಲ್ಸ್ ಗೆ ಮತ್ತೊಂದು ಆಘಾತ ಎದುರಾಗಿದೆ. ರಾಯಲ್ಸ್ ನ ಪ್ರಮುಖ ಆಲ್ ರೌಂಡರ್, ಆರಂಭಿಕ ಬ್ಯಾಟ್ಸಮನ್ ಬೆನ್ ಸ್ಟೋಕ್ಸ್ ಸಂಪೂರ್ಣ ಕೂಟದಿಂದಲೇ ಹೊರಬಿದ್ದಿದ್ದಾರೆ.

Advertisement

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಸ್ಟೋಕ್ಸ್ ಗಾಯಗೊಂಡಿದ್ದರು. ಕ್ರಿಸ್ ಗೇಲ್ ಬಾರಿಸಿದ ಚೆಂಡನ್ನು ಕ್ಯಾಚ್ ಮಾಡುವ ವೇಳೆ ಸ್ಟೋಕ್ಸ್ ಬೆರಳಿಗೆ ಗಾಯವಾಗಿತ್ತು. ಎಡಗೈ ಯ ತೋರು ಬೆರಳು ಮುರಿತವಾಗಿದೆ.

ಇದಾಗ್ಯೂ ಬೆನ್ ಸ್ಟೋಕ್ಸ್ ರಾಜಸ್ಥಾನ ತಂಡದೊಂದಿಗೆ ಸಂಪೂರ್ಣ ಕೂಟದಲ್ಲಿ ಇರಲಿದ್ದಾರೆ. ಅವರ ಮಾರ್ಗದರ್ಶನ ತಂಡಕ್ಕೆ ಅಗತ್ಯ ಎಂಬ ಕಾರಣಕ್ಕೆ ಫ್ರಾಂಚೈಸಿ ಈ ನಿರ್ಧಾರಕ್ಕೆ ಬಂದಿದೆ.

ಇದನ್ನೂ ಓದಿ:ಸೋಲಿನ ದವಡೆಯಿಂದ ಜಯ ಕಸಿದ ಮುಂಬೈ : ಕೆಕೆಆರ್ ವಿರುದ್ಧ 10 ರನ್ ರೋಚಕ ಗೆಲುವು

ಇಂಗ್ಲೆಂಡ್ ನ ಮತ್ತೋರ್ವ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಕೂಡಾ ರಾಜಸ್ಥಾನ ರಾಯಲ್ಸ್ ಸೇವೆಗೆ ಲಭ್ಯರಿಲ್ಲ. ಭಾರತ ವಿರುದ್ಧದ ಸರಣಿ ವೇಳೆ ಆರ್ಚರ್ ಗಾಯಗೊಂಡಿದ್ದರು. ಇದೀಗ ಸ್ಟೋಕ್ಸ್ ಅಲಭ್ಯತೆ ತಂಡಕ್ಕೆ ಹೊಸ ತಲೆನೋವಾಗಿದೆ.

Advertisement

ಡೇವಿಡ್ ಮಿಲ್ಲರ್ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ ಬೆಂಚ್ ನಲ್ಲಿದ್ದು, ಸ್ಟೋಕ್ಸ್ ಜಾಗ ತುಂಬಬಲ್ಲರು. ಅದಲ್ಲದೆ ಸ್ಟೋಕ್ಸ್ ಜಾಗಕ್ಕೆ ಇನ್ನೊಬ್ಬ ಹೊಸ ಆಟಗಾರನನ್ನು ಖರೀದಿಸಲಾಗುವುದು ಎಂದು ರಾಜಸ್ಥಾನ ಫ್ರಾಂಚೈಸಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next