Advertisement

ಅದ್ಧೂರಿ ಸೆಟ್‌ನಲ್ಲಿ RRR ಪ್ರಿ- ಈವೆಂಟ್; ಅಪ್ಪು ನೆನೆದು ಭಾವುಕರಾದ ತೆಲುಗು ಚಿತ್ರನಟರು

03:18 PM Mar 20, 2022 | Team Udayavani |

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ನೀರಿಕ್ಷಿತ ಚಿತ್ರ ‘ಆರ್‌.ಆರ್‌.ಆರ್‌’ ಇದೇ 25ಕ್ಕೆ ಬಿಡುಗಡೆಗೆ ಸಿದ್ಧವಾಗಿದ್ದು, ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಶನಿವಾರ ಅದ್ಧೂರಿ ಸೆಟ್‌ನಲ್ಲಿ ಪ್ರಿ-ರಿಲೀಸ್‌ ಈವೆಂಟ್‌ ನಡೆಯಿತು.

Advertisement

ಕೆ.ವಿ.ಎನ್‌ ಪ್ರೋಡಕ್ಷನ್‌ನಿಂದ ನಡೆದ ಚಿತ್ರ ಪ್ರಿ- ಈವೆಂಟ್‌ಗೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್‌, ನಟ ಶಿವರಾಜ್‌ಕುಮಾರ್‌ ಆಗಮಿಸಿದ್ದು, ಚಿತ್ರದ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ, ಚಿತ್ರದಲ್ಲಿ ನಟಿಸಿರುವ ಜೂನಿಯರ್‌ ಎನ್‌ಟಿಆರ್‌, ರಾಮಚರಣ್‌ ವೇದಿಕೆಯನ್ನು ಹಂಚಿಕೊಂಡರು. ಇನ್ನು ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಭಾಗಿಯಾದರು.

ಚಿಕ್ಕಬಳ್ಳಾಪುರದ ಕೆಲವು ಭಾಗದಲ್ಲಿ ತೆಲುಗು ಭಾಷೆಯನ್ನು ಹೆಚ್ಚು ಬಳಸುವುದರಿಂದ ರಾಮ್‌ಚರಣ್‌, ಜೂ. ಎನ್‌ಟಿಆರ್‌ ಅಭಿಮಾನಿಗಳು ಮತ್ತು ಡಾ.  ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಗಳು ಹೆಚ್ಚು ಸೇರುತ್ತಾರೆ ಎಂಬ ಉದ್ದೇಶದಿಂದ 100 ಎಕರೆ ಜಮೀನಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇದನ್ನೂ ಓದಿ:ಸೋಮವಾರ ಅಪ್ಪಳಿಸಲಿದೆ ರಾಕಿಂಗ್ ‘ತೂಫಾನ್’; ಕೆಜಿಎಫ್ 2 ಹಾಡು ಬಿಡುಗಡೆ

ಅಗಲಗುರ್ಕಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ರಾಮ್‌ಚರಣ್‌, ಜೂ. ಎನ್‌ಟಿಆರ್‌ ಅವರ ಅದ್ಧೂರಿ ಎಂಟ್ರಿ ಜನರಲ್ಲಿ ರೋಮಾಂಚನ ಮೂಡಿಸಿತು. ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ ತಂಡದಿಂದ ಸಂಗೀತ ಮತ್ತು ಚಿತ್ರದ ಗೀತೆಗಳನ್ನು ಪ್ರಸ್ತುತಪಡಿಸಿದರು. ನೃತ್ಯಗಾರರು ಆರ್‌ಆರ್‌ಆರ್‌ ಚಿತ್ರಗಳಿಗೆ ಹೆಜ್ಜೆಹಾಕಿದರು.

Advertisement

ಬಾಲಿವುಡ್‌ ನಟಿ ಆಲಿಯಾ ಭಟ್‌, ಅಜಯ್‌ ದೇವಗನ್‌, ಒಲಿವಿಯಾ ಮೋರಿಸ್‌ ಅಭಿನಯದ ಆರ್‌.ಆರ್‌.ಆರ್‌ ಚಿತ್ರವು ತೆಲುಗು, ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಯಲ್ಲಿ ತೆರೆಗೆ ಕಾಣಲಿದ್ದು, ಇದು 1920ರಲ್ಲಿ ಸ್ವಾತಂತ್ರ್ಯ ಹೋರಾಟಗಾರಾದ ಅಲ್ಲೂರಿ ಸೀತಾರಾಮರಾಜು, ಕೋಮರಮಂ ಭೀಮ್‌ರವರ ಕಾಲ್ಪನಿಕ ಘಟನೆಗಳ ಕಥಾಹಂದರವನ್ನು ಒಳಗೊಂಡಿದೆ.

ಚಿತ್ರದ ನಿರ್ದೇಶಕ ರಾಜಮೌಳಿ ಅವರು ಚಿತ್ರದಲ್ಲಿ ನಟರು ತಮ್ಮ ಪಾತ್ರಗಳಿಗಾಗಿ ಶ್ರಮವಹಿಸಿದ್ದನ್ನು ವಿವರಿಸಿದರು. ಆರೋಗ್ಯ ಸಚಿವ ಕೆ.ಸುಧಾಕರ್‌, ನಟ ಶಿವರಾಜ್‌ ಕುಮಾರ್‌ ನವರು ಭಾಷಣ ನೀಡಿ ಅಪ್ಪು ಸ್ಮರಣೆ ಮಾಡಿದರು. ಆರ್‌.ಆರ್‌.ಆರ್‌ ತಂಡಕ್ಕೆ ಶುಭ ಕೋರಿದರು. ಈ ವೇಳೆ ನಟರು ಚರಣ್‌, ತಾರಕ್‌, ಶಿವರಾಜ್‌ ಕುಮಾರ್‌ ಸ್ಟೇಜ್‌ ಮೇಲೆ ಬಂದಾಗ ಅಭಿಮಾನಿಗಳ ಗುಂಪು ವೇದಿಕೆ ಕಡೆಗೆ ನುಗ್ಗಿತು. ಅದನ್ನು ತಡೆಯಲು ರಾಜಮೌಳಿ ಮುಂದಾದರು. ಕಾರ್ಯಕ್ರಮಕ್ಕೆ 2 ಲಕ್ಷ ಅಭಿಮಾನಿಗಳು ಸೇರಿದ್ದರು.

ವಿದೇಶದಲ್ಲೂ ಪ್ರಚಾರ

ಜ. 7ರಿಂದಲೇ ಚಿತ್ರ ಬಿಡುಗಡೆಗೆ ಚಿತ್ರತಂಡ ಸಿದ್ಧವಾಗಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಹಿಂದಿನ ವರ್ಷ ಮುಂಬೈ, ಚೆನ್ನೈ, ಬೆಂಗಳೂರಿನಲ್ಲಿ ಪ್ರಿ-ಈವೆಂಟ್‌ ಆಯೋಜಿಸಲಾಗಿತ್ತು. ಉಳಿದ ಈವೆಂಟ್‌ಗಳು ದುಬೈ, ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ಆಯೋಜಿಸಲಾಗಿತ್ತು. ಬರೋಡಾ, ದೆಹಲಿ, ಜೈಪುರ, ಕಲ್ಕೋತಾ, ವಾರಾಣಸಿ, ಹೈದರಾಬಾದ್‌ ಸೇರಿದಂತೆ ದೇಶದ ವಿವಿಧೆಡೆ ಮಾ. 18ರಿಂದ 23ರವರಗೆ ಪ್ರಿ ಈವೆಂಟ್‌ಗಳನ್ನು ಆಯೋಜಿಸಲಾಗಿದೆ. 23ಕ್ಕೆ ಹೈದರಾಬಾದ್‌ನಲ್ಲಿ ಕೊನೆ ಕಾರ್ಯಕ್ರಮ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next