ಲಂಡನ್: ಎಸ್.ಎಸ್.ರಾಜಮೌಳಿ ಅವರ ‘ಆರ್‌ಆರ್‌ಆರ್’ ಚಿತ್ರದಲ್ಲಿ ನಿರಂಕುಶ ಗವರ್ನರ್ ಪಾತ್ರದಲ್ಲಿ ನಟಿಸಿದ್ದ ಐರಿಶ್ ನಟ ರೇ ಸ್ಟೀವನ್ಸನ್ ಭಾನುವಾರ ನಿಧನರಾಗಿದ್ದಾರೆ.
58 ವರ್ಷದ ರೇ ಸ್ವೀವನ್ಸನ್ ಅವರ ಸಾವಿಗೆ ಕಾರಣ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸ್ವೀವನ್ಸನ್ ಅವರು ಭಾರತದಲ್ಲಿ ‘ಆರ್‌ಆರ್‌ಆರ್’ ಪಾತ್ರಕ್ಕಾಗಿ ಚಿರಪರಿಚಿತರಾಗಿದ್ದರೂ, ಮಾರ್ವೆಲ್‌ನ ‘ಥಾರ್’ ಫ್ರ್ಯಾಂಚೈಸ್ ನಲ್ಲಿ ವೋಲ್ಸ್ಟಾಗ್ ಪಾತ್ರದಲ್ಲಿ ಜಗತ್ತು ಅವರನ್ನು ನೆನಪಿಸಿಕೊಳ್ಳುತ್ತದೆ.
ಸ್ಟೀವನ್ಸನ್ ಅವರು 1990 ರ ದಶಕದಲ್ಲಿ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ವೃತ್ತಿಜೀವನವನ್ನು ಪ್ರಾರಂಭಿಸಿದರು. 2000 ರ ನಂತರ ಹಾಲಿವುಡ್ ಚಲನಚಿತ್ರಗಳಲ್ಲಿ ಆಕ್ಷನ್ ಪಾತ್ರಗಳನ್ನು ಪ್ರಾರಂಭಿಸಿದರು.
ಇದನ್ನೂ ಓದಿ:ನಮ್ಮದು ಉತ್ತಮ ತಂಡವಲ್ಲ, ಪ್ಲೇ ಆಫ್ ಆಡಲು ನಾವು ಅರ್ಹರಲ್ಲ: ಆರ್ ಸಿಬಿ ನಾಯಕ Faf du Plessis
Related Articles
ಅ ಆಂಟೊಯಿನ್ ಫುಕ್ವಾ ಅವರ 2004 ರ ಆ್ಯಕ್ಷನ್ ಚಿತ್ರ ‘ಕಿಂಗ್ ಆರ್ಥರ್’ ನಲ್ಲಿ ಸ್ಟೀವನ್ಸನ್ ಮಿಂಚಿದ್ದರು. 2008 ರಲ್ಲಿ, ಸ್ಟೀವನ್ಸನ್ ಅವರು ಮಾರ್ವೆಲ್ ಚಿತ್ರ, ‘ಪನಿಶರ್: ವಾರ್ ಜೋನ್’ ನಲ್ಲಿ ಪ್ರಮುಖ ಪಾತ್ರವನ್ನು ಮಾಡಿದ್ದರು.
ರೇ ಸ್ಟೀವನ್ಸನ್ ಅವರು ನಿಧನದ ಮಾಹಿತಿ ತಿಳಿದ ರಾಜಮೌಳಿ ಬೇಸರ ವ್ಯಕ್ತಪಡಿಸಿದ್ದಾರೆ. “ಆಘಾತಕಾರಿ.. ಈ ಸುದ್ದಿಯನ್ನು ನಂಬಲಾಗುತ್ತಿಲ್ಲ. ರೇ ಅವರು ತುಂಬಾ ಸೆಟ್ ನಲ್ಲಿ ಎನರ್ಜಿ ಮತ್ತು ಚೈತನ್ಯ ತುಂಬುತ್ತಿದ್ದರು. ಅವರೊಂದಿಗೆ ಕೆಲಸ ಮಾಡಲು ಸಂತೋಷವಾಗುತ್ತಿತ್ತು. ನನ್ನ ಪ್ರಾರ್ಥನೆಗಳು ಅವರ ಕುಟುಂಬದೊಂದಿಗೆ ಇವೆ. ಅವರ ಆತ್ಮಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮಾಡಿದ್ದಾರೆ.