ಮುಂಬೈ: ಭಾರತೀಯ ಚಿತ್ರ ಪ್ರೇಮಿಗಳಿಗೆ ಹೆಮ್ಮೆಯ ಕ್ಷಣವಿದು. ಭಾರತೀಯ ಚಲನಚಿತ್ರಗಳಾದ ಆರ್‌ಆರ್‌ಆರ್ ಮತ್ತು ದಿ ಲಾಸ್ಟ್ ಫಿಲ್ಮ್ ಶೋ (ಚೆಲೋ ಶೋ) 2023 ರ ಆಸ್ಕರ್‌ಗಾಗಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಆರ್‌ಆರ್‌ಆರ್ ತನ್ನ ಎನರ್ಜಿಟಿಕ್ ಹಾಡು ‘ನಾಟು ನಾಟು’ ಗಾಗಿ ಶಾರ್ಟ್ ಲಿಸ್ಟ್ ಗೆ ಸೇರ್ಪಡೆಗೊಂಡರೆ, ದಿ ಲಾಸ್ಟ್ ಫಿಲ್ಮ್ ಶೋ ಚಿತ್ರವನ್ನು ‘ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್’ ವರ್ಗಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗಿದೆ.
ಆರ್ ಆರ್ ಆರ್ ನ ಅತ್ಯುತ್ತಮ ಹಾಡುಗಳ ವರ್ಗಕ್ಕೆ ಸಂಬಂಧಿಸಿದಂತೆ, 81 ಟ್ಯೂನ್ ಗಳಲ್ಲಿ 15 ಹಾಡುಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ‘ಅವತಾರ್: ದಿ ವೇ ಆಫ್ ವಾಟರ್’ ನಿಂದ ‘ನಥಿಂಗ್ ಈಸ್ ಲಾಸ್ಟ್’, ‘ಬ್ಲಾಂಕ್ ಪ್ಯಾಂಥರ್: ವಕಾಂಡ ಫಾರೆವರ್’ ನಿಂದ ‘ಲಿಫ್ಟ್ ಮಿ ಅಪ್’, ‘ಟಾಪ್ ಗನ್: ಮೇವರಿಕ್’ ನಿಂದ ‘ಹೋಲ್ಡ್ ಮೈ ಹ್ಯಾಂಡ್’ ಹಾಡುಗಳು ಇದರಲ್ಲಿ ಸೇರಿದೆ.
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 10 ವಿಭಾಗಗಳಲ್ಲಿ 2023ರ ಆಸ್ಕರ್ ಗಾಗಿ ತನ್ನ ಶಾರ್ಟ್ ಲಿಸ್ಟನ್ನು ಬಿಡಗುಡೆಗೊಳಿಸಿದೆ. ಸಾಕ್ಷ್ಯಚಿತ್ರ ಮತ್ತು ಅಂತಾರಾಷ್ಟ್ರೀಯ ಫೀಚರ್ಸ್ ಹಾಗೂ ಸಾಕ್ಷ್ಯಚಿತ್ರ ಕಿರು ವಿಷಯ, ಮೇಕಪ್ ಮತ್ತು ಹೇರ್ ಸ್ಟೈಲಿಂಗ್, ಒರಿಜಿನಲ್ ಸ್ಕೋರ್, ಮೂಲ ಹಾಡು, ಅನಿಮೇಟೆಡ್ ಕಿರು ಫಿಲ್ಮ್, ಲೈವ್-ಆಕ್ಷನ್ ಶಾರ್ಟ್, ಸೌಂಡ್ ಮತ್ತು ವಿಶುವಲ್ ಎಫೆಕ್ಟ್ಸ್ ಗಳು ಇದರಲ್ಲಿ ಸೇರಿದೆ.
ಇದನ್ನೂ ಓದಿ:ನಿಮ್ಮ ಪ್ರೀತಿಯ ಅಪ್ಪುಗೆಗೆ ಈ ದಾಸ ಸದಾ ಚಿರಋಣಿ : ಕಹಿ ಘಟನೆಯ ಬಳಿಕ ನಟ ದರ್ಶನ್
ನಾಮಿನೇಶನ್ ಗಳ ಮತದಾನವು ಜನವರಿ 12-17 ರವರೆಗೆ ನಡೆಯುತ್ತದೆ. ಜನವರಿ 24 ರಂದು ನಾಮಿನೇಶನ್ಸ್ ಪ್ರಕಟಿಸಲಾಗುವುದು. 95 ನೇ ಅಕಾಡೆಮಿ ಪ್ರಶಸ್ತಿಗಳನ್ನು ಮಾರ್ಚ್ 12 ರಂದು ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆಯೋಜಿಸಲಾಗಿದೆ.