Advertisement
ಕಳೆದ 4 ತಿಂಗಗಳುಗಳಿಂದ ಅಸಪರ್ಮಕ ವಿದ್ಯುತ್ ಸರಬರಾಜಾಗುತ್ತಿದೆ. ಹಲವು ಬಾರಿ ಸಮಸ್ಯೆಯನ್ನು ಇಲಾಖೆ ಗಮನಕ್ಕೆ ತರಲಾಗಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಹಕರ ಆರೋಪ.
ಫೆ. 15ರಂದು ನಡೆದ ಸವಣೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲೂ ವಿದ್ಯುತ್ ಸಮಸ್ಯೆಯ ಕುರಿತು ಪ್ರಸ್ತಾವವಾಗಿತ್ತು. ತಲೆದೋರಿರುವ ಸಮಸ್ಯೆ ಪರಿಹರಿಸುವಂತೆ ಒಂದು ವಾರದ ಗಡುವು ನೀಡಲಾಗಿದೆ. ಸಮಸ್ಯೆ ಬಗೆಹರಿಯದಿದ್ದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಮುತ್ತಿಗೆ ಹಾಕುವ ತೀರ್ಮಾನಕ್ಕೆ ಸದಸ್ಯರು ಬಂದಿದ್ದಾರೆ. ಸಮಸ್ಯೆ ಕುರಿತು 2017ರ ಮಾರ್ಚ್‌ನಲ್ಲಿ ಕೂಡ ಪ್ರತಿಭಟನೆ ನಡೆದಿತ್ತು. ಸಮಸ್ಯೆ ಏಕೆ?
ಪುತ್ತೂರಿನಿಂದ ಹೊರಡುವ 33/11 ಕೆವಿ ವಿದ್ಯುತ್ ಲೈನ್‌ನಲ್ಲಿ ಸವಣೂರು, ನೆಲ್ಯಾಡಿ, ಕಡಬ, ಸುಬ್ರಹ್ಮಣ್ಯ ಉಪಕೇಂದ್ರಗಳಿಗೆ ವಿದ್ಯುತ್ ಸರಬರಾಜಾಗುತ್ತಿತ್ತು. ಈ ಸಮಯದಲ್ಲಿ ಅಂತಹ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಈ ಬಾರಿ ಇದೇ ಲೈನ್‌ನಿಂದ ಶಾಂತಿಗೋಡಿನಿಂದ ನರಿಮೊಗರಿನಲ್ಲಿರುವ ಖಾಸಗಿ ಕೈಗಾರಿಕೆಯೊಂದಕ್ಕೆ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ಸಮಸ್ಯೆ ಆರಂಭವಾಗಿದೆ. ಆದರೆ ಇಲಾಖೆ ಖಾಸಗಿ ಕೈಗಾರಿಕೆಗೆ ವಿದ್ಯುತ್ ಸರಬರಾಜು ಮಾಡುತ್ತಿರುವುದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಗ್ರಾಹಕರು ದೂರುತ್ತಿದ್ದಾರೆ.
Related Articles
ಸವಣೂರು ಗ್ರಾಮಸಭೆಯಲ್ಲೂ ಗ್ರಾಹಕರು ಸಮಸ್ಯೆಯನ್ನು ಪ್ರಸ್ತಾವಿಸಿದ್ದರು. ಕೃಷಿಕಾರ್ಯಗಳಿಗೆ ನೀರುಣಿಸಲು ಸರಿಯಾದ ವಿದ್ಯುತ್ ಇಲ್ಲ. ಈ ಕುರಿತು ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೆಳೆದ ಅಲ್ಪ ಕೃಷಿಯನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಕೃಷಿಕ ಗಣೇಶ್ ಭಟ್ ಅಳಲು ತೋಡಿಕೊಂಡಿದ್ದಾರೆ.
Advertisement
ಬಿಜೆಪಿಯಿಂದ ಮನವಿವಿದ್ಯುತ್ ಸಮಸ್ಯೆಯ ಕುರಿತು ಬಿಜೆಪಿ ಸವಣೂರು ಗ್ರಾ.ಪಂ. ಸಮಿತಿ ಮೆಸ್ಕಾಂ ಇಲಾಖೆಗೆ, ಮೆಸ್ಕಾಂ ನಿರ್ದೇಶಕರಿಗೆ ಫೆ. 15ರಂದು ಮನವಿ ಸಲ್ಲಿಸಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಫೆ. 26ರಂದು ಸಾರ್ವಜನಿಕರೊಂದಿಗೆ ಸೇರಿ ಮೆಸ್ಕಾಂ ಉಪಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದೆ. ದಿನದಲ್ಲಿ ಕನಿಷ್ಠ 12ಗಂಟೆ 3 ಫೇಸ್ ವಿದ್ಯುತ್, 20 ಗಂಟೆ ನಿರಂತರ ಮನೆ ಬಳಕೆಯ ವಿದ್ಯುತ್ ಪೂರೈಕೆ, ಸವಣೂರು ಉಪಕೇಂದ್ರಕ್ಕೆ ಪ್ರತ್ಯೇಕ ಫೀಡರ್, ಉಪಕೇಂದ್ರದ ವ್ಯಾಪ್ತಿಯಲ್ಲಿ ಬೇಡಿಕೆಯಿರುವ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. 5 ನಿಮಿಷ ಕೊಟ್ಟು, 15 ನಿಮಿಷ ಕಡಿತ
ಕಳೆದ ಒಂದು ವಾರದಿಂದ ಸವಣೂರು ಉಪಕೇಂದ್ರದಿಂದ ಸರಬರಾಜಾಗುವ ವಿದ್ಯುತ್ ಅನ್ನು 5 ನಿಮಿಷ ಕೊಟ್ಟು 15 ನಿಮಿಷ ಕಡಿತ ಮಾಡಲಾಗುತ್ತಿದೆ. ಇಲಾಖಾಧಿಕಾರಿಗಳನ್ನು ಕೇಳಿದರೆ ಮೈನ್ ಸಪ್ಲೈ ಇಲ್ಲ ಎಂಬ ಸಿದ್ಧ ಉತ್ತರ ನೀಡುತ್ತಾ ಬಂದಿದ್ದಾರೆ. ಇದರಿಂದಾಗಿ ತೀರಾ ತೊಂದರೆಗಳು ಉಂಟಾಗುತ್ತಿವೆ.
– ದೇವಿಪ್ರಸಾದ್ ಸಜಂಕು
ಪ್ರಗತಿಪರ ಕೃಷಿಕ