Advertisement

ಜೋಶ್‌ ಬಟ್ಲರ್‌ ಸೂಪರ್‌ ಸೆಂಚುರಿ

10:12 PM May 02, 2021 | Team Udayavani |

ಹೊಸದಿಲ್ಲಿ: ಆರಂಭಕಾರ ಜಾಸ್‌ ಬಟ್ಲರ್‌ ಅವರ ಮೊದಲ ಐಪಿಎಲ್‌ ಸೆಂಚುರಿ ಸಾಹಸದಿಂದ ರವಿವಾರದ ಡೇ ಮ್ಯಾಚ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ 55 ರನ್ನುಗಳಿಂದ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಮಣಿಸಿ ಮೂರನೇ ಗೆಲುವು ಸಾಧಿಸಿದೆ. ಇನ್ನೊಂದೆಡೆ ನಾಯಕತ್ವ ಬದಲಾದರೂ ಹೈದರಾಬಾದ್‌ ಸೋಲಿನ ಮೂಟೆಯನ್ನು ಕೆಳಗಿಳಿಸಿಕೊಳ್ಳುವಲ್ಲಿ ವಿಫ‌ಲವಾಗಿ ತೀವ್ರ ಮುಖಭಂಗ ಅನುಭವಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ಮೂರೇ ವಿಕೆಟಿಗೆ 220 ರನ್‌ ರಾಶಿ ಹಾಕಿತು. ಇದರಲ್ಲಿ ಜಾಸ್‌ ಬಟ್ಲರ್‌ ಪಾಲು 124 ರನ್‌. ಜವಾಬಿತ್ತ ಹೈದರಾಬಾದ್‌ 8 ವಿಕೆಟಿಗೆ 165 ರನ್‌ ಗಳಿಸಿ ಶರಣಾಯಿತು.

ತಂಡದ ಸತತ ವೈಫ‌ಲ್ಯದಿಂದ ಡೇವಿಡ್‌ ವಾರ್ನರ್‌ ಅವರನ್ನು ಶನಿವಾರವಷ್ಟೇ ಹೈದರಾಬಾದ್‌ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಕೇನ್‌ ವಿಲಿಯಮ್ಸನ್‌ಗೆ ಸಾರಥ್ಯ ವಹಿಸಲಾಯಿತು. ಆದರೆ ತಂಡ ಮಾತ್ರ ಸೋಲಿನಿಂದ ಮುಕ್ತಿ ಕಾಣಲಿಲ್ಲ. ಇದು 7 ಪಂದ್ಯಗಳಲ್ಲಿ ಹೈದರಾಬಾದ್‌ಗೆ ಎದುರಾದ 6ನೇ ಸೋಲು. ಇನ್ನು  ಸನ್‌ರೈಸರ್ ತಂಡದ ಪ್ಲೇ ಆಫ್ ಪ್ರವೇಶ ಬಹುತೇಕ ಅಸಾಧ್ಯ.

ಬಟ್ಲರ್‌ ಬೊಂಬಾಟ್‌ ಆಟ :

ಇಂಗ್ಲಿಷ್‌ಮ್ಯಾನ್‌ ಜಾಸ್‌ ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌ ಮೂಲಕ ಪಂದ್ಯದ ಆಕರ್ಷಣೆಯ ಕೇಂದ್ರವಾದರು. 19ನೇ ಓವರ್‌ ತನಕ ಹೈದರಾಬಾದ್‌ ಬೌಲರ್‌ಗಳನ್ನು ಹೆದರಿಸುತ್ತಲೇ ಹೋದ ಬಟ್ಲರ್‌ ಕೇವಲ 64 ಎಸೆತಗಳಿಂದ 124 ರನ್‌ ಸೂರೆಗೈದರು. ಸಿಡಿಸಿದ್ದು 11 ಬೌಂಡರಿ ಹಾಗೂ 8 ಸಿಕ್ಸರ್‌.

Advertisement

ಇದು ಬಟ್ಲರ್‌ ಅವರ ಮೊದಲ ಐಪಿಎಲ್‌ ಶತಕ. ಹಿಂದಿನ ಗರಿಷ್ಠ ಗಳಿಕೆ 95 ರನ್‌ ಆಗಿತ್ತು. ಬಟ್ಲರ್‌ ಐಪಿಎಲ್‌ನಲ್ಲಿ ಸೆಂಚುರಿ ಹೊಡೆದ ಇಂಗ್ಲೆಂಡಿನ 4ನೇ ಕ್ರಿಕೆಟಿಗ. ಕೆವಿನ್‌ ಪೀಟರ್‌ಸನ್‌, ಬೆನ್‌ ಸ್ಟೋಕ್ಸ್‌, ಜಾನಿ ಬೇರ್‌ಸ್ಟೊ ಉಳಿದ ಮೂವರು. ಇವರಲ್ಲಿ ಸ್ಟೋಕ್ಸ್‌ ಎರಡು ಶತಕ ಬಾರಿಸಿದ್ದಾರೆ.

33 ಎಸೆತಗಳಿಂದ 48 ರನ್‌ ಮಾಡಿದ ನಾಯಕ ಸಂಜು ಸ್ಯಾಮ್ಸನ್‌ ಕೂಡ ರಾಜಸ್ಥಾನ್‌ ಸರದಿಗೆ ಜೋಶ್‌ ತುಂಬಿದರು. ಬಟ್ಲರ್‌-ಸ್ಯಾಮ್ಸನ್‌ ದ್ವಿತೀಯ ವಿಕೆಟಿಗೆ 13.4 ಓವರ್‌ಗಳಿಂದ 150 ರನ್‌ ಪೇರಿಸಿ “ಕೋಟ್ಲಾ’ದಲ್ಲಿ ಮೆರೆದಾಡಿದರು. ಸ್ಯಾಮ್ಸನ್‌ ಬ್ಯಾಟಿಂಗ್‌ ವೇಳೆ 4 ಬೌಂಡರಿ, 2 ಸಿಕ್ಸರ್‌ ಸಿಡಿಯಿತು. ರಶೀದ್‌ ಖಾನ್‌ ಹೊರತುಪಡಿಸಿದರೆ ಹೈದರಾಬಾದ್‌ನ ಬೇರೆ ಯಾವುದೇ ಬೌಲರ್‌ಗೂ ನಿಯಂತ್ರಣ ಸಾಧಿಸಲಾಗಲಿಲ್ಲ.

ಹೈದರಾಬಾದ್‌ ವೈಫ‌ಲ್ಯ :

ಹೈದರಾಬಾದ್‌ ಆರಂಭವೇನೋ ಭರವಸೆ ಮೂಡಿಸುವಂತಿತ್ತು. ಬೇರ್‌ಸ್ಟೊ-ಪಾಂಡೆ ಸೇರಿಕೊಂಡು 6.1 ಓವರ್‌ಗಳಿಂದ 57 ರನ್‌ ಒಟ್ಟುಗೂಡಿಸಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸಿದ ಬಳಿಕ ರಾಜಸ್ಥಾನ್‌ ಬೌಲಿಂಗ್‌ ಹರಿತಗೊಳ್ಳತೊಡಗಿತು. ಬ್ಯಾಟಿಂಗ್‌ ಟ್ರ್ಯಾಕ್‌ನಲ್ಲೂ ವಿಲಿಯಮ್ಸನ್‌ ಪಡೆಯ ಪರದಾಟ ಮುಂದುವರಿಯಿತು.

ರಾಜಸ್ಥಾನ್‌ ರಾಯಲ್ಸ್‌ :

ಜಾಸ್‌ ಬಟ್ಲರ್‌  ಬಿ ಸಂದೀಪ್‌     124

ಜೈಸ್ವಾಲ್‌         ಎಲ್‌ಬಿಡಬ್ಲ್ಯು ಬಿ ರಶೀದ್‌        12

ಸ್ಯಾಮ್ಸನ್‌        ಸಿ ಸಮದ್‌ ಬಿ ಶಂಕರ್‌   48

ರಿಯಾನ್‌ ಪರಾಗ್‌         ಔಟಾಗದೆ         15

ಡೇವಿಡ್‌ ಮಿಲ್ಲರ್‌         ಔಟಾಗದೆ         7

ಇತರ               14

ಒಟ್ಟು(3 ವಿಕೆಟಿಗೆ)                    220

ವಿಕೆಟ್‌ ಪತನ:1-17, 2-167, 3-209.

ಬೌಲಿಂಗ್‌;

ಭುವನೇಶ್ವರ್‌ ಕುಮಾರ್‌ 4-0-37-0

ಸಂದೀಪ್‌ ಶರ್ಮ                      4-0-50-1

ರಶೀದ್‌ ಖಾನ್‌              4-0-24-1

ಖಲೀಲ್‌ ಅಹ್ಮದ್‌                     4-0-41-0

ವಿಜಯ್‌ ಶಂಕರ್‌                     3-0-42-1

ಮೊಹಮ್ಮದ್‌ ನಬಿ                    1-0-21-0

ಸನ್‌ರೈಸರ್ ಹೈದರಾಬಾದ್‌  :

ಮನೀಷ್‌ ಪಾಂಡೆ         ಬಿ ಮುಸ್ತಫಿಜುರ್‌          31

ಜಾನಿ ಬೇರ್‌ಸ್ಟೊ          ಸಿ ರಾವತ್‌ ಬಿ ತೇವಟಿಯಾ        30

ಕೇನ್‌ ವಿಲಿಯಮ್ಸನ್‌    ಸಿ ಮಾರಿಸ್‌ ಬಿ ತ್ಯಾಗಿ     20

ವಿಜಯ್‌ ಶಂಕರ್‌         ಸಿ ಮಿಲ್ಲರ್‌ ಬಿ ಮಾರಿಸ್‌ 8

ಕೇದಾರ್‌ ಜಾಧವ್‌        ಬಿ ಮಾರಿಸ್‌      19

ಮೊಹಮ್ಮದ್‌ ನಬಿ ಸಿ ರಾವತ್‌ ಬಿ ಮುಸ್ತಫಿಜುರ್‌ 17

ಅಬ್ದುಲ್‌ ಸಮದ್‌         ಸಿ ರಾವತ್‌ ಬಿ ಮಾರಿಸ್‌ 10

ರಶೀದ್‌ ಖಾನ್‌ ಸಿ ಮಾರಿಸ್‌ ಬಿ ಮುಸ್ತಫಿಜುರ್‌     0

ಭುವನೇಶ್ವರ್‌   ಔಟಾಗದೆ         14

ಸಂದೀಪ್‌ ಶರ್ಮ          ಔಟಾಗದೆ         8

ಇತರ               8

ಒಟ್ಟು(8 ವಿಕೆಟಿಗೆ)                    165

ವಿಕೆಟ್‌ ಪತನ:1-57, 2-70, 3-85, 4-105, 5-127, 6-142, 7-142, 8-143

ಬೌಲಿಂಗ್‌;

ಕಾರ್ತಿಕ್‌ ತ್ಯಾಗಿ             4-0-32-1

ಮುಸ್ತಫಿಜುರ್‌ ರೆಹಮಾನ್‌        4-0-20-3

ಚೇತನ್‌ ಸಕಾರಿಯಾ                 4-0-38-0

ಕ್ರಿಸ್‌ ಮಾರಿಸ್‌              4-0-29-3

ರಾಹುಲ್‌ ತೇವಟಿಯಾ  4-0-45-1

ಪಂದ್ಯಶ್ರೇಷ್ಠ: ಜಾಸ್‌ ಬಟ್ಲರ್‌

Advertisement

Udayavani is now on Telegram. Click here to join our channel and stay updated with the latest news.

Next