ಜೈಪುರ: ರವಿವಾರದ ಮೊದಲ ಹಣಾಹಣಿಯಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿದೆ. ಜೈಪುರದ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದಾರೆ.
ಆರ್ ಸಿಬಿ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಜೋಶ್ ಹೇಝಲ್ ವುಡ್ ಬದಲಿಗೆ ವೇಯ್ನ್ ಪಾರ್ನಲ್ ಮತ್ತು ಹಸರಂಗ ಬದಲಿಗೆ ಬ್ರೇಸ್ ವೆಲ್ ಸ್ಥಾನ ಪಡೆದಿದ್ದಾರೆ. ರಾಜಸ್ಥಾನ ತಂಡದಲ್ಲಿ ಬೌಲ್ಟ್ ಬದಲಿಗೆ ಆ್ಯಡಂ ಝಂಪಾ ಆಡುತ್ತಿದ್ದಾರೆ.
11 ಪಂದ್ಯದಲ್ಲಿ 5 ಪಂದ್ಯ ಗೆದ್ದ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಪ್ಲೇ ಆಫ್ ಆಸೆ ಜೀವಂತ ಇರಬೇಕಾದರೆ ಆರ್ ಸಿಬಿಗೆ ಗೆಲುವು ಮುಖ್ಯ. ಮತ್ತೊಂದಡೆ ಗೆಲುವಿನ ಲಯಕ್ಕೆ ಮರಳಿರುವ ರಾಜಸ್ಥಾನ ರಾಯಲ್ಸ್ 12 ಪಂದ್ಯಗಳಿಂದ ಆರನ್ನು ಗೆದ್ದು 12 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದರೆ ಮೂರನೇ ಸ್ಥಾನಕ್ಕೇರಲಿದೆ.
ಬೆಂಗಳೂರು ತಂಡದ ಬ್ಯಾಟಿಂಗ್ ನಂತೆ ಬೌಲಿಂಗ್ ಕೂಡಾ ಕೈಕೊಡುತ್ತಿದ್ದು, ಚಿಂತೆಗೆ ಕಾರಣವಾಗಿದೆ. ಅತ್ತ ರಾಜಸ್ಥಾನ ತಂಡದ ಜೈಸ್ವಾಲ್, ಬಟ್ಲರ್, ಸ್ಯಾಮ್ಸನ್ ಭರ್ಜರಿ ಫಾರ್ಮ್ ನಲ್ಲಿದ್ದು ಅವರನ್ನು ಕಟ್ಟಿಹಾಕಬೇಕಿದೆ.
ಐಪಿಎಲ್ ನಲ್ಲಿ 4000 ರನ್ ಕ್ಲಬ್ ಗೆ ಪ್ರವೇಶಿಸಲು ಫಾಫ್ ಡು ಪ್ಲೆಸಿಸ್ 21 ರನ್‌ಗಳ ಅಗತ್ಯವಿದೆ. ಅವರು 2023 ರ ಋತುವಿನಲ್ಲಿ 50 ಬೌಂಡರಿಗಾಗಿ 5 ಬೌಂಡರಿಗಳ ಅಗತ್ಯವಿದೆ.