Advertisement
ಜಾಲಹಳ್ಳಿ ವಾರ್ಡ್‌ನಲ್ಲಿ ಮಂಗಳವಾರ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರಾದ ಆರ್.ಅಶೋಕ್,ಎಸ್.ಟಿ.ಸೋಮಶೇಖರ್ ಇತರರು ಕಾಂಗ್ರೆಸ್,ಜೆಡಿಎಸ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ಆರ್.ಅಶೋಕ್ ಮಾತನಾಡಿ, ಸಚಿವರಾದ ಎಸ್.ಟಿ.ಸೋಮ ಶೇಖ ರ್ ಯಾವುದೇ ಬೇಡಿಕೆ ಇಲ್ಲದೆ ಪಕ್ಷಕ್ಕೆ ಬಂದರು. ಹೀಗಾಗಿ ಮುನಿರತ್ನ ಅವರನ್ನು ಗೆಲ್ಲಿಸುವಮೂಲಕಋಣ ತೀರಿಸ ಬೇಕಿದೆ. ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬೆಂಗಳೂ ರಿನ ಮತದಾರರು ಯಾರ ಪರವಾಗಿದ್ದಾರೆ ಎಂಬ ಸಂದೇಶ ಸಾರಬೇಕಿದೆ. ಕಾರ್ಯಕರ್ತರ ಭಾವನೆ ಏನೇ ಇದ್ದರೂಅಭಿವೃದ್ಧಿದೃಷ್ಟಿಯಿಂದ ಎಲ್ಲರೂಚುನಾ ವಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
Related Articles
Advertisement
ಉಪ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಿ: ಬಾಲಕೃಷ್ಣ
ಕೆಂಗೇರಿ: ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ರೈತರು, ಬಡವರು ತಿನ್ನಲು ಅನ್ನ ಆಹಾರವಿಲ್ಲದೆ, ಉಡಲುಬಟ್ಟೆಯಿಲ್ಲದೆ, ಮಲಗಲು ಮನೆಯಿಲ್ಲದೆ ಗೋಳಾಡುತ್ತಿದ್ದರೆ, ಅತ್ತ ಕಡೆ ಸುಳಿಯದೆ ಉಪಮುಖ್ಯಮಂತ್ರಿ, ಸಚಿವರಿಗೆ ಉಪ ಚುನಾವಣೆಯೇ ಪ್ರಧಾನವಾಗಿದ್ದು, ಕೋವಿಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಹಣವನ್ನು ಲೂಟಿ ಮಾಡುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೂಗೆಯ ಬೇಕೆಂದು ಮಾಜಿ ಶಾಸಕ ಎಚ್.ಸಿ.ಬಾಲ ಕೃಷ್ಟ ಮತದಾರರಲ್ಲಿ ಮನವಿ ಮಾಡಿದರು.
ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್.ಪರವಾಗಿ ಕೆಬ್ಬೆ ಹಳ್ಳಿ, ಲಗ್ಗೆರೆ, ಪೀಣ್ಯ ಸೇರಿದಂತೆ ವಿವಿಧ ಬಾಗಗಳಲ್ಲಿ ಮತಯಾಚಿಸಿ ಮಾತನಾಡಿದರು.
ನರೇಂದ್ರಮೋದಿ 7 ವರ್ಷದ ಹಿಂದೆ 100 ದಿನದೊಳಗೆಬಡತನ ನಿರ್ಮೂಲನೆ,ಯುವ ಜನಾಂಗಕ್ಕೆ ಉದ್ಯೋಗ, ಕಪ್ಪುಹಣತಂದು ಎಲ್ಲಾ ನಾಗರಿಕರ ಖಾತೆಗೆ 15 ಲಕ Ò ಜಮೆ,ಪೆಟ್ರೋಲ್, ಡೀಸೆಲ್, ದಿನಬಳಕೆ ಆಹಾರ ಪದಾರ್ಥಗಳ ಬೆಲೆ ಇಳಿಸುವ ಭರವಸೆ ನೀಡಿ ನಾಗರಿಕರಿಗೆ ಟೋಪಿಹಾಕಿದ್ದಾರೆ.ಮತದಾರರುಈಚುನಾವಣೆಯಲ್ಲಿ ಬಿಜೆಪಿಗೆ ಬುದ್ಧಿ ಕಲಿಸುವ ಮೂಲಕ ದೇಶಸೇವೆ ಮಾಡುವ, ಬಡವರ, ರೈತರ, ಕಾರ್ಮಿಕರ ಪರವಾಗಿ ದುಡಿಯುವಕಾಂಗ್ರೆಸ್‌ಗೆ ಶಕ್ತಿ ತುಂಬಬೇಕೆಂದು ಮನವಿ ಮಾಡಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ದೇಶದಲ್ಲಿ ದಲಿತ,ಹಿಂದುಳಿದ ವರ್ಗದ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸಿ ಅತ್ಯಾಚಾರ ನಡೆಸಿ ಕೊಲೆ ಮಾಡುತ್ತಿರುವ ವ್ಯಕ್ತಿಗಳಿಗೆ ಬಿಜೆಪಿ ಸರ್ಕಾರ ರಕ್ಷಣೆ ನೀಡುತ್ತಿದೆ. ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಅವೈಜ್ಞಾನಿಕ ಕೃಷಿ ನೀತಿಯಿಂದ ದೇಶದೆಲ್ಲೆಡೆ ಸಣ್ಣ, ಮಧ್ಯಮ ವರ್ಗದರೈತರ ಭೂಮಿ ಕಸಿದು ಬಂಡವಾಳ ಶಾಹಿಗಳಿಗೆ ನೀಡಲು ಹೊರಟಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಲು ಜನ ತೀರ್ಮಾನಿಸಿದ್ದಾರೆಂದರು.
ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ ಮಾತನಾಡಿ, ನಿಮ್ಮ ಮನೆಯ ಮಗಳು, ವಿದ್ಯಾವಂತೆ, ಸಮಾಜಮುಖೀ ಸೇವೆ ಮಾಡಲು ಜಾತ್ಯತೀತವಾಗಿ ನೊಂದಜನರ ಪರವಾಗಿ ಗಟ್ಟಿಯಾಗಿ ಪ್ರಶ್ನಿಸಲು ಮತದಾರರು ಮತ ನೀಡುವ ಮೂಲಕ ಶಕ್ತಿ ತುಂಬಬೇಕೆಂದರು. ಶಾಸಕ ಡಾ.ರಂಗನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಎಸ್.ರವಿ ಇದ್ದರು.