Advertisement

ಶ್ರದ್ಧಾ ಭಕ್ತಿಯಿಂದ ರಾಯರ ಉತ್ತರಾರಾಧನೆ-ರಥೋತ್ಸವ

03:43 PM Aug 30, 2018 | |

ತಾಳಿಕೋಟೆ: ಪಟ್ಟಣದಲ್ಲಿ ಗುರುರಾಜ ಭಜನಾ ಮಂಡಳಿಯವರಿಂದ ರಾಘವೇಂದ್ರ ಮಹಾಸ್ವಾಮಿಗಳ 44ನೇ ಆರಾಧನಾ ಮಹೋತ್ಸವ ನಿಮಿತ್ತ ಬುಧವಾರ ಉತ್ತರಾರಾಧನೆ ಮಹಾ ರಥೋತ್ಸವ ಕಾರ್ಯಕ್ರಮ ಭಕ್ತಿಭಾವದೊಂದಿಗೆ ಜರುಗಿತು.

Advertisement

ಉತ್ತರಾಧನೆ ನಿಮಿತ್ತ ಬೆಳಗ್ಗೆ 5ರಿಂದ 6ರವರೆಗೆ ಸುಪ್ರಭಾತ, 7ರಿಂದ8ರವರೆಗೆ ನಗರೇಶ್ವರ ಮಹಾಮೂರ್ತಿಗೆ ರುದ್ರಾಭಿಷೇಕ, ಅಲಂಕಾರ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರತಿ, 8ರಿಂದ 10ರವರೆಗೆ ಪಂಚಾಮೃತ ಅಭಿಷೇಕ ಗುರುರಾಯರ ಅಷ್ಟೋತ್ತರ ಜರುಗಿದವು.

ಪೂಜೆ ಕಾರ್ಯಕ್ರಮವನ್ನು ಪುರುಷೋತ್ತಮಾಚಾರ್ಯ ಗ್ರಾಂಪುರೋಹಿತ, ವಸಂತ ಜೋಶಿ, ಶ್ರೀಧರ ಜೋಶಿ, ಶೇಷಾಚಲ ಗ್ರಾಂಪುರೋಹಿತ, ಗುಂಡು ಜೋಶಿ, ಅನಿಲಬಟ್ಟ ಜೋಶಿ, ಶ್ರೀಧರ ಗ್ರಾಂಪುರೋಹಿತ, ರಾಘು ಉಡಪಿ, ಅಭಿಷೇಕ ಜೋಶಿ, ವೇಂಕಟೇಶ ಗ್ರಾಂಪುರೋಹಿತ, ಸಂಜು ಗ್ರಾಂಪುರೋಹಿತ, ಶ್ರೀನಿವಾಸ ಜೋಶಿ, ಮುರಳಿ ಜೋಶಿ ನಡೆಸಿಕೊಟ್ಟರು.

ಸಾಯಂಕಾಲ ತಾರತಮ್ಯ ಭಜನೆ ಪಲ್ಲಕ್ಕಿ ಉತ್ಸವದೊಂದಿಗೆ ರಾಘವೇಂದ್ರ ಮಹಾಸ್ವಾಮಿಗಳ ಮಹಾರಥೋತ್ಸವವು ನಗರೇಶ್ವರ ದೇವಸ್ಥಾನದಿಂದ ಕತ್ರಿಬಜಾರ ಮಾರ್ಗವಾಗಿ ವಿಠ್ಠಲ ಮಂದಿರ ತಲುಪಿ ಮರಳಿ ಅದೇ ಮಾರ್ಗವಾಗಿ ದೇವಸ್ಥಾನ ತಲುಪಿತು. ರಥೋತ್ಸವದ ಉದ್ದಕ್ಕೂ ಮಹಿಳಾ ಮಂಡಳಿಯವರ ನೃತ್ಯ ಕೋಲಾಟ ಗಮನ ಸೆಳೆದವು.

ಡಾ| ನಾರಾಯಣ ಶೆಟ್ಟಿ, ಯಂಕಣ್ಣ ಕನಕಗಿರಿ, ರವಿ ತಾಳಪಲ್ಲೆ, ಯಂಕಣ್ಣ ತಾಳಪಲ್ಲೆ, ಸತ್ಯನಾರಾಯಣ ಶೆಟ್ಟಿ, ಮುರಳೀಧರ ಮಾನ್ವಿ, ಅಶೋಕ ಶೆಟ್ಟಿ, ಮಂಜು ಶೆಟ್ಟಿ, ಭೀಮಣ್ಣ ಅಗಡಿ, ಕಾಂತಯ್ಯ ಗೊಟಗುಣಕಿ, ಶ್ರೀಕಾಂತ ಶೆಟ್ಟಿ, ಕೃಷ್ಣಾ ತಾಳಪಲ್ಲೆ, ಪ್ರಲ್ಹಾದ ಮಾನ್ವಿ, ಸುವೇಂದ್ರ ಕನಕಗಿರಿ, ವೇಂಕಟೇಶ ತಾಳಪಲ್ಲೆ, ಬದರಿನಾರಾಯಣ ಕನಕಗಿರಿ, ಸತ್ಯನಾರಾಯಣ ತಾಳಪಲ್ಲೆ, ದಯಾನಂದ ಗಂಪ್ಪಾ ಇದ್ದರು.

Advertisement

ಬಸವನಬಾಗೇವಾಡಿ: ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆ ರಾಘವೇಂದ್ರ ಗುರು ಸಾರ್ವಭೌಮರ 347ನೇ ಆರಾಧನಾ ಮಹೋತ್ಸವ ಸಂಭ್ರಮದಿಂದ ನಡೆಯಿತು. ನಾಯ್ಕೋಡಿ ಗಲ್ಲಿಯ ರಾಘವೇಂದ್ರ ಮಠದಲ್ಲಿ ಬುಧವಾರ ಬೆಳಗ್ಗೆ ವಿಷ್ಣು ಸಹಸ್ರನಾಮ ಪಾರಾಯಣ ಪಂಚಾಮೃತ ಅಭಿಷೇಕ ಮಧ್ಯಾಹ್ನ ರಥಕ್ಕೆ ವಿಶೇಷ ಪೂಜೆ ನೆರವೇರಿಸಿದ
ನಂತರ ಭಕ್ತರು ಭಜನೆಯೊಂದಿಗೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. 

ರಥೋತ್ಸವದಲ್ಲಿ ವಕೀಲ ಎಸ್‌.ಕೆ. ಚೌಧರಿ, ವಿಠuಲ ಕುಲಕರ್ಣಿ, ಅನಿಲ ಕುಲಕರ್ಣಿ, ಅನಿಲ ದೇಶಪಾಂಡೆ,
ರಾಮಾಚಾರಿ ಯಜರ್ವೇದಿ, ಜಯತೀರ್ಥ ಇಂಗಳೇಶ್ವರ, ರಮೇಶ ಇನಮದಾರ, ಬಾಪು ಜೋಶಿ, ರಾಘವೇಂದ್ರ ಕುಲಕರ್ಣಿ, ಅರವಿಂದ ಕುಲಕರ್ಣಿ, ಮುಕುಂದ ದೇಶಪಾಂಡೆ, ವಿನಾಯಕ ದೇಶಪಾಂಡೆ, ನಾರಾಯಣ ಕುಲಕರ್ಣಿ, ಅಚ್ಯುತ್ತ ಕುಲಕಣಿ, ಎಂ.ಜಿ. ಕುಲಕರ್ಣಿ, ಪ್ರಸನ್ನ ಕುಲಕರ್ಣಿ, ವಿ.ಜಿ. ಕುಲಕರ್ಣಿ, ಭಾರತಿ ಕುಲಕರ್ಣಿ, ವಿಜಯಲಕ್ಷ್ಮೀ ಕುಲಕರ್ಣಿ, ನಾಗವೇಣಿ ಇನಮದಾರ, ಪುಷ್ಪಾ ದೇಶಪಾಂಡೆ, ನಂದಾ ಇಂಗಳೇಶ್ವರ, ನಂದಾ ಕುಲಕರ್ಣಿ, ವೀಣಾ ದೇಶಪಂಡೆ, ರಜನಿ  ಅಥಣೀಕರ, ಅಂಜನಾ ಕುಲಕರ್ಣಿ,ಸುಜಾತಾ ಜೋಶಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next