Advertisement
ಶೆರ್ಪಾ, ಹಂಟರ್ ಹೊಸ ಬೈಕುಎನ್ಫೀಲ್ಡ್ ಹೊಸ ಬೈಕ್‌ಗಳ ಬಿಡುಗಡೆಗೆ ಯೋಜನೆ ರೂಪಿಸಿದ್ದು, ಅವುಗಳ ಹೆಸರು ಶೆರ್ಪಾ, ಹಂಟರ್ ಎಂದಿರಲಿದೆ. ಅಂದಹಾಗೆ ಈ ಶೆರ್ಪಾ ಬಿಡುಗಡೆಯಾಗಬೇಕಾದರೂ ತೀರ ಹೊಸತೇನಲ್ಲ. 1960ರಲ್ಲೇ ಈ ಹೆಸರಿನ ಬೈಕ್ ಅನ್ನು ಎನ್‌ಫೀಲ್ಡ್ ಮಾರುಕಟ್ಟೆಯಲ್ಲಿ ಹೊಂದಿತ್ತು. ಅದು 173ಸಿಸಿ ಬೈಕ್ ಆಗಿದ್ದು, ರಾಜದೂತ್‌ಗೆ ಸಡ್ಡು ಹೊಡೆದಿತ್ತು. ಸದ್ಯ ಹೊಸ ಶೆರ್ಪಾ 250 ಸಿಸಿ ಬೈಕ್ ಆಗಿರಲಿದೆ ಎಂದು ಹೇಳಲಾಗಿದೆ.
ಶೆರ್ಪಾ ಮತ್ತು ಹಂಟರ್‌ಗಳು ಎನ್‌ಫೀಲ್ಡ್‌ನ ಎಂಟ್ರಿ ಲೆವೆಲ್ ಮಾಡೆಲ್‌ಗಳಾಗಿದ್ದು ಹೆಚ್ಚಿನ ಗ್ರಾಹಕರನ್ನು ತಲುಪುವ ಉದ್ದೇಶ ಹೊಂದಲಾಗಿದೆ. ಈ ಶೆರ್ಪಾ ಬೈಕ್ ಹಿಮಾಲಯನ್‌ನ ಕಿರಿ ತಮ್ಮ ಆಗಿರಲಿದೆ ಎಂಬ ಗುಸುಗುಸು ಕೂಡ ಇದೆ.
2020ರ ಕೊನೆಯ ಭಾಗದಲ್ಲಿ ಎರಡೂ ಬೈಕ್‌ಗಳು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಇದರೊಂದಿಗೆ ಎನ್‌ಫೀಲ್ಡ್ ದೊಡ್ಡ ಸಾಮರ್ಥ್ಯದ ಬೈಕುಗಳ ತಯಾರಿಗೆ ಹೆಚ್ಚಿನ ಗಮನವನ್ನೂ ಕೊಡುತ್ತಿದೆ. 650 ಸಿಸಿ ಹಿಮಾಲಯನ್ ಕೂಡ ಬಿಡುಗಡೆಯಾಗುವ ನಿರೀಕ್ಷೆ ಇದೆ.