Advertisement

ಎನ್‌ಫೀಲ್ಡ್‌ನ ಹೊಸ ಬೈಕ್‌ ಬಿಡುಗಡೆ

06:00 AM May 31, 2018 | |

ನವದೆಹಲಿ: ಖ್ಯಾತ ಬೈಕ್‌ ಬ್ರಾಂಡ್‌ ಆದ ರಾಯಲ್‌ ಎನ್‌ಫೀಲ್ಡ್‌ ವತಿಯಿಂದ “ಕ್ಲಾಸಿಕ್‌ 500 ಪೆಗಾಸಸ್‌’ ಎಂಬ ಹೊಸ ಮಾಡೆಲ್‌ ಶೀಘ್ರವೇ  ಬಿಡುಗಡೆಗೊಳ್ಳಲಿದೆ. ಅದರ ಬೆಲೆ 2.49 ಲಕ್ಷ ಆಗಿದ್ದು (ಮುಂಬೈನ ಎಕ್ಸ್‌ ಷೋ ರೂಂ ಬೆಲೆ) ಭಾರತದಲ್ಲಿ ಸದ್ಯಕ್ಕೆ ಈ ಮಾದರಿಯ ಕೇವಲ 250 ಬೈಕುಗಳನ್ನಷ್ಟೇ ಮಾರಾಟ ಮಾಡುವುದಾಗಿ ಕಂಪನಿ ಹೇಳಿದೆ. ಸದ್ಯಕ್ಕೆ, ಕಂಪನಿಯ ಅಧಿಕೃತ ವೆಬ್‌ ಸೈಟ್‌ ಮೂಲಕ ಇದನ್ನು ಖರೀದಿಸಬಹುದು. 

Advertisement

ವಿಶೇಷತೆ: ಪೆಗಾಸಸ್‌ ಮಾದರಿಯ ಬೈಕು, ಈ ಹಿಂದೆ ರಾಯಲ್‌ ಎನ್‌ ಫೀಲ್ಡ್‌ ಕಂಪನಿಯೇ ತಯಾರಿಸಿದ್ದ ಆರ್‌ಇ/ ಡಬ್ಲೂಡಿ 125 ಫ್ಲೈಯಿಂಗ್‌ ಪ್ಲೀ ಬೈಕ್‌ಗಳ ಮಾದರಿಯ ಸುಧಾರಿತ ಮಾದರಿ ಎಂದು ಕಂಪನಿ ಹೇಳಿಕೊಂಡಿದೆ. 2ನೇ ಮಹಾಯುದ್ಧದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಆರ್‌ಇ/ಡ ಬ್ಲೂಡಿ 125 ಫ್ಲೈಯಿಂಗ್‌ ಪ್ಲೀ ಬೈಕ್‌ಗಳು ಭಾರೀ ಜನ ಪ್ರಿಯತೆಗಳಿಸಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next