Advertisement
ಬದಲಾವಣೆ ಏನು?ಇನ್ನು ಬುಲೆಟ್ ಬೈಕ್ ಗಳಲ್ಲಿ ಸರ್ವಿಸ್ ಕಿಲೋಮೀಟರ್ 10 ಸಾವಿರ ಇರಲಿದೆ. ಸದ್ಯ 4 ಸಾವಿರಕ್ಕೊಮ್ಮೆ ಆಯಿಲ್ ಚೇಂಜ್ ಮಾಡುತ್ತಿದ್ದರೆ, ಇನ್ನು 10 ಸಾವಿರ ಕಿ.ಮೀ.ಗೆ ಒಂದು ಬಾರಿ ಆಯಿಲ್ ಚೇಂಜ್ ಮಾಡಿದರೆ ಸಾಕಾಗುತ್ತದೆ. ಇದಕ್ಕಾಗಿ ರಾಯಲ್ ಎನ್ ಫೀಲ್ಡ್ ಹೊಸ ಮಾದರಿಯ ಸೆಮಿ ಸಿಂಥೆಟಿಕ್ ಆಯಿಲ್ ಅನ್ನು ತನ್ನ ಬೈಕ್ ಗಳ ಎಂಜಿನ್ ನಲ್ಲಿ ಬಳಸಲು ಉದ್ದೇಶಿಸಿದೆ. ಇದರೊಂದಿಗೆ ಸರ್ವೀಸ್ ಸಮಯವನ್ನು ಈಗಿನ 3 ತಿಂಗಳು ಅಥವಾ 3/4 ಸಾವಿರ ಕಿ.ಮೀ.ಗೆ ಬದಲಾಗಿ 6 ತಿಂಗಳು ಅಥವಾ 5 ಸಾವಿರ ಕಿ.ಮೀ.ಗೆ ಒಂದು ಬಾರಿ ಮಾಡಿದರೆ ಸಾಕು. ಇದರಿಂದ ಶೇ.40ರಷ್ಟು ಹಣ ಉಳಿತಾಯವಾಗಲಿದೆ ಎಂದು ಎನ್ ಫೀಲ್ಡ್ ಕಂಪೆನಿ ಹೇಳಿಕೊಂಡಿದೆ.