ಬೆಂಗಳೂರು: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಯಾವ 4 ಮಂದಿ ಆಟಗಾರ ರನ್ನು ಉಳಿಸಿಕೊಳ್ಳುವುದು ಎಂಬುದು ಎಲ್ಲ ಫ್ರಾಂಚೈಸಿಗಳ ಪಾಲಿಗೂ ದೊಡ್ಡ ಸವಾಲಾಗಿದೆ.
ಆರ್ಸಿಬಿ ವಿಷಯಕ್ಕೆ ಬರುವುದಾದರೆ, ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ತಂಡದಲ್ಲಿ ಉಳಿದುಕೊಳ್ಳುವುದು ಬಹುತೇಕ ಖಚಿತ.
ಉಳಿದೆರಡು ಸ್ಥಾನಗಳಿಗೆ ನಾಲ್ವರ ಪೈಪೋಟಿ ಇದೆ. ಇವರೆಂದರೆ ದೇವದತ್ತ ಪಡಿಕ್ಕಲ್, ಯಜುವೇಂದ್ರ ಚಹಲ್, ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್. ಈ ನಾಲ್ವರೂ ಆರ್ಸಿಬಿಯ ಪ್ರಮುಖ ಆಟಗಾರರಾಗಿದ್ದಾರೆ. ಹೀಗಾಗಿ ಆಯ್ಕೆ ಬಹಳ ಜಟಿಲಗೊಂಡಿದೆ.
ಹಾಗೆಯೇ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿರುವುದರಿಂದ ಆರ್ಸಿಬಿಗೆ ಹೊಸ ಕ್ಯಾಪ್ಟನ್ ಆಯ್ಕೆಯೂ ನಡೆಯಬೇಕಿದೆ.
ಇದನ್ನೂ ಓದಿ:ಒಂದೇ ದಿನದಲ್ಲಿ ಕೇಸ್ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು
ಜತೆಗೆ ಇತ್ತೀಚೆಗೆ ಲೀಗ್ ಕ್ರಿಕೆಟಿಗೂ ಗುಡ್ಬೈ ಹೇಳಿದ ಎಬಿ ಡಿ ವಿಲಿಯರ್ ಸ್ಥಾನಕ್ಕೆ ಸಮರ್ಥ ಆಟಗಾರನೊಬ್ಬನನ್ನೂ ಸೇರಿಸಿಕೊಳ್ಳಬೇಕಿದೆ.
ಹೀಗಾಗಿ ಉಳಿದೆಲ್ಲ ಫ್ರಾಂಚೈಸಿಗಳಿಗಿಂತ ಹೆಚ್ಚಿನ ಸವಾಲು ಆರ್ಸಿಬಿ ಮುಂದಿದೆ ಎನ್ನಲಡ್ಡಿಯಿಲ್ಲ.