Advertisement

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

01:42 AM May 23, 2024 | Team Udayavani |

ಅಹ್ಮದಾಬಾದ್‌: ಆರ್‌ಸಿಬಿಯ ಮತ್ತೊಂದು ಕಪ್‌ ಗೆಲವಿನ ಕನಸು ಛಿದ್ರಗೊಂಡಿದೆ. ಲೀಗ್‌ ಹಂತದಲ್ಲಿ ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಸಂಭ್ರಮದಲ್ಲಿದ್ದ ಬೆಂಗಳೂರು ತಂಡ ಬುಧವಾರದ ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ 4 ವಿಕೆಟ್‌ಗಳಿಂದ ಮಂಡಿಯೂರಿ ಕೂಟದಿಂದ ನಿರ್ಗಮಿಸಿತು. ಶುಕ್ರವಾರದ ದ್ವಿತೀಯ ಕ್ವಾಲಿಫೈಯರ್‌ ಪಂದ್ಯದಲ್ಲಿ ಹೈದರಾಬಾದ್‌-ರಾಜಸ್ಥಾನ್‌ ಮುಖಾಮುಖಿ ಆಗಲಿವೆ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ 8 ವಿಕೆಟಿಗೆ 172 ರನ್‌ ಗಳಿಸಿತು. ರಾಜಸ್ಥಾನ್‌ 19 ಓವರ್‌ಗಳಲ್ಲಿ 6 ವಿಕೆಟಿಗೆ 174 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ರಾಜಸ್ಥಾನ್‌ ಚೇಸಿಂಗ್‌ ಬಿರುಸಿನಿಂದಲೇ ಕೂಡಿತ್ತು. ಜೈಸ್ವಾಲ್‌ (45)-ಕ್ಯಾಡ್‌ಮೋರ್‌ (20) 46 ರನ್‌ ಜತೆಯಾಟ ನಿಭಾಯಿಸಿದರು. ಜೈಸ್ವಾಲ್‌-ಸ್ಯಾಮ್ಸನ್‌ ಜತೆಯಾಟದಲ್ಲಿ 35 ರನ್‌ ಒಟ್ಟುಗೂಡಿತು. 112ಕ್ಕೆ 4 ವಿಕೆಟ್‌ ಬಿದ್ದಾಗ ಪಂದ್ಯ ಕುತೂಹಲ ಘಟ್ಟ ತಲುಪಿತು. ಆದರೆ ಪರಾಗ್‌-ಹೆಟ್‌ಮೈರ್‌ ಸಿಡಿದು ನಿಂತು 45 ರನ್‌ ಜತೆಯಾಟ ನಿಭಾಯಿಸಿದರು.ಆರ್‌ಸಿಬಿ ಆಸೆಯೆಲ್ಲ ನೆಲಸಮವಾಯಿತು.

ಆರ್‌ಸಿಬಿ ನಿಧಾನ ಆರಂಭ
ಆರ್‌ಸಿಬಿ ಆರಂಭ ನಿಧಾನ ಗತಿಯಿಂದ ಕೂಡಿತ್ತು. ಬೌಲ್ಟ್ ಎಸೆತಗಳು ಆರಂಭದಲ್ಲೇ ಭಾರೀ ಸ್ವಿಂಗ್‌ ಆಗುತ್ತಿದ್ದವು. ಹೀಗಾಗಿ ರನ್‌ ಗಳಿಕೆ, ದೊಡ್ಡ ಹೊಡೆತ ಸುಲಭವಾಗಿರಲಿಲ್ಲ. ಕೊಹ್ಲಿ-ಫಾ ಡು ಪ್ಲೆಸಿಸ್‌ ಬಹಳ ಎಚ್ಚರಿಕೆಯಿಂದ ಆಡುತ್ತ 4.4 ಓವರ್‌ಗಳನ್ನು ನಿಭಾಯಿಸಿದರು. 37 ರನ್‌ ಒಟ್ಟುಗೂಡಿತು. ಆಗ ರೋವ¾ನ್‌ ಪೊವೆಲ್‌ ಪಡೆದ ಅದ್ಭುತ ಕ್ಯಾಚ್‌ಗೆ ಡು ಪ್ಲೆಸಿಸ್‌ (17) ವಿಕೆಟ್‌ ಉರುಳಿತು. ಬೌಲ್ಟ್ ಮೊದಲ ಯಶಸ್ಸು ತಂದಿತ್ತರು.

ಕೊಹ್ಲಿ 8 ಸಾವಿರ ರನ್‌
ಇನ್ನೊಂದು ಕಡೆ ಕ್ರೀಸ್‌ ಆಕ್ರಮಿಸಿ ಕೊಂಡಿದ್ದ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ 8 ಸಾವಿರ ರನ್‌ ಬಾರಿಸಿದ ಮೊದಲ ಕ್ರಿಕೆಟಿಗನೆಂಬ ದಾಖಲೆಗೆ ಪಾತ್ರರಾದರು. ಇದು ಅವರ 252ನೇ ಪಂದ್ಯದ 244ನೇ ಇನ್ನಿಂಗ್ಸ್‌. ಈ ಎಲ್ಲ ರನ್‌ ಒಂದೇ ತಂಡದ ಪರವಾಗಿ ಬಂದದ್ದು ಕೂಡ ದಾಖಲೆ. ಅನಂತರದ ಸ್ಥಾನದಲ್ಲಿರುವ ಶಿಖರ್‌ ಧವನ್‌ 6,769 ರನ್‌ ಮಾಡಿದ್ದಾರೆ. ರೋಹಿತ್‌ ಶರ್ಮ 3ನೇ ಸ್ಥಾನದಲ್ಲಿದ್ದಾರೆ (6,628 ರನ್‌).

Advertisement

ಪವರ್‌ ಪ್ಲೇಯಲ್ಲಿ ಒಂದು ವಿಕೆಟಿಗೆ ಭರ್ತಿ 50 ರನ್‌ ಮಾಡಿದ ಆರ್‌ಸಿಬಿ, 56 ರನ್‌ ಆದಾಗ ಕೊಹ್ಲಿ ವಿಕೆಟ್‌ ಕಳೆದುಕೊಂಡಿತು. ಕೊಹ್ಲಿ 24 ಎಸೆತಗಳಿಂದ 33 ರನ್‌ (3 ಬೌಂಡರಿ, 1 ಸಿಕ್ಸರ್‌) ಮಾಡಿ ಚಹಲ್‌ ಅವರ ಮೊದಲ ಓವರ್‌ನಲ್ಲೇ ಔಟಾದರು. ಇದರೊಂದಿಗೆ ಚಹಲ್‌ ರಾಜಸ್ಥಾನ್‌ ಪರ ಸರ್ವಾಧಿಕ 66 ವಿಕೆಟ್‌ ಉರುಳಿಸಿದ ಸಾಧನೆಗೈದರು. ಸಿದ್ಧಾರ್ಥ ತ್ರಿವೇದಿ 65 ವಿಕೆಟ್‌ ಕೆಡವಿದ್ದರು.

ಕ್ಯಾಮರಾನ್‌ ಗ್ರೀನ್‌ ಮತ್ತು ರಜತ್‌ ಪಾಟಿದಾರ್‌ ಕೂಡ ರಾಜಸ್ಥಾನ್‌ ಬೌಲಿಂಗ್‌ ದಾಳಿಯನ್ನು ಎಚ್ಚರಿಕೆಯಿಂದ ನಿಭಾಯಿಸತೊಡಗಿದರು. ಅರ್ಧ ಹಾದಿ ಕ್ರಮಿಸುವಾಗ ಆರ್‌ಸಿಬಿ 2 ವಿಕೆಟಿಗೆ 76 ರನ್‌ ಮಾಡಿತ್ತು.
13ನೇ ಓವರ್‌ನಲ್ಲಿ ಅಶ್ವಿ‌ನ್‌ ಆರ್‌.ಸಿಬಿಗೆ ಅವಳಿ ಆಘಾತವಿಕ್ಕಿದರು. ಸತತ ಎಸೆತಗಳಲ್ಲಿ ಗ್ರೀನ್‌ ಮತ್ತು ಮ್ಯಾಕ್ಸ್‌
ವೆಲ್‌ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ಗ್ರೀನ್‌ ಗಳಿಕೆ 27 ರನ್‌.

ಮ್ಯಾಕ್ಸ್‌ವೆಲ್‌ 18 ಸೊನ್ನೆ!
ನಿರ್ಣಾಯಕ ಪಂದ್ಯದಲ್ಲೂ ಬೇಜವಾ ಬ್ದಾರಿಯಿಂದ ಆಡಿದ ಮ್ಯಾಕ್ಸ್‌ವೆಲ್‌ ಗೋಲ್ಡನ್‌ ಡಕ್‌ ಮೂಲಕ ಆರ್‌ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾದರು. ಇದರೊಂದಿಗೆ ಐಪಿಎಲ್‌ನಲ್ಲಿ ಅತ್ಯಧಿಕ 18 ಸೊನ್ನೆ ಸುತ್ತಿದ ದಿನೇಶ್‌ ಕಾರ್ತಿಕ್‌ ದಾಖಲೆಯನ್ನು ಸರಿದೂಗಿಸಿದರು. ಇದರಲ್ಲಿ 4 ಸೊನ್ನೆ ಈ ಐಪಿಎಲ್‌ನಲ್ಲೇ ಬಂದಿದೆ.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಸಿ ಫೆರೀರ ಬಿ ಚಹಲ್‌ 33
ಫಾ ಡು ಪ್ಲೆಸಿಸ್‌ ಸಿ ಪೊವೆಲ್‌ ಬಿ ಬೌಲ್ಟ್ 17
ಕ್ಯಾಮರಾನ್‌ ಗ್ರೀನ್‌ ಸಿ ಪೊವೆಲ್‌ ಬಿ ಅಶ್ವಿ‌ನ್‌ 27
ರಜತ್‌ ಪಾಟಿದಾರ್‌ ಸಿ ಪರಾಗ್‌ ಬಿ ಆವೇಶ್‌ 34
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಜುರೆಲ್‌ ಬಿ ಅಶ್ವಿ‌ನ್‌ 0
ಎಂ. ಲೊನ್ರೋರ್‌ ಸಿ ಪೊವೆಲ್‌ ಬಿ ಅವೇಶ್‌ 32
ದಿನೇಶ್‌ ಕಾರ್ತಿಕ್‌ ಸಿ ಜೈಸ್ವಾಲ್‌ ಬಿ ಆವೇಶ್‌ 11
ಸ್ವಪ್ನಿಲ್‌ ಸಿಂಗ್‌ ಔಟಾಗದೆ 9
ಕಣ್‌ì ಶರ್ಮ ಸಿ ಪೊವೆಲ್‌ ಬಿ ಸಂದೀಪ್‌ 5
ಇತರ 4
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 172
ವಿಕೆಟ್‌ ಪತನ: 1-37, 2-56, 3-97, 4-97, 5-122, 6-154, 7-159, 8-172.
ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 4-0-16-1
ಸಂದೀಪ್‌ ಶರ್ಮ 4-0-48-1
ಆವೇಶ್‌ ಖಾನ್‌ 4-0-44-3
ಆರ್‌. ಅಶ್ವಿ‌ನ್‌ 4-0-19-2
ಯಜುವೇಂದ್ರ ಚಹಲ್‌ 4-0-43-1
ರಾಜಸ್ಥಾನ್‌ ರಾಯಲ್ಸ್‌
ಯಶಸ್ವಿ ಜೈಸ್ವಾಲ್‌ ಸಿ ಕಾರ್ತಿಕ್‌ ಬಿ ಗ್ರೀನ್‌ 45
ಟಾಮ್‌ ಕ್ಯಾಡ್‌ಮೋರ್‌ ಬಿ ಫ‌ರ್ಗ್ಯುಸನ್‌ 20
ಸಂಜು ಸ್ಯಾಮ್ಸನ್‌ ಸ್ಟಂಪ್ಡ್ ಕಾರ್ತಿಕ್‌ ಬಿ ಕಣ್‌ì 17
ರಿಯಾನ್‌ ಪರಾಗ್‌ ಬಿ ಸಿರಾಜ್‌ 36
ಧ್ರುವ ಜುರೆಲ್‌ ರನೌಟ್‌ 8
ಶಿಮ್ರನ್‌ ಹೆಟ್‌ಮೈರ್‌ ಸಿ ಡು ಪ್ಲೆಸಿಸ್‌ ಬಿ ಸಿರಾಜ್‌ 26
ರೋವ¾ನ್‌ ಪೊವೆಲ್‌ ಔಟಾಗದೆ 16
ಆರ್‌. ಅಶ್ವಿ‌ನ್‌ ಔಟಾಗದೆ 0
ಇತರ 6
ಒಟ್ಟು (19 ಓವರ್‌ಗಳಲ್ಲಿ 6 ವಿಕೆಟಿಗೆ) 174
ವಿಕೆಟ್‌ ಪತನ: 1-46, 2-81, 3-86, 4-112, 5-157, 6-160.
ಬೌಲಿಂಗ್‌:
ಸ್ವಪ್ನಿಲ್‌ ಸಿಂಗ್‌ 2-0-19-0
ಮೊಹಮ್ಮದ್‌ ಸಿರಾಜ್‌ 4-0-33-2
ಯಶ್‌ ದಯಾಳ್‌ 3-0-37-0
ಲಾಕಿ ಫ‌ರ್ಗ್ಯುಸನ್‌ 4-0-37-1
ಕಣ್‌ì ಶರ್ಮ 2-0-19-1
ಕ್ಯಾಮರಾನ್‌ ಗ್ರೀನ್‌ 4-0-28-1
ಪಂದ್ಯಶ್ರೇಷ್ಠ: ಆರ್‌. ಅಶ್ವಿ‌ನ್‌

Advertisement

Udayavani is now on Telegram. Click here to join our channel and stay updated with the latest news.

Next