Advertisement

ರಾಯಲ್ಸ್‌ ಗೆ ರಾಯಲ್‌ ಚಾಲೆಂಜ್‌

10:44 PM Sep 28, 2021 | Team Udayavani |

ದುಬಾೖ: ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ಸತತ ಎರಡನೇ ಸಲ ಉರುಳಿಸಿದ ಸಂಭ್ರಮದಲ್ಲಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ಬುಧವಾರ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸೆಣಸಲಿದೆ.

Advertisement

ಜತೆಗೆ ಸಂಜು ಸ್ಯಾಮ್ಸನ್‌ ಬಳಗದೆದುರು ಮೊದಲ ಸುತ್ತಿನ ಪಂದ್ಯವನ್ನು 10 ವಿಕೆಟ್‌ಗಳಿಂದ ಭರ್ಜರಿಯಾಗಿ ಜಯಿಸಿದ ಆತ್ಮವಿಶ್ವಾಸವೂ ಕೊಹ್ಲಿ ಬಳಗದಲ್ಲಿ ತುಂಬಿ ತುಳುಕುತ್ತಿದೆ.

10 ಪಂದ್ಯಗಳಿಂದ 12 ಅಂಕ ಸಂಪಾದಿಸಿರುವ ಆರ್‌ಸಿಬಿ, ರಾಜಸ್ಥಾನ್‌ಗೆ ಮತ್ತೂಂದು ಆಘಾತವಿಕ್ಕಿದರೆ ಪ್ಲೇ-ಆಫ್ ಪ್ರವೇಶದ ಸಾಧ್ಯತೆಯನ್ನು ಹೆಚ್ಚಿಸಿ ಕೊಳ್ಳಲಿದೆ. ಹಾಗೆಯೇ ರಾಜಸ್ಥಾನ್‌ ಸೋತರೆ ಅದರ ಮುಂದಿನ ಹಾದಿ ಕಠಿನ ಗೊಳ್ಳಲಿದೆ. ಹೀಗಾಗಿ 10 ಪಂದ್ಯಗಳಿಂದ 8 ಅಂಕವನ್ನಷ್ಟೇ ಹೊಂದಿರುವ ಸ್ಯಾಮ್ಸನ್‌ ಪಡೆಯ ಪಾಲಿಗೆ ಇದು ನಿರ್ಣಾಯಕ ಪಂದ್ಯವಾಗಿದೆ.

ಮುಂಬೈ ವಿರುದ್ಧ ಜೈ
ಯುಎಇ ಆವೃತ್ತಿಯಲ್ಲಿ ಆರ್‌ಸಿಬಿ ಆರಂಭ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಕೆಕೆ ಆರ್‌, ಚೆನ್ನೈ ವಿರುದ್ಧ ಸೋತು ಹೈರಾಣಾಗಿತ್ತು. ಕೋಲ್ಕತಾ ವಿರುದ್ಧವಂತೂ 92ಕ್ಕೆ ಕುಸಿದಾಗ ಎಲ್ಲ ದಿಕ್ಕುಗಳಿಂದಲೂ ಟೀಕೆ ಎದುರಿಸಬೇಕಾಯಿತು. ಆದರೆ ಮುಂಬೈಗೆ ಬಲವಾದ ಏಟು ನೀಡುವ ಮೂಲಕ ಬೆಂಗಳೂರು ತಂಡ ಟ್ರ್ಯಾಕ್‌ ಏರಿದೆ.

ಸತತ 2 ಅರ್ಧ ಶತಕ ಬಾರಿಸಿರುವ ನಾಯಕ ವಿರಾಟ್‌ ಕೊಹ್ಲಿ, ಅವರ ಜತೆಗಾರ ಪಡಿಕ್ಕಲ್‌, ಆಸ್ಟ್ರೇಲಿಯದ ಬಿಗ್‌ ಹಿಟ್ಟರ್‌ ಮ್ಯಾಕ್ಸ್‌ವೆಲ್‌, ಕೀಪರ್‌ ಶ್ರೀಕರ್‌ ಭರತ್‌ ಉತ್ತಮ ಫಾರ್ಮ್ನಲ್ಲಿದ್ದಾರೆ. ಆದರೆ ಸೌತ್‌ ಆಫ್ರಿಕನ್‌ ಲೆಜೆಂಡ್‌ ಡಿವಿಲಿಯರ್ ಮಾತ್ರ ಸತತ ವೈಫ‌ಲ್ಯ ಅನುಭವಿಸಿರುವುದು ಚಿಂತೆಯ ಸಂಗತಿಯಾಗಿದೆ. 3 ಪಂದ್ಯಗಳಲ್ಲಿ ಅವರು ಗಳಿಸಿದ್ದು 0, 12 ಮತ್ತು 11 ರನ್‌ ಮಾತ್ರ. ಆದರೂ ಎಬಿಡಿ ಇರುವಿಕೆ ತಂಡಕ್ಕೊಂದು ನೈತಿಕ ಶಕ್ತಿ ಎಂಬುದರಲ್ಲಿ ಅನುಮಾನವಿಲ್ಲ.

Advertisement

ಇದನ್ನೂ ಓದಿ:ಪಾಕಿಸ್ಥಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಂಜಮಾಮ್‌ಗೆ ಹೃದಯಾಘಾತ

ಬೌಲಿಂಗ್‌ ವಿಭಾಗದಲ್ಲಿ ಹ್ಯಾಟ್ರಿಕ್‌ ಹೀರೋ ಹರ್ಷಲ್‌ ಪಟೇಲ್‌ ಆರ್‌ಸಿಬಿಯ ಪ್ರಧಾನ ಅಸ್ತ್ರವಾಗಿದ್ದಾರೆ. ಚಹಲ್‌ ಕೂಡ ಲಯದಲ್ಲಿದ್ದಾರೆ. ಆದರೆ ಕಿವೀಸ್‌ ವೇಗಿ ಕೈಲ್‌ ಜಾಮೀಸನ್‌ ಇಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ವಿಕೆಟ್‌ ಕೀಳದಿರುವುದು ಗಮನಿಸಬೇಕಾದ ಸಂಗತಿ.

ಸಂಜು ಹೋರಾಟ
ರಾಜಸ್ಥಾನ್‌ ಪರ ಸಂಜು ಸ್ಯಾಮ್ಸನ್‌, ಯಶಸ್ವಿ ಜೈಸ್ವಾಲ್‌ ಹೊರತುಪಡಿಸಿದರೆ ಉಳಿದವರದು ಘೋರ ಬ್ಯಾಟಿಂಗ್‌ ವೈಫ‌ಲ್ಯ. ಆದರೆ ಬೌಲಿಂಗ್‌ ವಿಭಾಗದಲ್ಲಿ ವೆರೈಟಿ ಇದೆ. ಪಂಜಾಬ್‌ ವಿರುದ್ಧ 2 ರನ್ನಿನಿಂದ ಗೆದ್ದ ಬಳಿಕ ಡೆಲ್ಲಿ ಮತ್ತು ಹೈದರಾಬಾದ್‌ ವಿರುದ್ಧ ಎಡವಿದ ರಾಜಸ್ಥಾನ್‌, ಕೊಹ್ಲಿ ಪಡೆಯೆದರು ಎದ್ದು ನಿಲ್ಲುವುದು ಸುಲಭವಲ್ಲ. ಮುಂಬಯಿಯಲ್ಲಿ ಆಡಲಾದ ಫ‌ಸ್ಟ್‌ ರೌಂಡ್‌ ಮ್ಯಾಚ್‌ನಲ್ಲಿ ಆರ್‌ಸಿಬಿ 10 ವಿಕೆಟ್‌ಗಳಿಂದ ರಾಜಸ್ಥಾನವನ್ನು ಕೆಡವಿತ್ತು. ರಾಜಸ್ಥಾನ್‌ 9ಕ್ಕೆ 177 ರನ್‌ ಗಳಿಸಿದರೆ, ಆರ್‌ಸಿಬಿ ನೋಲಾಸ್‌ 181 ರನ್‌ ಬಾರಿಸಿತ್ತು. ಪಡಿಕ್ಕಲ್‌ 101, ಕೊಹ್ಲಿ 72 ರನ್‌ ಮಾಡಿ ದೊಡ್ಡ ಗೆಲುವು ತಂದಿತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next