Advertisement

ಪ್ರಿನ್ಸ್‌ ಹ್ಯಾರಿ- ಮೇಘನ್‌ ದಂಪತಿಗೆ ಸುಪುತ್ರ ಸಂಭ್ರಮ

06:24 AM May 07, 2019 | Team Udayavani |

ಲಂಡನ್‌: ಕಳೆದ ವರ್ಷ ವಿವಾಹವಾಗಿದ್ದ ಸಸ್ಸೆಕ್ಸ್‌ ಆಫ್ ಡ್ಯೂಕ್‌ನ ರಾಜಕುಮಾರ ಹ್ಯಾರಿ (ಪ್ರಿನ್ಸ್‌ ಹ್ಯಾರಿ) ಮತ್ತು ಮೇಘನ್‌ ಮಾರ್ಕೆಲ್ ದಂಪತಿಗೆ ಸೋಮವಾರ ಗಂಡು ಮಗು ಜನಿಸಿದೆ. ಸೋಮವಾರ ಪ್ರಸೂತಿ ತಜ್ಞರು ಸಸ್ಸೆಕ್ಸ್‌ ಅರಮನೆಗೆ ಧಾವಿಸಿ ಬಂದು ಪ್ರಸೂತಿಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಿನ್ಸ್‌ ಹ್ಯಾರಿ ಹಾಜರಿದ್ದರು. ಮಗುವಿನ ತೂಕ 3.2 ಕೆ.ಜಿ.ಯಷ್ಟಿದ್ದು, ತಾಯಿ – ಮಗು ಆರೋಗ್ಯವಾಗಿದ್ದಾರೆ ಎಂದು ಅರಮನೆಯ ಮೂಲಗಳು ತಿಳಿಸಿದೆ. ಬ್ರಿಟನ್‌ ರಾಜಮನೆತನದ ಸಿಂಹಾಸನಾರೂಢನಾಗುವ ವಾರಸುದಾರರಲ್ಲಿ ಈ ಮಗು 7ನೇ ಸ್ಥಾನದಲ್ಲಿದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next